ಚಿಕ್ಕಬಳ್ಳಾಪುರ: ನಗರಸಭೆಯ ಆವರಣದಲ್ಲಿ ಬುಧವಾರ ನಗರಸಭೆಯ ಮಾಜಿ ಸದಸ್ಯ ವಕೀಲ ಆರ್.ಮಟಮಪ್ಪ ತಮ್ಮ ತಾಯಿ ಲಕ್ಷ್ಮಮ್ಮ 5ನೇವರ್ಷದ ಪುಣ್ಯಸ್ಮರಣೆ ಅಂಗ ವಾಗಿ ಮಾತಾಶ್ರೀ ಲಕ್ಷಮ್ಮ ಸೇವಾ ಟ್ರಸ್ಟ್ನಿಂದ ನಗರಸಭೆಯ 100 ಮಂದಿ ಪೌರ ಕಾರ್ಮಿಕರಿಗೆ ಸ್ಪೆಟರ್‌ಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಆರ್.ಮಟಮಪ್ಪ, ಚಳಿ, ಮಂಜು ಹಾಗೂ ಮಳೆಯನ್ನು ಲೆಕ್ಕಿಸದೇ ನಗರದ ಸ್ವಚ್ಛತೆಯ ಜೊತೆಗೆ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ತರ.
ಇದನ್ನೂ ಓದಿ: Chikkaballapur News: ದೇಶದ ಅಖಂಡತೆಗೆ ರಾಷ್ಟ್ರೀಯ ಪಕ್ಷಗಳಿಂದಲೇ ಅಪಾಯವಿದೆ: ಜ್ಞಾನಪ್ರಕಾಶ ಸ್ವಾಮೀಜಿ
ಈ ನಿಟ್ಟಿನಲ್ಲಿ ಪ್ರಸ್ತುತ ಚಳಿಗಾಲದಲ್ಲಿ ಶೀತವಾತಾವರಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೆಳಗಿನ ಜಾವವೇ ನಾಗರಿಕರ ಸೇವೆಗೆ ತೆರಳುವ ಪೌರಕಾರ್ಮಿಕರ ಆರೋಗ್ಯ ದ ಹಿತದೃಷ್ಟಿಯಿಂದ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.
ಮಟಮಪ್ಪ ಅವರ ತಂದೆ ರಾಮಯ್ಯ, ನಗರಸಭೆ ಆರೋಗ್ಯ ಶಾಖೆಯ ಎಇಇ ಉಮಾ ಶಂಕರ್, ನಗರಸಭೆ ಮಾಜಿ ಸದಸ್ಯ ಯತೀಶ್, ಹೋಟೆಲ್ ರಾಮಣ್ಣ, ಪ್ರಕಾಶ್, ಗುಂಪು ಮರದ ಆನಂದ್, ನಗರಸಭೆ ಆರೋಗ್ಯ ಅಧಿಕಾರಿ ಮುರಳಿ, ಅಂಬಾ ಭವಾನಿ ಇದ್ದರು.