ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟ್(Supreme Court) ನಿರ್ದೇಶನದಂತೆ ದೇಶದಾದ್ಯಂತ ವಿಶೇಷ ಲೋಕ ಅದಾಲತ್(Lok Adalat)ಗಳನ್ನು ಆಯೋಜಿಸುವ ಕಾರ್ಯ ಗುರುವಾರ ದಿಂದ ಪ್ರಾರಂಭಗೊಂಡಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ರಾಜ್ಯ ಕಾನೂನು ಪ್ರಾಧಿಕಾರ ಆಯೋಜಿ ಸಿದ್ದ ವಿಡಿಯೋ ಸಂವಾದ ಸಭೆಗೆ ನ್ಯಾಯಾಲಯದಲೇ ಭಾಗವಹಿಸಿದ್ದ ಸದಸ್ಯ ಕಾರ್ಯ ದರ್ಶಿಯಾದ ಶಿಲ್ಪ ಅವರು ವಿಡಿಯೋ ಸಂವಾದದ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಪಟ್ಟಂತೆ 17 ಪ್ರಕರಣಗಳು ಸುಪ್ರೀಂ ಕೋರ್ಟಿನಲ್ಲಿ ರಾಜಿ ಆಗುವಂತಹವುಗಳು ಬಾಕಿ ಇವೆ. ಈ ಪ್ರಕರಣಗಳಿಗೆ ಸಂಬಂಧಪಟ್ಟವರು ತಮಗೆ ಹತ್ತಿರ ವಿರುವ ತಾಲೂಕು ಅಥವಾ ಜಿಲ್ಲಾ ನ್ಯಾಯಾಲಯಗಳ ಮಧ್ಯಸ್ಥಿಕೆ ಕೇಂದ್ರಗಳಿಗೆ ಭೇಟಿ ನೀಡಿ ರಾಜಿ ಆಗಬಹುದು. ಇಲ್ಲಿ ರಾಜಿ ಆದರೆ ದೆಹಲಿಗೆ ಹೋಗುವ ಅವಶ್ಯಕತೆ ಇರುವು ದಿಲ್ಲ ಇಂತಹ ಸುವರ್ಣ ಅವಕಾಶವನ್ನು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಅರ್ಹ ಪ್ರಕರಣಗಳಲ್ಲಿ ಮಾತ್ರ ಪಡೆಯಬಹುದು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಶೇ.100ರಷ್ಟು ಲಸಿಕಾಕರಣ ಸಾಧಿಸಿ ಸಂಪೂರ್ಣವಾಗಿ ತಡೆಗಟ್ಟಲು ಕ್ರಮ ವಹಿಸಿ: ಜಿಲ್ಲಾಧಿಕಾರಿ ಜಿ.ಪ್ರಭು
ವಿಶೇಷ ಲೋಕ್ ಅದಾಲತ್ ಕಾರ್ಯಕ್ರಮವು ನ್ಯಾಯಾಲಯಗಳಲ್ಲಿ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸ ಲಾಗಿದೆ. ಲೀಗಲ್ ಸರ್ವೀಸ್ ಅಥಾರಿಟೀಸ್ ಂಛಿಣ 1987 ಅಡಿಯಲ್ಲಿ ಕಾರ್ಯ ನಿರ್ವಹಿಸುವ ಲೋಕ ಅದಾಲತ್ ವ್ಯವಸ್ಥೆ ಪರ್ಯಾಯ ವಿವಾದ ಪರಿಹಾರ ಎಡಿಆರ್ ವಿಧಾನವಾಗಿದ್ದು, ಇಲ್ಲಿ ಪ್ರಕರಣಗಳನ್ನು ಪರಸ್ಪರ ಸಮಾಧಾನದಿಂದ ಇತ್ಯರ್ಥಗೊಳಿಸ ಲಾಗುತ್ತದೆ. ಈ ಅದಾಲತ್ ನೀಡುವ ತೀರ್ಪುಗಳಿಗೆ ಸಿವಿಲ್ ನ್ಯಾಯಾಲಯದ ಆದೇಶದ ಸಮಾನ ಮಾನ್ಯತೆ ಇರುತ್ತದೆ ಎಂದು ತಿಳಿಸಿದರು.
ಪ್ರಮುಖ ಉದ್ದೇಶ
ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು. ಜನರಿಗೆ ತ್ವರಿತ ಮತ್ತು ಕಡಿಮೆ ವೆಚ್ಚದ ನ್ಯಾಯ ಒದಗಿಸುವುದು. ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಇಳಿಸುವುದು. ಸಮಾಧಾನದ ಮೂಲಕ ವಿವಾದ ಪರಿಹಾರಕ್ಕೆ ಉತ್ತೇಜನ ನೀಡುವುದಾಗಿದೆ. ಬ್ಯಾಂಕ್ ಸಾಲ, ಮೋಟಾರ್ ಅಪಘಾತ ದಾವೆಗಳು, ಕುಟುಂಬ ಕಲಹಗಳು ಸೇರಿದಂತೆ ಹಲವು ಸಿವಿಲ್ ಸ್ವರೂಪದ ಪ್ರಕರಣಗಳನ್ನು ಈ ವಿಶೇಷ ಲೋಕ ಅದಾಲತ್‌ನಲ್ಲಿ ಪರಿಗಣಿಸಲಾಗುತ್ತದೆ “ವಿಶೇಷ ಲೋಕ ಅದಾಲತ್” ಮೂಲಕ ನಾಗರಿಕರಿಗೆ ವರ್ಷಗಳ ಕಾಲ ನ್ಯಾಯಕ್ಕಾಗಿ ಕಾಯಬೇಕಾದ ಪರಿಸ್ಥಿತಿ ತಪ್ಪುತ್ತದೆ.
ಒಂದೇ ದಿನದಲ್ಲಿ ಸಮಾಧಾನಕರ ಪರಿಹಾರ ದೊರಕುವ ಅವಕಾಶ ಇದಾಗಿದೆ. ಈ ಕ್ರಮವು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿದ್ದು, ಸಾಮಾನ್ಯ ಜನರಿಗೆ ಸುಲಭ, ವೇಗವಾದ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸ ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.