ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಸೇವಾ ಮನೋಭಾವದಲ್ಲಿ ಮೆರೆಯಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ ಜನ್ಮದಿನಾಚರಣೆ

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಉದ್ಯಮಿ ನಂದಿ ಮುರುಳಿ ಹಾಗೂ ಮುಖಂಡರಾದ ರಾಜಾಕಾಂತ್, ಮೋಹನ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಚಿವರ ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜಕೀಯದಲ್ಲಿ ಮತ್ತಷ್ಟು ಉನ್ನತ ಸ್ಥಾನಮಾನಕ್ಕಾಗಿ ಪ್ರಾರ್ಥಿಸಿದರು.

ವೃದ್ಧಾಶ್ರಮದಲ್ಲಿ ಅನ್ನದಾನದ ವ್ಯವಸ್ಥೆ

ಅಭಿಮಾನಿಗಳು ಪಕ್ಷದ ಮುಖಂಡರು ದೇವಾಲಯದಲ್ಲಿ ಪೂಜೆ, ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಅನ್ನದಾನ ಇತ್ಯಾದಿ ಸೇವಾ ಚಟುವಟಿಕೆಗಳ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು. -

Ashok Nayak
Ashok Nayak Mar 20, 2026 9:46 AM

ಚಿಕ್ಕಬಳ್ಳಾಪುರ: ರಾಜಕೀಯದಲ್ಲಿಯೂ ಮಾನವೀಯ ಮೌಲ್ಯಗಳನ್ನು ಮೆರೆದಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Minister Dr. M.C. Sudhakar) ಅವರ ಜನ್ಮದಿನಾಚರಣೆಯನ್ನು ಅವರ ಅಭಿಮಾನಿಗಳು ಪಕ್ಷದ ಮುಖಂಡರು ದೇವಾಲಯದಲ್ಲಿ ಪೂಜೆ, ಅನಾಥಾಶ್ರಮ, ವೃದ್ಧಾ ಶ್ರಮದಲ್ಲಿ ಅನ್ನದಾನ ಇತ್ಯಾದಿ ಸೇವಾ ಚಟುವಟಿಕೆಗಳ ಮೂಲಕ ಅತ್ಯಂತ ಅರ್ಥಪೂರ್ಣ ವಾಗಿ ಆಚರಿಸಿದರು.

ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ, ರಂಗಸ್ಥಳದ ಶ್ರೀರಂಗನಾಥ ಸ್ವಾಮಿ, ಕೋಟೆ ಆಂಜನೇಯಸ್ವಾಮಿ ದೇವಾಲಯ, ಎಲ್ಲೋಡು ನರಸಿಂಹಸ್ವಾಮಿ ದೇವಾಲಯ ಗಡಿದಂ ವೆಂಕಟೇಶ್ವರ ದೇವಾಲಯಗಲ್ಲಿ ಸಚಿವರ ಹೆಸರಿನಲ್ಲಿ ಅಭಿಷೇಕ, ದೇವರಿಗೆ ವಿಶೇಷ ಪೂಜೆ ಮಾಡಲಾಯಿತು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ಅನ್ನದಾನ ಕಾರ್ಯಕ್ರಮದಲ್ಲಿ ನೂರಾರು ಜನರಿಗೆ ಉಚಿತವಾಗಿ ಊಟ ವಿತರಿಸಲಾಯಿತು.

ಇದೇ ವೇಳೆ, ತಾಲೂಕಿನ ಪೆರೇಸಂದ್ರ ಗ್ರಾಮದ ಸೇತುವೆ ಮೇಲೂ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಮಾಡಲಾ ಗಿದ್ದು, ಹಬ್ಬದ ಸಡಗರದ ನಡುವೆಯೂ ಸಚಿವರ ಜನ್ಮದಿನದ ಅಂಗವಾಗಿ ಹಸಿದ ಹೊಟ್ಟೆ ಗಳಿಗೆ ಅನ್ನ ನೀಡುವ ಮೂಲಕ ಮಾನವೀಯತೆಗೆ ಜೀವ ತುಂಬಿದರು.

ಇದನ್ನೂ ಓದಿ: Chikkaballapur News: ಉನ್ನತ ಶಿಕ್ಷಣ ಪಡೆಯದಿದ್ದರೂ ಡಿವಿಜಿ ಅವರ ಪ್ರತಿಭೆ ಶ್ರೀಮಂತಿಕೆಯಿಂದ ಕೂಡಿತ್ತು: ಡಾ.ಕೋಡಿರಂಗಪ್ಪ ಅಭಿಮತ

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಉದ್ಯಮಿ ನಂದಿ ಮುರುಳಿ ಹಾಗೂ ಮುಖಂಡರಾದ ರಾಜಾಕಾಂತ್, ಮೋಹನ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಚಿವರ ಆರೋಗ್ಯ, ದೀರ್ಘಾ ಯುಷ್ಯ ಹಾಗೂ ರಾಜಕೀಯದಲ್ಲಿ ಮತ್ತಷ್ಟು ಉನ್ನತ ಸ್ಥಾನಮಾನಕ್ಕಾಗಿ ಪ್ರಾರ್ಥಿಸಿದರು.

ಇದೇ ಅಂಗವಾಗಿ ವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿ ವಾಸಿಸುವವರಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಅವರ ಮುಖದಲ್ಲಿ ಮೂಡಿದ ಸಂತೋಷ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. “ಹಸಿದ ಹೊಟ್ಟೆಗಳಿಗೆ ಅನ್ನ ನೀಡುವುದು ದೊಡ್ಡ ಸೇವೆ” ಎಂಬ ಸಂದೇಶ ಈ ಆಚರಣೆಯ ಮೂಲಕ ಸಾರಲಾಯಿತು.

ನಗರದ ಅನ್ನದಾನ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, “ಡಾ.ಎಂ.ಸಿ.ಸುಧಾಕರ್ ಅವರು ಸರಳತೆ ಮತ್ತು ಸಜ್ಜನಿಕೆಯ ನಾಯಕರು. ಅವರ ಕಾರ್ಯಾವಧಿಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಳು ನಡೆದಿವೆ. ಜಿಲ್ಲೆಯ ಅಭಿವೃದ್ಧಿಯಲ್ಲೂ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ, ನಂದಿ ಬೆಟ್ಟದಲ್ಲಿ ರೋಪ್ ವೇ, ಚಿಂತಾ ಮಣಿಯಲ್ಲಿ ಪಾಲಿಟೆಕ್ನಿಕ್ ಕಾಲೇಜ್ ಬಾಗೇಪಲ್ಲಿಯಲ್ಲಿ ಗಂಟಲಮಲ್ಲಮ್ಮ ಕಣಿವೆ ನಿರ್ಮಾಣ, ಗೌರಿಬಿದನೂರಿನಲ್ಲಿ ಸೋಲಾರ್ ಪಾರ್ಕ್, ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣ ನಿರ್ಮಾಣ, ಹೂವಿನ ಮಾರುಕಟ್ಟೆ, ಚಿಮುಲ್ ಪ್ಯಾಕೆಟ್ ಘಟಕ ಹೀಗೆ ಸಾಲು ಸಾಲು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದೇವರ ಆಶೀರ್ವಾದದಿಂದ ಇನ್ನಷ್ಟು ಹೆಚ್ಚಿನ ರಾಜಕೀಯ ಜವಾಬ್ದಾರಿಗಳು ದೊರೆಯಲಿ” ಎಂದು ಹಾರೈಸಿದರು.

ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಮಾತನಾಡಿ, “ಎಂ.ಸಿ. ಸುಧಾಕರ್ ಅವರು ಅಭಿವೃದ್ಧಿಯ ಹರಿಕಾರರು. ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಜಿಲ್ಲೆಯ ಪ್ರಗತಿಗೆ ದುಡಿಯುತ್ತಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಲಿ” ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವ ಜನಿಕರು ಸೇವಾ ಚಟುವಟಿಕೆಗಳಿಗೆ ಕೈಜೋಡಿಸಿ, ನಾಯಕನಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ದರು.