Chikkaballapur News: ಶಿಕ್ಷಣವನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಯಶಸ್ಸು ಕಂಡವರು ಬಾಬಾ ಸಾಹೇಬ ಅಂಬೇಡ್ಕರ್: ಡಾ.ಎಂ.ಸಿ.ಸುಧಾಕರ್ ಅಭಿಮತ
ಅತ್ಯುನ್ನತ ಶಿಕ್ಷಣ ಪಡೆದವರನ್ನು ಪ್ರಪಂಚದಲ್ಲಿ ಎಲ್ಲರೂ ತಲೆ ಎತ್ತಿ ನೋಡುತ್ತಾರೆ. ಜಗತ್ತಿನ ಎಲ್ಲಾ ಭಾಗಗಳಿಂದ ಕೌಶಲ್ಯಯುತ ಜ್ಞಾನವಂತರಿಗೆ ಬೇಡಿಕೆ ಇದೆ. ಅಂಬೇಡ್ಕರ್ ಅವರ ಸಮ ಸಮಾಜದ ಆಶಯ ಈಡೇರಬೇಕಾದರೆ ನಮ್ಮ ಸಂವಿಧಾನ ನೀಡಿರುವ ಎಲ್ಲ ಅವಕಾಶಗಳನ್ನು ಎಲ್ಲರೂ ಮುಕ್ತವಾಗಿ ಬಳಸಿಕೊಳ್ಳುವ ಸಂದರ್ಭವನ್ನು ಒದಗಿಸಬೇಕು. ಇದಾಗಬೇಕಾದರೆ ಎಲ್ಲರೂ ಶಿಕ್ಷಣವನ್ನು ಮೊದಲು ಪಡೆಯಬೇಕು
-
ಚಿಕ್ಕಬಳ್ಳಾಪುರ : ಸಂವಿಧಾನ ಶಿಲ್ಪಿ,ಮಹಾ ಮಾನವತಾವಾದಿ ಡಾ. ಬಿ ಆರ್ ಅಂಬೇಡ್ಕರ್ ಸಾಧಿಸಿ ತೋರಿಸಿದಂತೆ "ಎಂತಹುದೇ ಕಠಿಣ ಸನ್ನಿವೇಶಗಳೇ ಎದುರಾದರೂ ಅದನ್ನು ಭೇದಿಸಿ ಜಯ ಗಳಿಸಲು ಹಣ ಅಧಿಕಾರ ಅಂತಸ್ತಿಗಿಂತ ಶಿಕ್ಷಣ ಎಂಬ ಮಹಾ ಅಸ್ತ್ರದಿಂದ ಮಾತ್ರ ಸಾಧ್ಯ" ಎಂಬು ದನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್(District In-charge and Higher Education Minister Dr. M.C. Sudhakar)ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ಜಯಂತಿಯ ಕಾರ್ಯಕ್ರಮದಲ್ಲಿ "ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಒತ್ತು ನೀಡಿ ಅದರಂತೆ ನಡೆದುಕೊಂಡವರು. ಅತ್ಯುನ್ನತ ಶಿಕ್ಷಣ ಪಡೆದವರನ್ನು ಪ್ರಪಂಚದಲ್ಲಿ ಎಲ್ಲರೂ ತಲೆ ಎತ್ತಿ ನೋಡುತ್ತಾರೆ. ಜಗತ್ತಿನ ಎಲ್ಲಾ ಭಾಗಗಳಿಂದ ಕೌಶಲ್ಯಯುತ ಜ್ಞಾನವಂತರಿಗೆ ಬೇಡಿಕೆ ಇದೆ. ಅಂಬೇಡ್ಕರ್ ಅವರ ಸಮ ಸಮಾಜದ ಆಶಯ ಈಡೇರಬೇಕಾದರೆ ನಮ್ಮ ಸಂವಿಧಾನ ನೀಡಿರುವ ಎಲ್ಲ ಅವಕಾಶಗಳನ್ನು ಎಲ್ಲರೂ ಮುಕ್ತವಾಗಿ ಬಳಸಿಕೊಳ್ಳುವ ಸಂದರ್ಭವನ್ನು ಒದಗಿಸಬೇಕು. ಇದಾಗಬೇಕಾದರೆ ಎಲ್ಲರೂ ಶಿಕ್ಷಣವನ್ನು ಮೊದಲು ಪಡೆಯಬೇಕು ಎಂದು ಯುವ ಪೀಳಿಗೆಗೆ ಸಲಹೆ ನೀಡಿದರು.
ಇದನ್ನೂ ಓದಿ: Chikkaballapur News: ಶ್ರೀಮಂತಿಕೆ ಮತ್ತು ಅಧಿಕಾರ ಪೂಜಿಸುವಂತಹ ಸಮಾಜ ಅಗಿದೆ, ಪ್ರಾಮಾಣಿಕರಿಗೆ ಯಾವುದೇ ಬೆಲೆಯಿಲ್ಲ
ಮಿನಿ ದಸರಾ ವೈಭವ
ಡಾ. ಅಂಬೇಡ್ಕರ್ ಜಯಂತಿಯ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಕಾರ್ಯಕ್ರಮ ಬಹಳ ವಿಜೃಂಭಣೆ ಯಿಂದ ನಡೆದಿರುವುದು ಸಂತಸ ತಂದಿದೆ. ನಗರದಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಿದೆ. ಮೈಸೂರಿನ ಜಂಬೂ ಸವಾರಿಯ ಮೆರವಣಿಗೆಯ ರೀತಿಯಲ್ಲಿ ಸ್ಥಬ್ಧ ಚಿತ್ರಗಳು, ಪಲ್ಲಕ್ಕಿಗಳು ಕಲಾತಂಡದೊAದಿಗೆ ಅದ್ದೂರಿ ಮೆರವಣಿಗೆಯು ಆಯೋಜನೆಗೊಂಡಿದೆ. ಜಿಲ್ಲಾಡಳಿತದ ಎಲ್ಲ ಇಲಾಖೆಗಳು ಈ ಕಾರ್ಯಕ್ಕಾಗಿ ಆಹರ್ನಿಶಿ ಶ್ರಮಿಸಿವೆ.ಈ ರೀತಿಯ ಆಚರಣೆಗಳು ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ಇನ್ನೂ ಹತ್ತಿರಕ್ಕೆ ತಲುಪಿಸಲು ಸಹಾಯಕವಾಗಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಹಾರ ಸ್ವಾವಲಂಬನೆ
ಇರಾನ್ ಇಸ್ರೇಲ್ ಯುದ್ಧದ ನಡುವೆ ನಾವಿದ್ದೇವೆ. ಭಾರತದಲ್ಲಿ ತೈಲಕ್ಕೆ ಕೊರತೆಯಾಗಿದ್ದರೂ ಆಹಾರಕ್ಕೆ ಕೊರತೆಯಾಗಿಲ್ಲ. ಆಹಾರ ಸ್ವಾವಲಂಬನೆಗೆ ಕಾರಣವೇ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಆಗಿದ್ದಾರೆ. ಇವರ ಸುಧೀರ್ಘ ರಾಜಕೀಯ ಪಯಣ ಯಾರೂ ಮೀರಲು ಸಾಧ್ಯ ವಿಲ್ಲ. ಶ್ರದ್ಧೆ ಶಿಸ್ತು ಇದ್ದರೆ ಯಾವ ಹಂತಕ್ಕೆ ಬೇಕಿದ್ದರೂ ಏರಬಹುದು ಎಂಬುದಕ್ಕೆ ಇವರಿಬ್ಬರು ಜ್ವಲಂತ ನಿದರ್ಶನ ಎಂದರು.
4 ಕೋಟಿ ಸರಕಾರ ಕೊಡಲಿದೆ!!!
ಊರಿಂದಾಚೆ ಮಾಡಲು ನನಗೆ ಮನಸ್ಸಿಲ್ಲ. ನಗರದಲ್ಲೇ ಒಂದೆರಡು ಜಾಗ ಇದೆ. ಸೂಕ್ತ ಜಾಗ ಹುಡುಕಿ ಕೊಡಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಕಟ್ಟಡಕ್ಕೆ ಭೂಮಿ ಕೊಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಶೀಘ್ರವೇ ಈ ಕೆಲಸ ಮಾಡಲಾಗುವುದು. ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೪ ಕೋಟಿ ಸರ್ಕಾರ ನೀಡಲಿದೆ.ಸುಸಜ್ಜಿತ ಕಟ್ಟಡಕ್ಕೆ ಇನ್ನೂ ಹೆಚ್ಚಿನ ಅನುದಾನ ಬೇಕು.ಇದಕ್ಕೆ ಸಮುದಾಯದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ನೀವು ಜಿಲ್ಲಾ ಉಸ್ತುವಾರಿ ಮಂತ್ರಿ ಚಿಕ್ಕಬಳ್ಳಾಪುರ ನಿಮಗೂ ಸೇರಲಿದೆ. ಚಿಂತಾಮಣಿಯಂತೆ ಇಲ್ಲೂ ಸುಸಜ್ಜಿತ ಭವನ ನಿರ್ಮಾಣ ಮಾಡಲು ಮುಂದಾಗಿ ಎನ್ನುವ ಮೂಲಕ ನಿಮ್ಮ ಮಾತು ಘೋಷಣೆಗೆ ಸೀಮಿತ ವಾಗದೆ ಕಾರ್ಯರೂಪಕ್ಕೆ ಬರಲಿ ಎಂದು ತಾಕೀತು ಮಾಡಿದ ಘಟನೆ ನಡೆಯಿತು.
ರಾಜ್ಯಕ್ಕೆ ಮಾದರಿ!!
ಚಿಂತಾಮಣಿಯಲ್ಲಿ ನೂತನ ಅಂಬೇಡ್ಕರ್ ಭವನದಲ್ಲಿ ಬಾಬಾ ಸಾಹೇಬರ ಜೀವನ ಸಾಧನೆ ಅನಾವರಣ ಮಾಡೋಣ.ಕಂಚಿನ ಪ್ರತಿಮೆ ಇಂದು ಲೋಕಾರ್ಪಣೆ ಆಗಲಿದೆ.ಇಲ್ಲಿಯೇ ಬುದ್ದರ ವಿಗ್ರಹ ಸ್ಥಾಪಿಸಲು ಕ್ರಮವಹಿಸಲಾಗಿದೆ.ಒಟ್ಟಾರೆ ಚಿಂತಾಮಣಿ ಅಂಬೇಡ್ಕರ್ ಭವನ ಕರ್ನಾಟಕ್ಕೆ ಮಾದರಿಯಾಗಲಿದೆ ಎಂದರು.
ಒಟ್ಟಾಗಿ ನಡೆಯಿರಿ!!!
ಅಸ್ಪೃಷ್ಯ ವರ್ಗವು ಸದಾ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಅಣ್ಣತಮ್ಮಂದಿರ ನಡುವೆ ಭಿನ್ನಾಭಿ ಪ್ರಾಯ ಬರುವುದು ಸಹಜ.ಒಂದೇ ಕುಟುಂಬದ ಸದಸ್ಯರಂತೆ ನಡೆದರೆ ಉತ್ತಮ ಭವಿಷ್ಯವಿರಲಿದೆ. ಏನೇ ಆಗಲಿ ನಿಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿ ಎನ್ನುವ ಮೂಲಕ ಒಳಮೀಸಲಾತಿ ಯಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಹೆಸರು ಹೇಳದೆಯೇ ಪ್ರಸ್ತಾಪಿಸಿದ್ದು ವಿಶೇಷ ವಾಗಿತ್ತು.
ಜಿಲ್ಲಾಧಿಕಾರಿ ಪ್ರಭು ಜಿ ಮಾತನಾಡಿ, ಜಗತ್ತಿನ ಎಲ್ಲ ಸಂವಿಧಾನಗಳನ್ನು ಅಧ್ಯಯನ ಮಾಡಿ ಅವು ಗಳಲ್ಲಿರುವ ಗಟ್ಟಿತನದ ಸಕಾರಾತ್ಮಕ ಅಂಶಗಳನ್ನು ಆಯ್ದುಕೊಂಡು ಶ್ರೇಷ್ಠ ಸಂವಿಧಾನವನ್ನು ನಮಗೆ ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿದ್ದಾರೆ. ಪ್ರತಿಯೊಬ್ಬ ನಾಗರಿಕನಿಗೆ ಬೇಕಾಗಿರುವ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವ ಅವಕಾಶಗಳನ್ನು ಹಾಗೂ ಆತ್ಮಗೌರವ ಕಾಪಾಡಿ ಕೊಳ್ಳುವ ವ್ಯವಸ್ಥೆಯನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಇಂತಹ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರು ವಿಶ್ವ ಮಾನ್ಯತೆ ಪಡೆದು ಅಮರರಾಗಿದ್ದಾರೆ. ಅವರ ಜೀವನ ಸಾಧನೆಗಳು ನಮಗೆ ದಾರಿದೀಪವಾಗಬೇಕು. ಕೆಲವೇ ಕೆಲವು ಮಹಾತ್ಮರಿಗೆ ಮಾತ್ರ ಜನಮಾನಸದಿಂದ ಬಿರುದು ಗಳು ಲಭಿಸಿವೆ ಗಾಂಧೀಜಿಯವರಿಗೆ ಮಹಾತ್ಮ ಎಂದು, ಅಂಬೇಡ್ಕರ್ ಅವರಿಗೆ ಬಾಬಾ ಸಾಹೇಬ್ ಎಂಬ ಬಿರುದುಗಳು ದೊರಕಿರುವುದು ವಿಶಿಷ್ಟವಾದದ್ದು ಎಂದು ಬಣ್ಣಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೃಷ್ಣರಾಜ್ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನ ಸಾಧನೆಗಳ ವಿವಿಧ ಮಜಲುಗಳ ಬಗ್ಗೆ ನೀಡಿದ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿತು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಡಳಿತದ ಇಲಾಖೆಗಳು ಹಾಗೂ ಗ್ರಾಮ ಪಂಚಾಯಿತಿಗಳ ವತಿ ಯಿಂದ ನಿರ್ಮಾಣಗೊಂಡಿದ್ದ ನೂರಾರು ಸ್ಥಬ್ಧ ಚಿತ್ರಗಳು, ಪಲ್ಲಕ್ಕಿಗಳು ಚಿಕ್ಕಬಳ್ಳಾಪುರ ನಗರದ ತುಂಬಾ ರಾರಾಜಿಸಿದವು. ಕೀಲು ಕುದುರೆ,ಸೋಮನ ಕುಣಿತ ಡೊಳ್ಳು ಕುಣಿತ ಜನರ ಗಮನ ಸೆಳೆದು ಅದ್ದೂರಿ ಮೆರವಣಿಗೆಗೆ ಸಾಕ್ಷಿಯಾದವು. ನಗರ ಮಧುವಣಗಿತ್ತಿಯಂತೆ ಸಿಂಗಾರಗೊAಡು ಹಬ್ಬದ ವಾತಾವರಣ ಮಡುಗಟ್ಟಿತ್ತು. ಮೆರವಣಿಗೆಯು ಎಂಜಿ ರಸ್ತೆಯ ಜೈ ಭೀಮ್ ವಸತಿ ನಿಲಯದಿಂದ ಆರಂಭಗೊAಡು ಕನ್ನಡಭವನದವರೆಗೂ ಅದ್ದೂರಿಯಾಗಿ ಸಾಗಿತು.
ಈ ಸಂದರ್ಭದಲ್ಲಿ ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ ಸಿ ಮುದ್ದು ಗಂಗಾಧರ್, ರಾಜ್ಯ ಬೀಜ ನಿಗಮದ ಅಧ್ಯಕ್ಷ ಅಂಜಿನಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ ನವೀನ್ ಭಟ್, ಪೊಲೀಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ,, ಜಿಲ್ಲಾ ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್ ರಮೇಶ್,ಉಪವಿಭಾಗಾಧಿಕಾರಿ ಡಿ ಎಚ್ ಅಶ್ವಿನ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ಎನ್ ಕೇಶವರೆಡ್ಡಿ,ಮಾಜಿ ಶಾಸಕಿ ಅನುಸೂಯಮ್ಮ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜಾನಂದ ರೆಡ್ಡಿ, ತಹಶೀಲ್ದಾರ್ ರಶ್ಮಿ, ಸರ್ಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ, ಸರ್ಕಾರೇತರ ಸಂಸ್ಥೆಗಳ ಹಾಗೂ ದಲಿತ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.