ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಬೆಳೆ ವಿಮಾ ಯೋಜನೆ ನೋಂದಣಿಗೆ ಒತ್ತು: ಜಿಲ್ಲಾಧಿಕಾರಿ ಜಿ.ಪ್ರಭು

ಭೂಮಿಯೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಕೆಲಸ ಮಾಡುವ ರೈತರಿಗೆ ಹಲವು ಯೋಜನೆ ಗಳನ್ನು ಸರ್ಕಾರ ಜಾರಿ ಮಾಡುತ್ತಿದೆ. ಆ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೃಷಿ, ತೋಟ ಗಾರಿಕೆ, ರೇಷ್ಮೆ ಹಾಗೂ ಹೈನುಗಾರಿಕೆ ಇಲಾಖೆಗಳಲ್ಲಿ ಶಿಸ್ತಿನ ಕಾರ್ಯವೈಖರಿಯನ್ನು ಉತ್ತಮ ಪಡಿಸಲು ಆದ್ಯತೆ ನೀಡಲಾಗುವುದು.

ಬೆಳೆ ವಿಮಾ ಯೋಜನೆ ನೋಂದಣಿಗೆ ಒತ್ತು: ಜಿಲ್ಲಾಧಿಕಾರಿ ಜಿ.ಪ್ರಭು

ರೈತರ ಜೀವನಕ್ಕೆ ಭದ್ರತೆ ನೀಡುವಂತಹ ಬೆಳೆ ವಿಮಾ ಯೋಜನೆಗಳಲ್ಲಿ ಜಿಲ್ಲೆಯ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಜಿಲ್ಲಾಡಳಿತ ಒತ್ತು ನೀಡಲಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು. -

Ashok Nayak
Ashok Nayak Jan 8, 2026 10:12 PM

ಚಿಕ್ಕಬಳ್ಳಾಪುರ: ರೈತರ ಜೀವನಕ್ಕೆ ಭದ್ರತೆ ನೀಡುವಂತಹ ಬೆಳೆ ವಿಮಾ ಯೋಜನೆ(
Crop Insurance Scheme) ಗಳಲ್ಲಿ ಜಿಲ್ಲೆಯ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಜಿಲ್ಲಾಡಳಿತ ಒತ್ತು ನೀಡಲಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಹೀರೇಬಿದನೂರು ನೇತಾಜಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ, ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಹಾಗೂ ಸಿರಿಧಾನ್ಯದ ಪದಾರ್ಥಗಳ ಮಳಿಗೆಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೂಮಿಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುವ ರೈತರಿಗೆ ಹಲವು ಯೋಜನೆ ಗಳನ್ನು ಸರ್ಕಾರ ಜಾರಿ ಮಾಡುತ್ತಿದೆ. ಆ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಹೈನುಗಾರಿಕೆ ಇಲಾಖೆಗಳಲ್ಲಿ ಶಿಸ್ತಿನ ಕಾರ್ಯವೈಖರಿಯನ್ನು ಉತ್ತಮ ಪಡಿಸಲು ಆದ್ಯತೆ ನೀಡಲಾಗುವುದು. ಆ ಮೂಲಕ ಸದರಿ ಇಲಾಖೆಗಳ ಕಾರ್ಯಕ್ರಮ ಗಳನ್ನು ಪರಿಣಾಮಕಾರಿಯಾಗಿ ತಲುಪಿಸಿ  ನೇಗಿಲ ಯೋಗಿಗೆ ಹೆಚ್ಚು ಶಕ್ತಿಯನ್ನು ತುಂಬುವ ಕೆಲಸ ಜಿಲ್ಲೆಯಲ್ಲಿ ಆಗಲಿದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: Chikkaballapur News: 4 ಗುಣಗಳಿಗೆ ಮನ ಸೋತರೆ ಮಾನ ಸಮ್ಮಾನಗಳು ಹುಡುಕಿಕೊಂಡು ಬರಲಿವೆ : ಏಡುಕೊಂಡಲ ಶ್ರೀನಿವಾಸ್ ಅಭಿಮತ

ರೈತರಿಗೆ ಮುಖ್ಯವಾಗಿ ಬೆಳೆ ಬೆಳೆಯಲು ನೀರು ಬೇಕು. ಈಗಾಗಲೇ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳಾದ ಎತ್ತಿನಹೊಳೆ, ಎಚ್.ಎನ್. ವ್ಯಾಲಿ, ಕೇಸಿ ವ್ಯಾಲಿ ಹಾಗೂ ವೃಷಭಾವತಿ ಯೋಜನೆ ಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಪೂರಕವಾದ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಇತರ ಪೂರ್ವ ಸಿದ್ದತಾ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ (MLA KH Puttaswamy Gowda) ಮಾತನಾಡಿ, ಇವತ್ತಿನ ಅನಾರೋಗ್ಯಕ್ಕೆ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಮುಖ್ಯ ಕಾರಣವಾಗಿದ್ದು, ಆರೋಗ್ಯವೇ ಮಹಾಭಾಗ್ಯವಾಗಿದೆ. ಇತ್ತಿಚಿನ ದಿನಗಳಲ್ಲಿ ಮಧುಮೇಹ ಮತ್ತು ಹೃದಯ ರೋಗಗಳು ಸರ್ವೇ ಸಾಮಾನ್ಯವಾಗಿವೆ. ಅದಕ್ಕೆ ಕಾರಣ ನಾವು ತಿನ್ನುವ ಆಹಾರ ಧಾನ್ಯಗಳು. 50-60 ವರ್ಷಗಳ ಹಿಂದೆ ಬೆಳೆಯುತ್ತಿದ್ದ ಸಿರಿಧಾನ್ಯ ಆಹಾರ ಪದಾರ್ಥಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ಮಾಡಬೇಕಿದೆ. ಮಳೆ ಕೈ ಕೊಟ್ಟರು ಸಹ ಬೆಳೆಯುವ ಬೆಳೆಗಳು ಸಿರಿಧಾನ್ಯಗಳಾಗಿವೆ ಎಂದು ತಿಳಿಸಿ ಸಿರಿಧಾನ್ಯಗಳ ಬೆಳೆಯ ಪದ್ದತಿಯನ್ನು ಅಳವಡಿಸಿಕೊಳ್ಳಲು ರೈತರಲ್ಲಿ ಮನವಿ ಮಾಡಿದರು.

ಸಿರಿಧಾನ್ಯಗಳ ಬಗ್ಗೆ  ಸಾರ್ವಜನಿಕರಿಗೆ ತಿಳಿಸಲು ಇಂಥಹ ಕಾರ್ಯಕ್ರಮಗಳು ಇನ್ನಷ್ಟು ಜಿಲ್ಲೆಯಲ್ಲಿ ನಡೆಯಬೇಕಿದೆ. ಈ ಕೃಷಿ ಮೇಳದಲ್ಲಿ ಅನೇಕ ಕೃಷಿ ಉತ್ತೇಜಕ ಮಳಿಗೆಗಳು, ಸ್ವಸಹಾಯ ಹಾಗೂ ಸ್ವಯಂಸೇವಕ ಗುಂಪುಗಳಿಂದ ತೆರೆದಿರುವ ಮಳಿಗೆಗಳ ಕೃಷಿ, ತೋಟಗಾರಿಕೆ ಬೆಳೆಗಳ ಪ್ರದರ್ಶನ ಸಿರಿಧಾನ್ಯ ಮೇಳ ಕಾರ್ಯಕ್ರಮಕ್ಕೆ ಮೆರುಗು ತಂದಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಅಬೀದ್ ಎಸ್.ಎಸ್ ಅವರು ಮಾತನಾಡಿ ಜಗತ್ತಿನಾದ್ಯಂತ ಸಾವಿರಕ್ಕೂ ಮೇಲ್ಪಟ್ಟು ಬೇರೆ ಬೇರೆ ರೀತಿಯ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಸಿರಿಧಾನ್ಯದ ಬೆಳೆಗಳನ್ನು ಬೆಳೆಯುವ ದೇಶಗಳಲ್ಲಿ ನಮ್ಮ ದೇಶ ಅಗ್ರಸ್ಥಾನದಲ್ಲಿದೆ. ಸಿರಿಧ್ಯಾನಗಳ ಕೃಷಿಯು ಕೇವಲ ಸಾಂಪ್ರ ದಾಯಿಕ ಕೃಷಿಯಲ್ಲ, ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿಯಾಗಿದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ರೈತರು ಒಂದು ಪ್ರದೇಶದಲ್ಲಿ ಒಂದೇ ಬೆಳೆಯನ್ನು ಬೆಳೆಯುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಇಂತಹ ಕನಿಷ್ಠ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು. ಅಂದರೆ ಅಗತ್ಯಕ್ಕೆ ಅನುಗುಣವಾಗಿ ಅಕ್ಕಿ, ಗೋದಿ, ನವಣೆ, ಸಜ್ಜೆಯ ಇಂತಹ ಸಿರಿಧಾನ್ಯಗಳನ್ನ ಬೆಳೆಯು ತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕು ಎಂದಿಲ್ಲ. ತೆಳ್ಳನೆಯ ಮಣ್ಣಿನ ಪದರದ ನೆಲದಲ್ಲಿಯೂ ಸಿರಿಧಾನ್ಯಗಳು ಚೆನ್ನಾಗಿ ಬೆಳೆಯುತ್ತವೆ. ಕಲ್ಲಿನ ಜಮೀನಿನಲ್ಲಿ ಹಾರಕ ಹಾಗೂ ಕೊರಲೆ ಬೆಳೆಯುತ್ತವೆ. ಇಂತಹ ವಿಶಿಷ್ಟ ಗುಣಗಳಿಂದಲೆ ಸಿರಿಧಾನ್ಯಗಳು ರೈತರಿಗೆ ವರದಾನವಾಗಿರುವ ಬೆಳೆಗಳಾಗಿವೆ ಎಂದು ರೈತರಿಗೆ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಿದರು.

ಸಿರಿಧಾನ್ಯಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು ಮತ್ತು ರೈತರು ರಾಸಾಯನಿಕ ಗೊಬ್ಬರ ವನ್ನು ನೆಚ್ಚಿಕೊಂಡಿಲ್ಲ ಕೊಟ್ಟಿಗೆ ಗೊಬ್ಬರ, ಬಳಸಿ ಸಿರಿಧಾನ್ಯಗಳನ್ನು ಬೆಳೆಯಬಹುದು ಕೀಟಗಳ ತೊಂದರೆಯ ಪ್ರಶ್ನೆಯೇ ಇರುವುದಿಲ್ಲ. ಸರ್ವರೋಗಕ್ಕೂ ರಾಮಬಾಣ ಸಿರಿಧಾನ್ಯ, ಪೌಷ್ಠಿಕಾಂಶ ಗಳನ್ನು ಒಳಗೊಂಡಿರುವ ಸಿರಿಧಾನ್ಯ ಅವಶ್ಯಕತೆ ಜನರಿಗಿದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳಿರುವು ದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಉಂಟಾಗದೇ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ವಿಪರೀತ ಬೊಜ್ಜು ಮತ್ತು ಕೊಬ್ಬಿನ ಅಂಶ ಜೊತೆಗೆ ಕೊಲೆಸ್ಟ್ರಾಲ್ ಅಂಶ ತುಂಬಿಕೊಳ್ಳುವುದನ್ನು ತಪ್ಪಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ವಿವಿಧ ಮಳಿಗೆಗಳನ್ನು ತೆರೆದು ಜನರಲ್ಲಿ ಅರಿವು ಮೂಡಿಸಲಾಯಿತು. ಕರಪತ್ರಗಳು ಹಾಗೂ ಭಿತ್ತಿಚಿತ್ರಗಳನ್ನು ಹಂಚುವ ಮೂಲಕ ಸಿರಿಧಾನ್ಯಗಳ ಉಪಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಸಿರಿಧಾನ್ಯಗಳ ರಾಶಿ ಗಳನ್ನು ಪ್ರದರ್ಶನ ಮಾಡಲಾಯಿತು. ವಿವಿಧ ಕೃಷಿ ಮತ್ತು ತೋಟಗಾರಿಕೆ ಯಂತ್ರಗಳ ಪ್ರಾತ್ಯಕ್ಷಿಕೆ ಯನ್ನು ಏರ್ಪಡಿಸಲಾಗಿತ್ತು. ವಿವಿಧ ಫಲಪುಷ್ಪ ಪ್ರದರ್ಶನಗಳ ಆಯೋಜನೆಯು ಸಾರ್ವಜನಿಕರ ಗಮನ ಸೆಳೆಯಿತು. ಈ ವೇಳೆ ವಿವಿಧ ಯೋಜನೆಗಳ ರೈತ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು.

ಪಾಕ ಸ್ಪರ್ಧೆಯಲ್ಲಿ ವಿಜೇತರಾದ 9 ಜನ ಮಹಿಳೆಯರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ .ನವೀನ್ ಭಟ್,  ಗೌರಿಬಿದನೂರು ತಹಸೀಲ್ದಾರ್ ಅರವಿಂದ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿ ಕಾರಿ ಹೊನ್ನಯ್ಯ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಂ .ಆರ್. ಶಿವಣ್ಣ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ  ರೆಡ್ಡಿ, ಮಂಚೇನಹಳ್ಳಿ  ತಾಲೂಕಿನ ಕೃಷಿಕ ಸಮಾಜ ಅಧ್ಯಕ್ಷ ಎಚ್. ಸಿ. ನಾರಾಯಣಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು, ಕೃಷಿ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಸದಸ್ಯರು, ಪ್ರಗತಿಪರ ರೈತರು ಮತ್ತು ಸಾರ್ವಜನಿಕರು ಹಾಜರಿದ್ದರು.