ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA Pradeep Eshwar: ಫಾರಂ-53, 57ರ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಕಾನೂನಿನಂತೆ ಇತ್ಯರ್ಥಪಡಿಸಲಾಗುವುದು : ಶಾಸಕ ಪ್ರದೀಪ್ ಈಶ್ವರ್

ಸುಮಾರು 15 ವರ್ಷಗಳಿಂದ ಬಗರ್ ಹುಕುಂ ಸಮಿತಿ ಸರಿಯಾದ ರೀತಿಯಲ್ಲಿ ಕಾರ್ಯ ರೂಪಕ್ಕೆ ಬಂದಿರಲಿಲ್ಲ. ಹೊಸದಾಗಿ ಬಗರ್ ಹುಕುಂ ಸಮಿತಿ ರಚಿಸಿದ್ದು ಅಧ್ಯಕ್ಷನಾಗಿ ನೇಮಕ ಆಗಿರುವು ದರಿಂದ ಇಂದು ಪ್ರಥಮ ಸಭೆಯನ್ನು ಸಮಿತಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ನಡೆಸ ಲಾಗಿದೆ. ಮಾಜಿ ಶಾಸಕ ಕೆ.ಪಿ.ಬಚ್ಚಗೌಡರು ಇದ್ದಾಗ ಫಾರಂ ನಂಬರ್ 50 ಮತ್ತು 53 ಅರ್ಜಿಗಳನ್ನ ಮುಂಜೂರು ಮಾಡಲಾಗಿತ್ತು

ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಕಾನೂನಿನಂತೆ ಇತ್ಯರ್ಥಪಡಿಸಲಾಗುವುದು

ವಿಧಾನ ಸಭಾ ಕ್ಷೇತ್ರದಲ್ಲಿ ಫಾರಂ  ೫೩ ರಲ್ಲಿ  ೨೭೯೨ ಅರ್ಜಿಗಳು ಸಲ್ಲಿಸಿದ್ದು , ಫಾರಂ ೫೭ ರಲ್ಲಿ  ೧೩೯೭೦ ಅರ್ಜಿಗಳು ಬಾಕಿ ಇವೆ. ಅರ್ಹ ರೈತರ ಅರ್ಜಿಗಳನ್ನು ಇತ್ಯರ್ಥಪಡಿಸಲು ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. -

Ashok Nayak
Ashok Nayak Dec 23, 2025 1:38 PM

ಚಿಕ್ಕಬಳ್ಳಾಪುರ: ವಿಧಾನ ಸಭಾ ಕ್ಷೇತ್ರದಲ್ಲಿ ಫಾರಂ  53ರಲ್ಲಿ  2792 ಅರ್ಜಿಗಳು ಸಲ್ಲಿಸಿದ್ದು , ಫಾರಂ 57ರಲ್ಲಿ 13970 ಅರ್ಜಿಗಳು ಬಾಕಿ ಇವೆ. ಅರ್ಹ ರೈತರ ಅರ್ಜಿಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ತಿಳಿಸಿದರು.

ನಗರದ ತಾಲ್ಲೂಕು ಕಚೇರಿಯ ತಹಸಿಲ್ದಾರ್‌ರ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಥಮ ಬಗರ್ ಹುಕುಂ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸುಮಾರು 15 ವರ್ಷಗಳಿಂದ ಬಗರ್ ಹುಕುಂ ಸಮಿತಿ ಸರಿಯಾದ ರೀತಿಯಲ್ಲಿ ಕಾರ್ಯ ರೂಪಕ್ಕೆ ಬಂದಿರಲಿಲ್ಲ. ಹೊಸದಾಗಿ ಬಗರ್ ಹುಕುಂ ಸಮಿತಿ ರಚಿಸಿದ್ದು ಅಧ್ಯಕ್ಷನಾಗಿ ನೇಮಕ ಆಗಿರುವು ದರಿಂದ ಇಂದು ಪ್ರಥಮ ಸಭೆಯನ್ನು ಸಮಿತಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ನಡೆಸ ಲಾಗಿದೆ. ಮಾಜಿ ಶಾಸಕ ಕೆ.ಪಿ.ಬಚ್ಚಗೌಡರು ಇದ್ದಾಗ ಫಾರಂ ನಂಬರ್ 50 ಮತ್ತು 53 ಅರ್ಜಿಗಳನ್ನ ಮುಂಜೂರು ಮಾಡಲಾಗಿತ್ತು. ತದನಂತರ ಇದೆ ಮೊದಲ ಬಾರಿಗೆ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿಗೆ ಮುಂದಾಗಿದ್ದೇವೆ ಎಂದರು.

ಇದನ್ನೂ ಓದಿ: MLA Pradeep Eshwar: 35.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮ ಸಂಜೀವಿನಿ ಕಟ್ಟಡ ಉದ್ಘಾಟಿಸಿದ ಶಾಸಕ ಪ್ರದೀಪ್ ಈಶ್ವರ್

ಅಕ್ರಮ ಸಕ್ರಮದಲ್ಲಿ ವ್ಯವಸಾಯಕ್ಕೆ ಎಂದು ಸಾಗುವಳಿ ಮಾಡುತ್ತಿರುವ ಸುಮಾರು 16 ಸಾವಿರಕ್ಕು ಹೆಚ್ಚು ರೈತರು ಫಾರಂ ನಂ 50 ಹಾಗೂ 53 ಹಾಗೂ 57 ರಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ಸಭೆಯ ಮುಂದಿಟ್ಟು ಆದಷ್ಟು ಬೇಗ ಅರ್ಹ ರೈತರ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.

50 ಮತ್ತು 53ರಲ್ಲಿ ಅರ್ಜಿ ಹಾಕಿಕೊಂಡಿರುವ ಎಸ್ಸಿ ಎಸ್ಟಿ ಜನರು ಒಂದು ವರ್ಷ ಅನುಭದಲ್ಲಿ ಇರಬೇಕು.  ಸಾಮಾನ್ಯ ವರ್ಗದವರು ಮೂರು ವರ್ಷ ಅನುಭವದಲ್ಲಿರಬೇಕು. ಅದು ಸರ್ಕಾರಿ ಜಮೀನಿಗೆ ಅನ್ವಯ ಆಗುತ್ತದೆ. ಫಾರಂ ನಂಬರ್ 57, ಕೇವಲ ಗೋಮಾಳ ಜಮೀನು ಆಗಿದ್ದರೆ ಮಾತ್ರ ಮಂಜೂರು ಮಾಡಬಹುದಾಗಿದೆ.

ಇದರಲ್ಲಿ ಕಸಬಾ ಹೋಬಳಿಯಲ್ಲಿ 634  ಅರ್ಜಿಗಳು ಫಾರಂ 53ರಲ್ಲಿ ಬಂದಿದೆ. ನಂದಿಹೋಬಳಿ ಯಲ್ಲಿ 1048 ಬಂದಿದೆ. ಮಂಡಿಕಲ್ಲುಹೋಬಳಿಯಲ್ಲಿ 548 ಬಂದಿದ್ದು, ಫಾರಂ 57 ನಲ್ಲಿ ಕಸಬಾ ಹೋಬಳಿಯಲ್ಲಿ 2909 ನಂದಿ ಹೋಬಳಿಯಲ್ಲಿ 3786 .ಮಂಡಿಕಲ್ಲು ಹೋಬಳಿಯಲ್ಲಿ 4819, ಮಂಚೆನಹಳ್ಳಿ ಫಾರಂ 53ರಲ್ಲಿ  512 ಮತ್ತು ಫಾರಂ 57. 2656 ಅರ್ಜಿ ಗಳು ಬಂದಿದೆ. ಫಾರಂ 53 ಮತ್ತು ಫಾರಂ 57 ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ಕೊಡಬೇಕು ಜಮೀನು ಕೊಡಬೇಕಾಗಿದೆ. ಆದಷ್ಟು ಬೇಗ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದೆ. ದಲ್ಲಾಳಿ  ಮಧ್ಯ ವರ್ತಿಗಳನ್ನು ನಂಬಿ ಮೋಸ ಹೋಗಬೇಡಿ ಎಂದು ರೈತರಿಗೆ ಮನವಿ ಮಾಡಿದರು.  

ಈ ವೇಳೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ರಶ್ಮಿ, ಮಂಚೇನಹಳ್ಳಿ ತಹಸೀಲ್ದಾರ್ ಪೂರ್ಣಿಮಾ ಹಾಗೂ ಆರ್.ಐಗಳು ವಿ.ಎಗಳು ಇದ್ದರು.

ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ:
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಪ್ರದೀಪ್ ಈಶ್ವರ್, ನನಗೆ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ, ಪಕ್ಷ ಏನು ಹೇಳುತ್ತೊ ಅದನ್ನು ಮಾಡುತ್ತೇನೆ. ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ಇದೆ. ಸಮುದಾಯ ಕೋಟ ಒಲಿದು ಬರಬಹುದು ಎಂಬ ಭರವಸೆ ಇದೆ.ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ. ಕೊಡದೆ ಇದ್ದರೂ ನಮ್ಮ ಸ್ನೇಹಿತರಿಗೆ  ಕೊಟ್ಟರು ನಾನು ಅವರ ಪ್ರಮಾಣ ವಚನಕ್ಕೆ ಹೋಗುತ್ತೇನೆ. ಚಿಕ್ಕಬಳ್ಳಾಪುರ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದೆ.  ಮೂವರು ಶಾಸಕರಲ್ಲಿ ( ಡಾ.ಎಂ.ಸಿ.ಸುಧಾಕರ್, ಎಸ್.ಎನ್.ಸುಬ್ಬಾರೆಡ್ಡಿ)  ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದರೆ ಜೊತೆಯಾಗಿ ಕೆಲಸ ಮಾಡುತ್ತೇವೆ. ಡಾ.ಎಂ.ಸಿ.ಸುಧಾಕರ್ ಅವರನ್ನೇ ಮುಂದುವರಿಸಿದರೆ, ಅವರಿಗೆ ನಾವು ಸಹಕಾರ ನೀಡುತ್ತೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.