ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ನೂತನ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಫೆ.1ಕ್ಕೆ ಚುನಾವಣೆ

13 ನಿರ್ದೇಶಕ ಸ್ಥಾನಗಳಿಗೆ ಅರ್ಹ ಅರ್ಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಬಿಜೆಪಿಯಿಂದ ಸಂಸದ ಡಾ.ಕೆ.ಸುಧಾಕರ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂಬ ಮಾತುಗಳಿದ್ದು, ಕಾಂಗ್ರೆಸ್‌ ನಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜೆಡಿಎಸ್‌ನಿಂದ ಜೆ.ಕೆ.ಕೃಷ್ಣಾರೆಡ್ಡಿ ಅಖಾಡಕ್ಕೆ ಇಳಿ ದಿದ್ದು ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗೆ ಕಾಂಗ್ರೆಸ್‌ನ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡರ ಮನೆಗೆ ಆರೋಗ್ಯ ವಿಚಾರಣೆಯ ನೆಪದಲ್ಲಿ ಭೇಟಿ ನೀಡಿರುವುದನ್ನು ಗಮನಿಸಬಹುದು

ಚಳಿಯಲ್ಲಿಯೂ ರಂಗೇರಿದೆ ಚುನಾವಣೆಯ ಬಿಸಿ

-

Ashok Nayak
Ashok Nayak Jan 11, 2026 11:09 PM

13 ಸ್ಥಾನ, 996 ಸಹಕಾರ ಸಂಘಗಳು 913 ಡೆಲಿಗೇಟ್ಸ್

ಮುನಿರಾಜು.ಎಂ.ಅರಿಕೆರೆ

ಚಿಕ್ಕಬಳ್ಳಾಪುರ : ಕೋಚಿಮುಲ್‌ನಿಂದ ಬೇರ್ಪಟ್ಟು ಸ್ವತಂತ್ರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟವಾಗಿ ಜನ್ಮತಾಳಿ ಇನ್ನೇನು ವರ್ಷದ ಮೇಲೆ ಕಳೆದರೂ ಕೂಡ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆದಿಲ್ಲ ಎಂಬ ಕೊರಗು ಹಾಲು ಉತ್ಪಾದಕ ಸಂಘಗಳಿಗೆ ಇತ್ತು.

ಇದನ್ನು ನನಸು ಮಾಡುವಂತೆ ಚುನಾವಣೆಗಿದ್ದ ಎಲ್ಲಾ ಅಡೆತಡೆ ನಿವಾರಣೆ ಆಗಿರುವ ಕಾರಣ ಫೆ-1 ಕ್ಕೆ ಚುನಾವಣೆ ಘೋಷಣೆ ನಡೆಯಲಿದ್ದು ಈ ಸಂಬಂಧ ನಡೆಯಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಚುಮುಲ್ ಆಡಳಿತಾಧಿಕಾರಿಗಳು ಮುಗಿಸಿದ್ದು ಫೆ.೧ ರಂದು ಚುನಾವಣೆ ನಡೆಯಲಿದೆ.  

ಚಿಮುಲ್‌ನ ಮೊದಲ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೆ ಮೂರು ರಾಷ್ಟ್ರೀಯ ಪಕ್ಷಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಕಸರತ್ತು ಪ್ರಾರಂಭವಾಗಿದೆ.

ಚಳಿಯ ನಡುವೆಯೂ ಚುನಾವಣೆ ಕಾವು ರಂಗೇರಿದ್ದು ಯಾರು ಅಭ್ಯರ್ಥಿಗಳಾಗುವರು, ಯಾರಿಲ್ಲ ಎಂಬ ಚರ್ಚೆ ಜೋರಾಗಿಯೇ ನಡೆದಿದ್ದು, ಸ್ಪರ್ಧಾಕಾಂಕ್ಷಿಗಳು ತೆರೆಮರೆಯಲ್ಲಿ ಟಿಕೆಟ್‌ಗಾಗಿ ಪ್ರಯತ್ನಗಳನ್ನು ನಡೆಸಿರುವ ಜತೆಗೆ ಮತದಾರರ ಮನೆಬಾಗಿಲಿಗೆ ಉಡುಗೊರೆ ತಲುಪಿಸುವ ಕೆಲಸ ಮೂರು ಪಕ್ಷಗಳಲ್ಲಿ ನಿರಂತರವಾಗಿ ನಡೆದಿದೆ. ಮೇಲಾಗಿ ನಂಬಿದವರು ಕೈಬಿಟ್ಟರೆ ಒಳೇಟು ಕೊಡುವ ಮತ್ತು ಬಂಡಾಯದ ಬಾವುಟ ಹಾರಿಸುವ ಬಗ್ಗೆಯೂ ಗುಸುಗುಸು ಶುರುವಾಗಿದೆ.

ಇದನ್ನೂ ಓದಿ: KMF Recruitment; ಸಹಕಾರಿ ಹಾಲು ಉತ್ಪಾದಕರ ಸಂಘದಲ್ಲಿ ನೇಮಕಾತಿ; 194 ಹುದ್ದೆಗಳ ಭರ್ತಿಗೆ ನಡೆಯಲಿದೆ ನೇಮಕಾತಿ

13 ನಿರ್ದೇಶಕ ಸ್ಥಾನಗಳಿಗೆ ಅರ್ಹ ಅರ್ಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಬಿಜೆಪಿಯಿಂದ ಸಂಸದ ಡಾ.ಕೆ.ಸುಧಾಕರ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂಬ ಮಾತುಗಳಿದ್ದು, ಕಾಂಗ್ರೆಸ್‌ ನಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜೆಡಿಎಸ್‌ನಿಂದ ಜೆ.ಕೆ.ಕೃಷ್ಣಾರೆಡ್ಡಿ ಅಖಾಡಕ್ಕೆ ಇಳಿದಿದ್ದು ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗೆ ಕಾಂಗ್ರೆಸ್‌ನ ಪಾಳೆಯದಲ್ಲಿ ಗುರುತಿಸಿ ಕೊಂಡಿರುವ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡರ ಮನೆಗೆ ಆರೋಗ್ಯ ವಿಚಾರಣೆಯ ನೆಪದಲ್ಲಿ ಭೇಟಿ ನೀಡಿರುವುದನ್ನು ಗಮನಿಸಬಹುದು.

ಈ ನಡುವೆ ಸಹಕಾರಿ ರಂಗದಲ್ಲಿ ಗುರುತಿಸಿಕೊಂಡು ಹತ್ತು ಹಲವು ವರ್ಷಗಳ ಕಾಲ ನಿರ್ದೇಶಕರಾಗಿ ಅಧ್ಯಕ್ಷರಾಗಿ ಅಧಿಕಾರದ ಸವಿಯುಂಡ ನಾಯಕರು ಕೂಡ ತಮ್ಮ ಬಲಾಬಲ ಪ್ರದರ್ಶನಕ್ಕೆ ಅಖಾಡ ವನ್ನು ಸಿದ್ಧಮಾಡಿಕೊಂಡಿದ್ದು ಶಾಸಕ, ಸಂಸದ ಮತ್ತು ಸಚಿವರ ಆಶೀರ್ವಾದಕ್ಕಾಗಿ ಕಾಯುತ್ತಿದ್ದು ಒಂದು ವೇಳೆ ಇಲ್ಲಿಂದ ಹಸಿರು ನಿಶಾನೆ ದೊರೆಯಲಿಲ್ಲ ಎಂದಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ನಿಲ್ಲಲೂ ಯೋಜನೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಚಿಮುಲ್ ಪಡಸಾಲೆಯಲ್ಲಿ ಸದ್ದು ಮಾಡುತ್ತಿವೆ.

ಸ್ಥಾನಬಲದ ಮಾಹಿತಿ

ಗೌರಿಬಿದನೂರು ಮಂಚೇನಹಳ್ಳಿ ಸೇರಿ 02 ಸ್ಥಾನಗಳಿದ್ದು 137 ಡೆಲಿಗೇಟ್ಸ್ ಹೊಂದಿದೆ. ಬಾಗೇಪಲ್ಲಿ ಚೇಳೂರು ಸೇರಿ-12ಸ್ಥಾನ 135 ಡೆಲಿಗೇಟ್ಸ್, ಗುಡಿಬಂಡೆ-0 1ಸ್ಥಾನ 61 ಡೆಲಿಗೇಟ್ಸ್, , ಚಿಕ್ಕಬಳ್ಳಾಪುರ-ಪೆರೇಸಂದ್ರ 02 ಸ್ಥಾನ, 165 ಡೆಲಿಗೇಟ್ಸ್, ಶಿಡ್ಲಘಟ್ಟ-ಜಂಗಮಕೋಟೆ 12 ಸ್ಥಾನ 152 ಡೆಲಿಗೇಟ್ಸ್, ಚಿಂತಾಮಣಿ-12 ಸ್ಥಾನ 147 ಡೇಲಿಗೇಟ್ಸ್, ಮಹಿಳಾ ಮೀಸಲು-2 ಸ್ಥಾನಗಳಿದ್ದು ಚಿಕ್ಕಬಳ್ಳಾಪುರ 59 ಡೆಲಿಗೇಟ್ಸ್, ಚಿಂತಾಮಣಿ 57 ಡೆಲಿಗೇಟ್ಸ್ ಕರಡು ಮತದಾರರ ಪಟ್ಟಿಯಂತೆ ಒಟ್ಟು 913 ಮಂದಿ ಡೆಲಿಗೇಟ್ಸ್ 13 ನಿರ್ದೇಶಕ ಸ್ಥಾನಗಳಿಗೆ ಫೆ-ರಂದು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಕಾಂಗ್ರೆಸ್‌ಗೆ ಪ್ರತಿಷ್ಠೆ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಪಾಲಿಗೆ ಇದೊಂದು ಪ್ರತಿಷ್ಠೆಯ ಚುನಾವಣೆಯಾಗಿದೆ. ಚಿಮುಲ್ ಆಡಳಿತ ಮಂಡಳಿಯ 13 ಚುನಾಯಿತ ನಿರ್ದೆಶಕ ಸ್ಥಾನಗಳಲ್ಲಿ 13ರಲ್ಲಿಯೂ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳುವ ಅಭಿಲಾಷೆಯಿದೆ. ಇದು ಅವರಂದುಕೊಂಡಷ್ಟು ಸುಲಭವಲ್ಲ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳುತ್ತಿವೆ. ಏಕೆಂದರೆ ಜೆಡಿಎಸ್ ಬಿಜೆಪಿ ಎನ್‌ಡಿಎ ಗುಂಪಿನಲ್ಲಿರುವುದು ನುಂಗಲಾರದ ತುತ್ತಾಗಿದೆ. ಮೇಲಾಗಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿಗಳಲ್ಲಿ ಸ್ವಪಕ್ಷದ ಶಾಸಕರ ಜತೆಗೆ, ಗೌರಿಬಿದನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಾಹ್ಯ ಬೆಂಬಲ ಕೊಟ್ಟಿರುವ ಪುಟ್ಟಸ್ವಾಮಿಗೌಡರಿದ್ದರೂ, ಎಂಎಲ್‌ಎ, ಎಂಪಿ ಚುನಾವಣೆಗಳಂತೆ ಪಕ್ಷದ ಚಿನ್ಹೆಗಳ ಮೇಲೆ ಈ ಚುನಾವಣೆ ನಡೆಯದ ಕಾರಣ ಆಡಳಿತಾರೂಢ ಪಕ್ಷಕ್ಕೆ ಇದು ಅಂದು ಕೊಂಡಷ್ಟು ಸುಲಭವೂ ಅಲ್ಲ, ಕಷ್ಟವೂ ಅಲ್ಲ ಎನ್ನಬಹುದು.

ಮೈತ್ರಿ ಹೊಡೆತ??
ಈವರೆಗಿನ ಚುನಾವಣೆಯ ಇತಿಹಾಸವನ್ನು ಅವಲೋಕಿಸಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತ್ರ ಸ್ಪರ್ಧೆಯನ್ನು ಕಾಣಬಹುದಿತ್ತು. ಆದರೆ 2024ರ ಲೋಕಸಭೆ ಚುನಾವಣೆ ನಂತರ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿಯೇರ್ಪಟ್ಟು ಎನ್‌ಡಿಎ ದೋಸ್ತಿಗಳಾಗಿವೆ.ಇದೇ ಕಾರಣ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹೆಚ್ಚಿನ ಶಾಸಕರಿದ್ದರೂ ಚಿಮುಲ್‌ನಲ್ಲಿ ಸುಲಭವಾಗಿ ಆಡಳಿತ ಚುಕ್ಕಾಣಿ ಹಿಡಿಯುವುದು ಕಷ್ಟವಾಗಬಹುದು.ಇದೇ ಮೊದಲ ಬಾರಿಗೆ ಚಿಮುಲ್‌ನಲ್ಲಿ 2 ಮಹಿಳಾ ಸ್ಥಾನಗಳು ಮೀಸಲಿಟ್ಟಿರುವುದು ಕೂಡ ಸಹಕಾರಿ ರಂಗದ ಜನಪರ ನಡೆಗೆ ಸಾಕ್ಷಿಯಾಗಿದೆ.

ಸಭೆಗಳ ಮೇಲೆ ಸಭೆಗಳು

ಮೂರು ಮಕ್ಷಗಳ ಮುಖಂಡರು ಚುಮುಲ್ ಅಧಿಕಾರದ ಮೇಲೆ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಫೆ.1 ಚುನಾವಣೆಗೆ ಬಿರುಸಿನಿಮದ ಕಸರತ್ತುಗಳು ನಡೆದಿದ್ದು ಎಲ್ಲಾ ತಾಲೂಕು ಗಳಲ್ಲಿ ಸಭೆಗಳ ಮೇಲೆ ಸಭೆಗಳನ್ನು ನಡೆಸಿ ಚುನಾವಣೆಯ ತಂತ್ರಗಳನ್ನು ಹಣೆಯುತ್ತಿದ್ದಾರೆ. ಆಮಿಷಗಳಿಗೆ ಒಳಗಾಗದ ಮತದಾರರ ಒಲವು ಯಾರತ್ತ ವಾಲಲಿದೆಯೋ, ಅವರಿಗೆ ಗೆಲುವಿನ ಬಾಗಿಲು ತರೆಯಲಿದೆ ಎನ್ನುವುದು ಮಾತ್ರö ಸತ್ಯವಾಗಿದ್ದು  ಅಭ್ಯರ್ಥಿಗಳ ಘೋಷಣೆ ಆಗುವವರೆಗೆ ಆಕಾಂಕ್ಷಿತರ ಎದೆಬಡಿತ ನಿಲ್ಲುವ ಸೂಚನೆ ಕಾಣುವುದಿಲ್ಲ ಎಂಬುದು ಮಾತ್ರ ಸತ್ಯ.

ಒಟ್ಟಾರೆ, ಜಿಲ್ಲೆಯಲ್ಲಿ ಚಿಮುಲ್‌ನಲ್ಲಿ 13 ಚುನಾಯಿತ ಪ್ರತಿನಿಧಿಗಳಿದ್ದು, 1 ಸರಕಾರದಿಂದ ನಾಮನಿರ್ದೇಶಿತರು, 4 ಅಫಿಷಿಯಲ್ ಬಾಡಿ ಒಟ್ಟು 18 ಸ್ಥಾನಗಳಿರಲಿದ್ದು, 996 ಹಾಲು ಉತ್ಪಾದಕ ಸಹಕಾರ ಸಂಘಗಳಿದ್ದು ಇದರಲ್ಲಿ 125 ಮಹಿಳಾ ಸಂಘಗಳಿವೆ. ಒಟ್ಟಾರೆ ಫೆ.1ರಂದು ನಡೆಯುವ ಚಿಮುಲ್ ಚುನಾವಣೆಯಲ್ಲಿ 913 ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಡೆಲಿಗೇಟ್ಸ್ಗಳಾಗಿ ಮತದಾನ ಚಲಾಯಿಸಲಿದ್ದಾರೆ.