ಚಿಂತಾಮಣಿ: ಮೂರು ಯುಗಗಳ ಅವತಾರ ಪುರುಷ ಅಂಬಾಜಿದುರ್ಗಾ ಬೆಟ್ಟ (Ambajidurga hill)ದ ಮೇಲೆ ನೆಲೆಸಿರುವ ದುಷ್ಟಸಂಹಾರ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಏಪ್ರಿಲ್ ತಿಂಗಳಿ ನಲ್ಲಿ ಮೂರುದಿನಗಳ ಕಾಲ ಅದ್ದೂರಿ ಬ್ರಹ್ಮರಥೋ ತ್ಸವ(Brahmarathotsava) ಕಾರ್ಯಕ್ರಮ ನಡೆಯಲಿದೆ ಎಂದು ಪ್ರದಾನ ಅರ್ಚಕ ತಿಳಿಸಿದ್ದಾರೆ.
ಅಂಬಾಜಿದುರ್ಗದ ಬೆಟ್ಟದ ಅಂಜನೇಯ ವಿಗ್ರಹದಲ್ಲಿ ಸಾಕಷ್ಟು ವಿಶೇಷತೆ ಕಾಣಬಹು ದಾಗಿದೆ. ಮೂರು ಯುಗಗಳ ಅವತಾರ ಪುರುಷನಾಗಿ ಕಾಣುತ್ತಾರೆ. ಮೇಲಿಂದ ಕೆಳಗೆ ನೋಡಿ ದರೆ ತ್ರೇಥಾಯುಗದಲ್ಲಿ ಕೋರೆ ಹಲ್ಲಿನಿಂದ ಕೋಪದಿಂದ ರಾವಣಾಸುರ ಮಗ ಅಕ್ಷಯ ಕುಮಾರನ ಸಂಹರಿಸುವ ದುಷ್ಟಸಂಹಾರಕ ಅಂಜನೇಯನ ಪ್ರಸಂಗ, ಅಡ್ಡ ಅಡ್ಡವಾಗಿ ನೋಡಿದರೆ ದ್ವಾಪರಯುಗದಲ್ಲಿ ಭೀಮನ ಅಹಂಕಾರ ಅಡಿಗಿಸಿ ದ್ರೌಪದಿಗೆ ಸೌಗಂಧಿಕಾ ಪುಷ್ಪವನ್ನು ಹಿಮಾಲಯದಿಂದ ತಂದು ಭೀಮನಿಗೆ ನೀಡುವಾಗ ಎಡಗೈಯಲ್ಲಿ ಪುಷ್ಪ ಹಿಡಿದಿರುವ ವಾಯುಪುತ್ರ, ಕಲಿಯುಗದಲ್ಲಿ ಬಲಗೈ ಮೇಲೆತ್ತಿ ಬೇಡಿದ ಭಕ್ತರಿಗೆ ಅಭಯ ನೀಡುವ ಮೂಲಕ ಇಷ್ಟಾರ್ಥಗಳನ್ನು ಈಡೇರಿಸುವ ಭಗವಂತನೇ ಇಲ್ಲಿ ನೆಲೆಸಿದ್ದಾರೆಂದು ಸುತ್ತಮುತ್ತಲ ಗ್ರಾಮಸ್ಥರು ಹೇಳುತ್ತಾರೆ.
ಇದನ್ನೂ ಓದಿ: Chinthamani News: ತಂದೆ ತಾಯಿಯ ತ್ಯಾಗವೇ ನಮಗೆ ಪ್ರೇರಣೆ ಅವರೇ ನಿಜವಾದ ನಾಯಕರು
ಮತ್ತೊಂದು ವಿಶೇಷತೆ ಎಂದರೆ, ಬೆಟ್ಟದ ತುದಿಯಲ್ಲಿ ಅಂಬೋಜೇಶ್ವರ ದೇವಾಲಯವಿದೆ. ಅದರ ಪಕ್ಕದಲ್ಲಿ ಸದಾ ನೀರಿರುವ ಚಿಲುಮೆಯು ಇದೆ ಇಲ್ಲಿನ ನೀರು ಸೇವಿಸಿದರೆ ಅಥವಾ ಸ್ನಾನ ಮಾಡಿದರೆ ರೋಗ ರುಜಿನಗಳು ವಾಸಿಯಾಗುತ್ತವೆ ಎಂದು ಹೇಳುತ್ತಾರೆ.
ದೇವಾಲಯದ ಧರ್ಮದರ್ಶಿಗಳಾದ ಕಾವಲಗಾನಹಳ್ಳಿ ನಾರಾಯಣಸ್ವಾಮಿ, ಅಂಬೋ ಜೇಶ್ವರ ಸೇವಾ ಟ್ರಸ್ಟ್ ಮುಖಾಂತರ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಿಂದ ದೇವಾಲಯವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಗೋಶಾಲೆಯನ್ನು ಸಹ ಮಾಡಿರು ತ್ತಾರೆ. ಇದರ ಜೊತೆಗೆ ನಿತ್ಯ ಅನ್ನ ದಾಸೋಹವು ನಡೆಯುತ್ತಿದೆ.
ಲೋಕಕಲ್ಯಾಣಾರ್ಥಕ್ಕಾಗಿ ಏಪ್ರಿಲ್ 4ರಂದು ಧ್ವಜಾರೋಹಣ, 5ರಂದು ಸೀತಾರಾಮ ಕಲ್ಯಾಣೋತ್ಸವ 6ಕ್ಕೆ ರಥೋತ್ಸವ ಕಾರ್ಯಕ್ರಮಗಳಿದ್ದು ಅಂಬಾಜಿ ದುರ್ಗಾಬೆಟ್ಟದ ದುಷ್ಟ ಸಂಹಾರ ವೀರಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಶ್ರದ್ದಾ ಭಕ್ತಿಗಳಿಂದ ನಡೆಯಲಿದ್ದು ಸಾರ್ವಜನಿಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ದೇವಾಲಯದ ಆಡಳಿತ ಮಂಡಳಿಯವರು ಕೋರಿದ್ದಾರೆ..