ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dharna: ಧರಣಿ ಸ್ಥಳದಲ್ಲಿಯೇ ಯುಗಾದಿ ಹಬ್ಬ ಮತ್ತು ವರ್ಷ ತೊಡಕು ಆಚರಿಸಿ ಆಕ್ರೋಶ ಹೊರ ಹಾಕಿದ ರೈತಾಪಿಗಳು

ದೇಶಕ್ಕೆ ಅನ್ನ ಬೆಳೆದು ಕೊಡುವ ರೈತಾಪಿಗಳು ಮನೆಗಳಲ್ಲಿ ಇದ್ದು ಜನ, ಜಾನುವಾರುಗಳೊಂದಿಗೆ ಯುಗಾದಿ ಆಚರಿಸಬೇಕಿತ್ತು. ಆದರೆ ಭೂಮಿ ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರಕಾರದ ಮೊಂಡಾಟದ ಕಾರಣವಾಗಿ ನಾವು ರಸ್ತೆಯ ಮೇಲೆ ಹಬ್ಬ ಆಚರಿಸು ವಂತಹ ಸ್ಥಿತಿ ನಿರ್ಮಾಣವಾಗಿದೆ.

ರೈತರಿಂದ ಬಲವಂತವಾಗಿ ಭೂಮಿ ಕಸಿದುಕೊಂಡಲ್ಲಿ ಸರಕಾರದ ಅವಸಾನ ಖಚಿತ ಎಂದು ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರ : ರಾಜ್ಯ ಸರಕಾರ ಬಲವಂತವಾಗಿ ಕೆಐಎಡಿಬಿ(KIADB) ಮೂಲಕ ಫಲವತ್ತಾದ ಕೃಷಿ ಭೂಮಿ(Fertile agricultural land)ಯನ್ನು ವಶಪಡಿಸಿಕೊಳ್ಳಲು ಮುಂದಾ ದಲ್ಲಿ 1985ರಲ್ಲಿ ರಾಮಕೃಷ್ಣ ಹೆಗ್ಗಡೆ ಸರಕಾರ(Ramakrishna Heggade government) ಉರುಳಿದಂತೆ ನಿಮ್ಮ ಕಾಂಗ್ರೆಸ್ ಸರಕಾರವೂ ಉರುಳಲಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ( Karnataka State Farmers' Union and Hasirusene) ಯ ರಾಜ್ಯಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ ಭವನದ ಎದುರು ಮಾ.16ರಿಂದ ಪ್ರಾರಂಭವಾಗಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ನಾಲ್ಕನೇ ದಿನ ರೈತ ಸಂಕುಲದೊಟ್ಟಿಗೆ ರಸ್ತೆಯ ಮೇಲೆಯೇ ಯುಗಾದಿ ಹಬ್ಬವನ್ನು ಆಚರಿಸಿ ಅವರು ಮಾಧ್ಯಮದೊಟ್ಟಿಗೆ ಮಾತನಾಡಿದರು.

cbpm1protest

ದೇಶಕ್ಕೆ ಅನ್ನ ಬೆಳೆದು ಕೊಡುವ ರೈತಾಪಿಗಳು ಮನೆಗಳಲ್ಲಿ ಇದ್ದು ಜನಜಾನುವಾರು ಗಳೊಂದಿಗೆ ಯುಗಾದಿ ಆಚರಿಸಬೇಕಿತ್ತು. ಆದರೆ ಭೂಮಿ ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರಕಾರದ ಮೊಂಡಾಟದ ಕಾರಣವಾಗಿ ನಾವು ರಸ್ತೆಯ ಮೇಲೆ ಹಬ್ಬ ಆಚರಿಸು ವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿ ನಿರ್ಮಿಸಿರುವ ರಾಜ್ಯ ಸರಕಾರಕ್ಕೆ ಧಿಕ್ಕಾರ ಹೇಳುತ್ತೇನೆ ಎಂದ ಅವರು ಕಾರ್ಪೊರೇಟ್ ಕುಳಗಳಿಗೆ ಭೂಮಿ ನೀಡಲು ನಮ್ಮಿಂದ ಯಾಕೆ ಪಡೆಯಬೇಕು?. ನಿಜವಾಗಿ ಇವರಿಗೆ ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗ ನಿವಾರಣೆ ಮಾಡುವ ಮನಸ್ಸಿದ್ದಲ್ಲಿ ಬಂಜರು ಭೂಮಿ ಇರುವೆಡೆ ಮಾಡಲಿ. ಅದನ್ನು ಬಿಟ್ಟು ಬೇಸಾಯದಿಂದಲೇ ಬದುಕು ಕಟ್ಟಿಕೊಂಡಿರುವರ‍್ನು ಒಕ್ಕಲೆಬ್ಬಿಸಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು.

ಇದನ್ನೂ ಓದಿ: Chikkaballapur News: ಸೇವಾ ಮನೋಭಾವದಲ್ಲಿ ಮೆರೆಯಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ ಜನ್ಮದಿನಾಚರಣೆ

ಭೂತಾಯಿಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡು, ಆಧುನಿಕತೆಯ ಭರಾಟೆಯ ನಡುವೆಯೂ ಒಕ್ಕಲು ಸಂಸ್ಕೃತಿಯನ್ನು ಇಂದಿಗೂ ಕಾಪಿಟ್ಟುಕೊಂಡಿರುವ ರೈತಾಪಿ ಸಂಕುಲಕ್ಕೆ ಕೃಷಿ ಭೂಮಿಯೇ ಬದುಕಾಗಿದೆ. 2823 ಎಕರೆಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿರುವ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರನ್ನು ಕೈಗಾರಿಕೆ ಸ್ಥಾಪನೆಯ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಹೊರಟಿರುವುದು ಸರಿಯಲ್ಲ. ಇದರ ವಿರುದ್ದ 25ರ ಜೂನ್ 2024ರಿಂದ ಈವರೆಗೆ ಅವಿರತವಾಗಿ ಹೋರಾಟ ಮಾಡಿಕೊಂಡೇ ಬರಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ 850ಕ್ಕೂ ಹೆಚ್ಚು ಪಹಣಿ ದಾರರು ಯಾವ ಕಾರಣಕ್ಕೂ ಕೃಷಿ ಭೂಮಿಯನ್ನು ನಾವು ಕೆಐಎಡಿಬಿಗೆ ಕೊಡುವುದಿಲ್ಲ ಎಂದು ಲಿಖಿತವಾಗಿ ಸರಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದರೂ ಬಲವಂತದಿಂದ ಭೂಮಿ ವಶಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿರುವುದು ಅಕ್ಷಮ್ಯ ಅಪರಾಧ. ಪ್ರಾಣ ಹೋದರೂ ಪರವಾಗಿಲ್ಲ, ಅಂತಿಮ ಅಧಿಸೂಚನೆ ವಾಪಸ್ಸಾಗುವವರೆಗೂ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದರು.

ಧರಣಿ ಸ್ಥಳದಲ್ಲಿಯೇ ಯುಗಾದಿ ಆಚರಣೆ
ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿ 13 ಹಳ್ಳಿಗಳ ಸುಮಾರು 2823 ಎಕರೆ ಕೃಷಿಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಳ್ಳಲು ಹೊರಡಿಸಿರುವ ಅಂತಿಮ ಅಧಿಸೂಚನೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ,ಹಾಗೂ ಜಂಗಮಕೋಟೆ ಹೋಬಳಿ ರೈತ ಹೋರಾಟಗಾರರು ಸರಕಾರಕ್ಕೆ ಚೆಲ್ಲಾಟ ರೈತರಿಗೆ ಪ್ರಾಣ ಸಂಕಟ ಶೀರ್ಷಿಕೆಯಡಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆಯಿತು.

cbpm1i

ಮಾ.19ರಂದು ಯುಗಾದಿ ಹಬ್ಬವನ್ನು ರೈತರೆಲ್ಲಾ ಕೂಡಿಕೊಂಡು ಧರಣಿ ಸ್ಥಳದಲ್ಲಿಯೇ ಮಾಡಿದರು.ಹೆಣ್ಣುಮಕ್ಕಳು ಹೋಳಿಗೆ ಮಾಡಿದರೆ, ಯುವ ರೈತರು ಅನ್ನ ಸಾಂಬಾರು ಮಾಡಿ ರಸ್ತೆ ಮೇಲೆಯೇ ಊಟ ಮಾಡುವ ಮೂಲಕ ಸರಕಾರಕ್ಕೆ ಹಿಡಿ ಶಾಪ ಹಾಕಿದರು.

ಯುಗಾದಿ ಹಬ್ಬದ ದಿನವಾದ ಗುರುವಾರ ರೈತಾಪಿಗಳು ನೇಗಿಲನ್ನು ಪೂಜಿಸುವ, ಧವಸ ಧಾನ್ಯಗಳನ್ನು ಬಳಸಿ ಪಾತಿ ಮಾಡಿ ಮಡಿಬಿಡುವ ಪದ್ಧತಿ ನೂರಾರು ವರ್ಷಗಳಿಂದ ನಡೆದು ಕೊಂಡು ಬಂದಿದೆ. ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ನೇತೃತ್ವದಲ್ಲಿ ಪೂಜೆ ಸಲ್ಲಿಸಿ,ರೈತರಿಗೆ ಮಾಧ್ಯಮದವರಿಗೆ ಹೋಳಿಗೆ ಊಟ ಉಣ ಬಡಿಸಿದರು. ಅಂತೆಯೇ, ಪ್ರತಿಭಟನೆಯ 5ನೇ ದಿನವಾದ ಶುಕ್ರವಾರ ವರ್ಷ ತೊಡಕನ್ನು ಕೂಡ ಇಲ್ಲಿಯೇ ಆಚರಿಸುವ ಮೂಲಕ ಸರಕಾರಕ್ಕೆ ಸೆಡ್ಡು ಹೊಡೆದರು.

ಜಂಗಮಕೋಟೆ ಹೋಬಳಿ 13 ಹಳ್ಳಿಗಳ 2823 ಎಕರೆ ಫಲವತ್ತಾದ ಕೃಷಿ ಭೂಮಿಗೆ ಸಂಬಂಧಿಸಿದಂತೆ ಸರಕಾರ ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ಧುಗೊಳಿಸಬೇಕು.
ಕೆಐಎಡಿಬಿ ಭೂಸ್ವಾದೀನ ಪ್ರಕ್ರಿಯೆ ಇಲ್ಲಿಗೇ ನಿಲ್ಲಿಸಬೇಕು.ಇಲ್ಲವಾದಲ್ಲಿ ಸರಕಾರ ತನ್ನ ಸಮಾಧಿ ತಾನೇ ತೋಡಿಕೊಳ್ಳುವುದು ಖಚಿತ ಎಂಬ ಸಂದೇಶ ರವಾನೆ ಮಾಡಿದರು.

ಈ ವೇಳೆ ಯಣ್ಣಂಗೂರು ಮೂರ್ತಿ, ಗುಮ್ಮಣ್ಣ, ಅಶ್ವತ್ಥ ನಾರಾಯಣಗೌಡ, ನಡಿಪಿ ನಾಯಕನಹಳ್ಳಿ ಹೊಂಬೇಗೌಡ, ದೇವರಾಜು, ಕುಮಾರ್, ಬಸವಾಪಟ್ಟಣ ನಂಜುಣಡಪ್ಪ, ಭರತ್‌ ಕುಮಾರ್, ಬೈರೇಗೌಡ, ಗೋಪಾಲ್ ಮೋಹನ್, ತೊಟ್ಲುಗಾನಹಳ್ಳಿ ಕೃಷ್ಣಪ್ಪ, ಚಿಕ್ಕಬಳ್ಳಾಪುರ ರಾಮಾಜಿನಪ್ಪ ಮತ್ತಿತರರು ಇದ್ದರು.