ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫ್ಲೆಕ್ಸ್ ಮುಕ್ತ ಪ್ಲಾಸ್ಟಿಕ್ ಮುಕ್ತ ಘೋಷಣೆಗೆ ಮಾತ್ರ ಸೀಮಿತವೆ? ನಡುರಸ್ತೆಯಲ್ಲಿ ಅನಾಥವಾದ ಅಂಬೇಡ್ಕರ್ ಫ್ಲೆಕ್ಸ್

ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರವೂ ಸೇರಿದಂತೆ ಅಲ್ಲಲ್ಲಿ ಸ್ಥಳೀಯ ಸಂಸ್ಥೆಗಳು ಆಗಾಗ ದಾಳಿ ನಡೆಸಿ ಅಷ್ಟೋ ಇಷ್ಟೋ ಪ್ಲಾಸ್ಟಿಕ್ ವಶಪಡಿಸಿಕೊಂಡು ಸಣ್ಣಪುಟ್ಟ ದಂಡ ಹಾಕಿದ್ದು ಬಿಟ್ಟರೆ ದೊಡ್ಡ ಮಟ್ಟದ ಸುಧಾರಣೆ ಕಂಡಿಲ್ಲ. ಜಿಲ್ಲೆಯಾದ್ಯಂತ ಈ ಮೂರು ವರ್ಷಗಳಲ್ಲಿ ಎಗ್ಗು ಸಿಗ್ಗಿಲ್ಲದೆ ಫ್ಲೆಕ್ಸ್ ಮತ್ತು ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿ ಸಾಗಿದೆ. ಹೀಗಾಗಿ ಮುಕ್ತ ಎಂಬ ಈ ಘೋಷಣೆ ಜನಪ್ರತಿನಿಧಿಗಳು, ಅಧಿಕಾರಿಗಳ ಆರಂಭ ಶೂರತ್ವಕ್ಕೆ ಹಿಡಿದ ಕನ್ನಡಿಯಂತಾಗಿದೆ.

ಮುನಿರಾಜು ಎಂ ಅರಿಕೆರೆ

ಕಾರ್ಯಕ್ರಮ ಮುಗಿದ ನಂತರ ತೆರವು ಮಾಡದ ನಗರಾಡಳಿತ: ರಸ್ತೆಗೆ ಬಿದ್ದ ಬೋರ್ಡು ಗಳಿಂದ ಸಂಚಾರಕ್ಕೆ ತೊಂದರೆ

ಚಿಕ್ಕಬಳ್ಳಾಪುರ: 2023ರಲ್ಲಿ ಶಾಸಕರಾಗಿ ಆಯ್ಕೆಯಾದ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar )ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌(District In-charge Minister Dr. M.C. Sudhakar)ವರೆಗೆ ಮಾಡಿದ ಮೊಟ್ಟ ಮೊದಲ ಘೋಷಣೆ ಎಂದರೆ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ, ಫ್ಲೆಕ್ಸ್ ಮುಕ್ತ ಮಾಡುವುದೇ ಆಗಿತ್ತು. ಆದರೆ ಇದಾಗದಿರುವುದು ಸಾರ್ವಜನಿಕರಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.

ಕಾಯ್ದೆ ಜಾರಿಯಾಗಿದೆಯೆ?

ಅದಾಗಿ ಮೂರು ವರ್ಷಗಳೇ ಉರುಳಿವೆ. ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರವೂ ಸೇರಿದಂತೆ ಅಲ್ಲಲ್ಲಿ ಸ್ಥಳೀಯ ಸಂಸ್ಥೆಗಳು ಆಗಾಗ ದಾಳಿ ನಡೆಸಿ ಅಷ್ಟೋ ಇಷ್ಟೋ ಪ್ಲಾಸ್ಟಿಕ್ ವಶಪಡಿಸಿಕೊಂಡು ಸಣ್ಣಪುಟ್ಟ ದಂಡ ಹಾಕಿದ್ದು ಬಿಟ್ಟರೆ ದೊಡ್ಡ ಮಟ್ಟದ ಸುಧಾರಣೆ ಕಂಡಿಲ್ಲ. ಜಿಲ್ಲೆಯಾದ್ಯಂತ ಈ ಮೂರು ವರ್ಷಗಳಲ್ಲಿ ಎಗ್ಗು ಸಿಗ್ಗಿಲ್ಲದೆ ಫ್ಲೆಕ್ಸ್ ಮತ್ತು ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿ ಸಾಗಿದೆ. ಹೀಗಾಗಿ ಮುಕ್ತ ಎಂಬ ಈ ಘೋಷಣೆ ಜನಪ್ರತಿನಿಧಿಗಳು, ಅಧಿಕಾರಿಗಳ ಆರಂಭ ಶೂರತ್ವಕ್ಕೆ ಹಿಡಿದ ಕನ್ನಡಿಯಂತಾಗಿದೆ.

ಮಹಾತ್ಮರಿಗೆ ಅವಮಾನ
ಬಾಬು ಜಗಜೀವನ್ ರಾಮ್ ಇರಲಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಇರಲಿ ಇವರ ಭಾವಚಿತ್ರಗಳನ್ನು ಎಲ್ಲಿ ಹಾಕಬೇಕು. ಹೇಗೆ ಹಾಕಬೇಕು ಎಂಬ ಬಗ್ಗೆ ಸ್ಪಷ್ಟವಾದ ಸೂಚನೆಗಳಿವೆ.
ಆದರೂ ನಾವು ಹೆಚ್ಚು ನಾವು ಹೆಚ್ಚು ಎಂಬ ಹುಚ್ಚು ಅಭಿಮಾನಕ್ಕೆ ಕಟ್ಟುಬಿದ್ದ ಸಂಘ ಸಂಸ್ಥೆಗಳ ಮುಖಂಡರು, ಇವರ ತಾಳಕ್ಕೆ ತಕ್ಕಂತೆ ಕುಣಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದಂಡಿ ಯಾಗಿ ಫ್ಲೆಕ್ಸ್ʼಗಳನ್ನು ಮಾಡಿಸಿ ಹಾದಿ ಬೀದಿಯಲ್ಲಿ ಹಾಕಿಸಿರುವುದು ಸರಿಯಷ್ಟೆ. ಆದರೆ ಜಯಂತಿ ಮುಗಿದು ಎರಡು ದಿನವಾದರೂ ಇವುಗಳನ್ನು ತೆರವು ಮಾಡದಿರುವ ಕಾರಣ ಗಾಳಿಗೆ ಸಿಕ್ಕು ರಸ್ತೆಯ ಮೇಲೆಲ್ಲಾ ಹರಡಿಕೊಂಡು ಬೀಳುತ್ತಿವೆ. ಅವಮಾನಕ್ಕೆ ಕಾರಣವಾಗುತ್ತಿವೆ.

ಇದನ್ನೂ ಓದಿ: Chikkaballapur News: ಶಿಕ್ಷಣವನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಯಶಸ್ಸು ಕಂಡವರು ಬಾಬಾ ಸಾಹೇಬ ಅಂಬೇಡ್ಕರ್:  ಡಾ.ಎಂ.ಸಿ.ಸುಧಾಕರ್ ಅಭಿಮತ

ಇದರಿಂದಾಗಿ ಈ ಮಾರ್ಗದಲ್ಲಿ ವೇಗವಾಗಿ ಬರುವ ವಾಹನ ಸವಾರರು ಅನಗತ್ಯ ಅಪಾಯಕ್ಕೆ ಸಿಕ್ಕುವುದಲ್ಲದೆ, ಇವುಗಳ ಮೇಲೆ ಗಾಡಿಗಳನ್ನು ಹರಿಸಿದರಂತೂ ಸಂಘರ್ಷಕ್ಕೆ ಕಾರಣವಾಗು ವಂತಾಗಿದೆ. ಇಷ್ಟೆಲ್ಲಾ ರಾದ್ದಾಂತಕ್ಕೆ ಅವಕಾಶವಾಗುತ್ತಿದ್ದರೂ ಕೂಡ ನಗರಾಡಳಿತವಾಗಲಿ ಜಿಲ್ಲಾಡಳಿತವಾಗಲಿ ತೆರವಿಗೆ ಮುಂದಾಗದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಎಲ್ಲೆಲ್ಲೂ ಅವೇ??

ನಗರದ ಬಿಬಿ ರಸ್ತೆ, ಎಂಜಿ ರಸ್ತೆ, ಜೈಭೀಮ್ ಹಾಸ್ಟೆಲ್ ಆವರಣ, ಕನ್ನಡ ಭವನದ ಹೊರ ಮತ್ತು ಒಳಾವರಣದಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಮ್ ಅವರ ಆಳೆತ್ತರದ ಕಟೌಟ್‌ ಗಳನ್ನು ಅಳವಡಿಸಿರುವ ಕಾರ್ಯಕ್ರಮದ ಆಯೋಜಕರ ಬೇಜವಾಬ್ದಾರಿತನದಿಂದಾಗಿ ರಾಷ್ಟ್ರೀಯ ನಾಯಕರ ಭಾವಚಿತ್ರಗಳು ಅವಮಾನಕ್ಕೆ ಗುರಿಯಾಗುವಂತೆ ಆಗಿದೆ.

Flex

ಶಾಂತಿಭಂಗವಾಗದಿರಲಿ!!!

ಇನ್ನಾದರೂ ಸರಿಯೇ ಅನಾಹುತಕ್ಕೆ ಅಸ್ಪದ ನೀಡದಂತೆ ನಗರಾಡಳಿತವಾಗಲಿ, ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯಾಗಲಿ ತುರ್ತಾಗಿ ಕ್ರಮಕೈಗೊಂಡು ಇವುಗಳ ತೆರವಿಗೆ ಮುಂದಾ ಗಬೇಕು. ಇಲ್ಲವಾದಲ್ಲಿ ಏನಾದರು ಅನಾಹುತವಾದಲ್ಲಿ ಅದಕ್ಕೆ ಕಾರ್ಯಕ್ರಮದ ಆಯೋಜಕರೇ ನೇರ ಹೊಣೆಹೊರಬೇಕಾಗಬಹುದು.ಏಕೆಂದರೆ ಅಂಬೇಡ್ಕರ್ ಭಾವಚಿತ್ರವನ್ನು ವಿರೂಪ ಗೊಳಿಸಿರುವ ಸಾವಿರಾರು ಪ್ರಕರಣಗಳನ್ನು ದೇಶದೆಲ್ಲೆಡೆ ಕಾಣುತ್ತೇವೆ. ಇಂತಹ ಸಂದರ್ಭವನ್ನು ಬಳಸಿಕೊಳ್ಳುವ ಕಿಡಿಗೇಡಿಗಳಿಂದ ಸಮಾಜದ ಶಾಂತಿಭಂಗವಾಗುವುದಿಲ್ಲ ಎಂದು ಹೇಳಲು ಬಾರದು. ಇಂತಹ ವಿಪರೀತಗಳಿಗೆ ಆಸ್ಪದ ನೀಡದಂತೆ ಈ ಕೂಡಲೇ ನಗರಸಭೆ ಅನುಮತಿಯಿಲ್ಲದೆ ಕಟ್ಟಿರುವ ಎಲ್ಲಾ ಫ್ಲೆಕ್ಸ್‌ʼಗಳನ್ನು ತೆರವು ಮಾಡಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್ ಮುಕ್ತ, ಫ್ಲೆಕ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಮೂಲಕ ತಾವೇ ರೂಪಿಸಿರುವ ಕಾನೂನಿಗೆ ಬೆಲೆತರುವ ಕೆಲಸ ಮಾಡಲಿ ಎನ್ನುವುದು ಪರಿಸರ ಪ್ರೇಮಿಗಳು, ರಾಷ್ಟ್ರೀಯ ನಾಯಕರ ಅಭಿಮಾನಿಗಳ ಆಗ್ರಹವಾಗಿದೆ.