ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ಮಕ್ಕಳ ಬೆಳವಣಿಗೆಯಲ್ಲಿ ಪಠ್ಯೇತರ ಚಟವಟಿಕೆಗಳ ಪ್ರಭಾವ ಅಧಿಕ : ಕಾಂಗ್ರೆಸ್ ಮುಖಂಡ ಬಿ.ವಿ ರಾಜೀವಗೌಡ

ಜವಹಾರ್ ಬಾಲ್ ಮಂಚ್ ರಾಜ್ಯಾಧ್ಯಕ್ಷ ಮೈನುದ್ದೀನ್ ಮಾತನಾಡಿ ಮಕ್ಕಳ ಚಿತ್ರಗಳನ್ನು ನೋಡುವುದು ಚಂದ, ಅವರಿಗೆ ಬರೆಯಲು ಬರದಿದ್ದರೂ ಏನೋ ಒಂದು ಬರೆಯುತ್ತಾರೆ. ಎಲ್ಲರೂ ಒಂದೇ ರೀತಿ ಬರೆಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಆಲೋಚನೆಕ್ರಮಗಳಿಗೆ ಅನು ಗುಣವಾಗಿ ಒಂದೊAದು ವಿಭಿನ್ನವಾಗಿ ಬರೆಯುತ್ತಾರೆ.

ಮಕ್ಕಳ ಬೆಳವಣಿಗೆಯಲ್ಲಿ ಪಠ್ಯೇತರ ಚಟವಟಿಕೆಗಳ ಪ್ರಭಾವ ಅಧಿಕ

ಮಗುವಿನಲ್ಲೂ ಒಂದು ವಿಶೇಷ ಪ್ರತಿಭೆ ಇರುತ್ತೆ,ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಂಗೀತ, ಚಿತ್ರಕಲೆ, ಕ್ರೀಡೆ, ನೃತ್ಯಗಳಂತಹ ಚಟುವಟಿಕೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಕಾಂಗ್ರೆಸ್ ಮುಖಂಡ ಬಿ.ವಿ ರಾಜೀವಗೌಡ ಹೇಳಿದರು. -

Ashok Nayak
Ashok Nayak Nov 11, 2025 11:20 AM

ಶಿಡ್ಲಘಟ್ಟ : ಮಗುವಿನಲ್ಲೂ ಒಂದು ವಿಶೇಷ ಪ್ರತಿಭೆ ಇರುತ್ತೆ,ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಂಗೀತ, ಚಿತ್ರಕಲೆ, ಕ್ರೀಡೆ, ನೃತ್ಯಗಳಂತಹ ಚಟುವಟಿಕೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಕಾಂಗ್ರೆಸ್ ಮುಖಂಡ ಬಿ.ವಿ ರಾಜೀವಗೌಡ ಹೇಳಿದರು.

ನಗರದ ಡಾಲ್ಫಿನ್ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ  ಜವಹಾರ್ ಬಾಲ್ ಮಂಚ್ ವತಿಯಿಂದ ಚಾಚಾಜಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಾಲಾ ದಿನಗಳಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪೋಷಕರು ಹಾಗೂ ಶಿಕ್ಷಕರು ಬೆಳೆಸಬೇಕು ಎಂದರು.

ಇದನ್ನೂ ಓದಿ: Shidlaghatta News: ದೇಶದಲ್ಲಿ ಅಧಿಕಾರಕ್ಕೋಸ್ಕರವೇ ಮತಗಳ್ಳತನ ಎಂಬ ಅಡ್ಡದಾರಿ ಹಿಡಿಯುವುದು ಮಹಾ ಮೋಸ

ಮಕ್ಕಳು ನೌಕರಿ ಪಡೆಯಲು ಓದದೇ, ಉತ್ತಮ ನಾಗರಿಕರಾಗಲು ಓದಬೇಕು. ನಮ್ಮ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ಅರಿಯಬೇಕು ಎಂದು ಹೇಳಿದರು.

ಜವಹಾರ್ ಬಾಲ್ ಮಂಚ್ ರಾಜ್ಯಾಧ್ಯಕ್ಷ ಮೈನುದ್ದೀನ್ ಮಾತನಾಡಿ ಮಕ್ಕಳ ಚಿತ್ರಗಳನ್ನು ನೋಡುವುದು ಚಂದ, ಅವರಿಗೆ ಬರೆಯಲು ಬರದಿದ್ದರೂ ಏನೋ ಒಂದು ಬರೆಯುತ್ತಾರೆ. ಎಲ್ಲರೂ ಒಂದೇ ರೀತಿ ಬರೆಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಆಲೋಚನೆಕ್ರಮಗಳಿಗೆ ಅನು ಗುಣವಾಗಿ ಒಂದೊAದು ವಿಭಿನ್ನವಾಗಿ ಬರೆಯುತ್ತಾರೆ. ಅವರ ಕಲ್ಪನೆ ಏನಿರುತ್ತದೆ ಹಾಗೆ ಬರೆಯುತ್ತಾರೆ. ಮಕ್ಕಳಿಗೆ ಇದು ಒಳ್ಳೆಯ ವೇದಿಕೆ. ಶಾಲೆಯ ಮಕ್ಕಳು ಇಂತಹ ಸ್ಪರ್ಧೆ ಗಳಲ್ಲಿ ಹೆಚ್ಚು ಭಾಗವಹಿಸಬೇಕು’ ಎಂದರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಹನಾ ರಾಜೀವ್ ಗೌಡ,  ಎಚ್ ಜೆ, ಜಿಲ್ಲಾ ಅಧ್ಯಕ್ಷೆ ಎಸ್ ಯಾಸ್ಮಿನ್ ತಾಜ್, ಕೆ ಶ್ರೀನಾಥ್, ಡಾಲ್ಫಿನ್ ಶಾಲೆಯ ಅಶೋಕ್, ಆಫೀಸ್ ಸೇರಿದಂತೆ ಮತ್ತಿತರ ಹಾಜರಿದ್ದರು.