Chikkaballapur News: ಶೇ.100ರಷ್ಟು ಲಸಿಕಾಕರಣ ಸಾಧಿಸಿ ಸಂಪೂರ್ಣವಾಗಿ ತಡೆಗಟ್ಟಲು ಕ್ರಮ ವಹಿಸಿ: ಜಿಲ್ಲಾಧಿಕಾರಿ ಜಿ.ಪ್ರಭು
ಕಳೆದ ಜನವರಿಯಿಂದ ದಡಾರ ಮತ್ತು ರುಬೆಲ್ಲಾ ಸಂಶಯಾಸ್ಪದ 205 ಪ್ರಕರಣಗಳಲ್ಲಿ ಮಾದರಿ ರಕ್ತ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಮಂಚೇನಹಳ್ಳಿ ಭಾಗದಲ್ಲೆ 10 ಪ್ರಕರಣಗಳು ಕಂಡು ಬಂದಿವೆ. ಶಿಡ್ಲಘಟ್ಟ ಮತ್ತು ಮಂಚೇನಹಳ್ಳಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಲಸಿಕಾ ಕರಣವು ಸಮರ್ಪಕವಾಗದಿರುವುದು ಕಂಡುಬಂದಿದೆ.
-
ಚಿಕ್ಕಬಳ್ಳಾಪುರ : ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 26 ದಡಾರ ಪ್ರಕರಣಗಳು, 1 ರುಬೆಲ್ಲ ಪ್ರಕರಣ ಈವರೆಗೆ ಕಂಡು ಬಂದಿದ್ದು, ಈ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಶೇ. ೧೦೦ ರಷ್ಟು ಲಸಿಕಾಕರಣ ಪ್ರಗತಿಯನ್ನು ಸಾಧಿಸಲೇಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಲಸಿಕಾಕರಣ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಕಳೆದ ಜನವರಿಯಿಂದ ದಡಾರ ಮತ್ತು ರುಬೆಲ್ಲಾ ಸಂಶಯಾಸ್ಪದ 205 ಪ್ರಕರಣಗಳಲ್ಲಿ ಮಾದರಿ ರಕ್ತ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಮಂಚೇನಹಳ್ಳಿ ಭಾಗದಲ್ಲೆ 10 ಪ್ರಕರಣ ಗಳು ಕಂಡುಬಂದಿವೆ. ಶಿಡ್ಲಘಟ್ಟ ಮತ್ತು ಮಂಚೇನಹಳ್ಳಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಲಸಿಕಾ ಕರಣವು ಸಮರ್ಪಕವಾಗದಿರುವುದು ಕಂಡುಬಂದಿದೆ.
ಇದನ್ನೂ ಓದಿ: Chikkaballapur News: ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆ ಈಡೇರಿಕೆಯ ಮನವಿ ಪತ್ರ ಸಲ್ಲಿಕೆ
ಆರ್.ಸಿ.ಹೆಚ್. ಪೋರ್ಟಲ್ ಪ್ರಕಾರ 2025ರ ಏಪ್ರಿಲ್ ಮಾಹೆಯಿಂದ ಈವರೆಗೆ ದಡಾರ ಮತ್ತು ರುಬೆಲ್ಲಾ ನಿಯಂತ್ರಣದ ಲಸಿಕಾಕರಣವು ಶೇ.96ರಷ್ಟು ಪ್ರಗತಿ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಶೇ.100ರಷ್ಟು ಲಸಿಕಾಕರಣ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.
ಆರೋಗ್ಯ ಇಲಾಖೆಯಿಂದ ನೀಡಲಾಗುವ ಪೋಲಿಯೋ ಲಸಿಕೆ, ಇಂದ್ರ ಧನುಷ್ ಲಸಿಕೆ ಸೇರಿದಂತೆ ಎಲ್ಲಾ ರೀತಿಯ ಲಸಿಕೆಗಳನ್ನು ಮಕ್ಕಳಿಗೆ ನೀಡಿರುವ ಬಗ್ಗೆ ಪರಿಶೀಲಿಸಿ ಖಾತ್ರಿ ಪಡಿಸಿಕೊಂಡು ದೃಢೀಕರಣ ಪತ್ರವನ್ನು ಸಂಬAಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಗೂ ನಗರ ಆರೋಗ್ಯ ಕೇಂದ್ರಗಳ ಆರೋಗ್ಯಾಧಿಕಾರಿಗಳಿಂದ ಪಡೆದುಕೊಳ್ಳಬೇಕು.
ಮಗು ಜನನವಾದಾಗ ಆರೋಗ್ಯ ಇಲಾಖೆಯಿಂದ ನೀಡಬೇಕಾದ ಎಲ್ಲ ಲಸಿಕೆಗಳನ್ನು ಸಮರ್ಪಕವಾಗಿ ನೀಡಬೇಕು, ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡುವಾಗ ಡಿಸ್ಚಾರ್ಚ್ ಸಮ್ಮರಿಯಲ್ಲಿ ಹಾಗೂ ತಾಯಿ ಕಾರ್ಡ್ ನಲ್ಲಿ ಲಸಿಕಾಕರಣವಾಗಿರುವ ಬಗ್ಗೆ ಕಡ್ಡಾಯವಾಗಿ ನಮೂದಿಸಬೇಕು. ಈ ಎಲ್ಲಾ ಕಾರ್ಯಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ನಿಗಾ ವಹಿಸಿ ಖಾತ್ರಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ಇದ್ದರು.