ಚಿಂತಾಮಣಿ: ಭಾರತ ಜನಗಣತಿ 2027(Census 2027)ರ ಜನಗಣತಿ ಕಾರ್ಯಕ್ಕೆ ನೇಮಕವಾಗಿರುವ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ತಹಶೀಲ್ದಾರ್ ಸುದರ್ಶನ್ ಯಾದವ್ ಮತ್ತು ಪೌರಾಯುಕ್ತ ರಾದ ಜಿ ಎನ್ ಚಲಪತಿ ರವರಿಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಅಶೋಕ್ ಕುಮಾರ್ ನೇತೃತ್ವದಲ್ಲಿ ಮನವಿ ಪತ್ರ ನೀಡಲಾಯಿತು.
ಇದನ್ನೂ ಓದಿ: Census: ಇಂದಿನಿಂದ ಮನೆ ಮನೆ ಜನಗಣತಿ, ಈ 33 ಪ್ರಶ್ನೆಗಳಿಗೆ ಉತ್ತರಿಸಿ
ಗಣತಿದಾರರ ಹಾಗೂ ಮೇಲ್ವಿಚಾರಕರ ಸಮಸ್ಯೆಗಳು, ತರಬೇತಿ ಇಲ್ಲದವರನ್ನು ಗಣತಿಕಾರ್ಯಕ್ಕೆ ನೇಮಕಾತಿ ಮಾಡಿಕೊಂಡಿದ್ದು ಅವರಿಗೆ ತರಬೇತಿ ನೀಡುವುದು, ಗಣತಿ ಸಂದರ್ಭದಲ್ಲಿ ಆಗುವ ಬ್ಲಾಕ್ ಗಳ ಗಡಿ ನಿರ್ಧರಿಸುವುದು, ತಾಂತ್ರಿಕ ಸಮಸ್ಯೆಗಳು, ಸಕಾಲಕ್ಕೆ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಸಕಾಲಕ್ಕೆ ಸಲಕರಣೆಗಳು ನೀಡುವುದು, 55 ವರ್ಷ ಮೇಲ್ಪಟ್ಟು ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು, ಆರೋಗ್ಯ ಸಮಸ್ಯೆ, ವೃದ್ಧ ತಂದೆ-ತಾಯಿ, ಚಿಕ್ಕ ಮಕ್ಕಳ ಪೋಷಣೆ, ಗಣತಿ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತುರ್ತು ಬದಲಿ ವ್ಯವಸ್ಥೆ ಮಾಡಿ ಈ ಮೇಲ್ಕಂಡ ಸಮಸ್ಯೆಗಳು ಬಗೆಹರಿಸಿ ಗಣತಿ ಕಾರ್ಯ ಸುಗಮವಾಗಿ ನಡೆಯಲು ಸಹಕರಿಸಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಲಾಯಿತು.
ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಯಾವುದೇ ಸಮಸ್ಯೆ ಇಲ್ಲದೆ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಸ್ ಆನಂದ್,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತನುಜ,ಕಾರ್ಯದರ್ಶಿ ಎಂ ಎನ್ ಆಂಜನೇಯಪ್ಪ,ಹಿರಿಯ ಉಪಾಧ್ಯಕ್ಷ ಕೆ ಶಿವರಾಜ್ ಉಪಾಧ್ಯಕ್ಷ ಜಗದೀಶ್ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಉಪಾಧ್ಯಕ್ಷ ಸುರೇಶ್ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರಾದ ವಿ ಗಂಗಲಪ್ಪ ಏನ್ ವೆಂಕಟಚಲಪತಿ ಮಸ್ತಾನ್ ವಲಿ,ಎನ್‌ಪಿಎಸ್ ಅಧ್ಯಕ್ಷ ಎಂಎಸ್ ಮಂಜುನಾಥ್ ಮುಖಂಡರಾದ ವಿ ರಮೇಶ್ ಆರ್ ಮಂಜುನಾಥ್, ಶ್ರೀರಾಮಪ್ಪ, ರವಿಶಂಕರ್ ರೆಡ್ಡಿ ಇದ್ದರು.