ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ಡಿ.12ರಿಂದ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಜಾರಿ ಮಾಡಿರುವ ಬೆನ್ನಲ್ಲೇ ಸಂಚಾರಿ ಪೊಲೀಸರು ದಂಡಾಸ್ತ್ರ ಪ್ರಯೋಗಕ್ಕೆ ಯಮವೇಗದಲ್ಲಿ ಮುಂದಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಅನ್ಯ ರಾಜ್ಯಗಳ ಹೆಲ್ಮೆಟ್ ವ್ಯಾಪಾರಿಗಳು ಹಾದಿ ಬೀದಿಯಲ್ಲಿ ನಾನಾ ನಮೂನೆಯ ಹೆಲ್ಮೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟಕ್ಕಿಳಿದಿರುವುದು ಜನತೆಗೆ ಸಂತೋಷದ ಜತೆಗೆ ಆತಂಕವನ್ನು ಉಂಟು ಮಾಡುತ್ತಿದೆ.
ಹೌದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ನ್ಯಾಯಾಲಯ ಮತ್ತು ಕಾನೂನು ಸೇವಾ ಆಯೋಗದ ಜಂಟಿ ಸಹಯೋಗದಲ್ಲಿ ನಾಗರೀಕರ ಸುರಕ್ಷೆ ದೃಷ್ಟಿಯಿಂದ ಜಿಲ್ಲಾಡಳಿತ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿ ಮಾಡಿದೆ.
ಇದೇ ಅವಕಾಶಕ್ಕಾಗಿ ಕಾದಂತಿದ್ದ ಪೊಲೀಸ್ ಇಲಾಖೆ ದಂಡಾಸ್ತ್ರದ ಹೆಸರಲ್ಲಿ ಭರ್ಜರಿಯಾಗಿಯೇ ಬೇಟೆಗೆ ಇಳಿದಿದೆ. ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ 1250ಕ್ಕೂ ಹೆಚ್ಚು ಮಂದಿಯ ವಿರುದ್ಧ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು ಸರಿ ಸುಮಾರು 6.25 ಲಕ್ಷದಷ್ಟು ದಂಡ ವಸೂಲಿ ಮಾಡಿದ್ದಾರೆ.
ಜಿಲ್ಲಾ ತಾಲೂಕು ಕೇಂದ್ರಗಳ ಪ್ರವೇಶಕ್ಕೆ ಹೆಲ್ಮೆಟ್ ಕಡ್ಡಾಯವಂತೆ, ಇದಿಲ್ಲದಿದ್ದರೆ ದಂಡ ಹಾಕು ತ್ತಾರೆ ಎಂಬ ಸುದ್ದಿ ಗ್ರಾಮೀಣರಿಗೆ ಕಾಡ್ಗಿಚ್ಚಿನಂತೆ ಹರಡಿದೆ. ಪರಿಣಾಮ, ಕೆಲವರು ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳ ಪ್ರವೇಶಕ್ಕೆ ಅಡ್ಡದಾರಿಗಳನ್ನು ಹಿಡಿಯುತ್ತಿರುವುದು ಕಂಡು ಬರುತ್ತಿದೆ.
ಮತ್ತೂ ಕೆಲವರು ದಂಡಾಸ್ತ್ರದಿಂದ ಪಾರಾಗಲು ಮನೆಯಲ್ಲಿದ್ದ ಯಾವ್ಯಾವುದೋ ಹಳೆಯ ಹೆಲ್ಮೆಟ್‌ಗಳನ್ನು ಧರಿಸಿ ಬರುತ್ತಿದ್ದರೆ, ಮಗದೊಂದಷ್ಟು ಮಂದಿ ಕಳಪೆ ಗುಣಮಟ್ಟದ ಹೆಲ್ಮೆಟ್ ಗಳನ್ನು ಕೊಳ್ಳಲು ಮುಂದಾಗಿರುವುದು ಆದೇಶದ ಸಾರ್ಥಕತೆಯನ್ನು ನಿರರ್ಥಕವಾಗಿಸುವಂತಿದೆ.
ಬಿಹಾರ ದೆಹಲಿ ವ್ಯಾಪಾರಿಗಳು
ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮೈಸೂರು, ದೆಹಲಿ, ರಾಜಸ್ಥಾನ, ಬಿಹಾರ ಮೂಲದ ವ್ಯಾಪಾರಿಗಳು ಹೆಲ್ಮೆಟ್‌ಗಳನ್ನು ಇಟ್ಟುಕೊಂಡು ವ್ಯಾಪಾರಕ್ಕಿಳಿದಿದ್ದಾರೆ. ಆಕರ್ಷಕವಾದ ಬಣ್ಣಗಳ ಹೆಲ್ಮೆಟ್‌ಗಳನ್ನು 300 ರಿಂದ 500 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇವುಗಳು ನೋಡಲು ಸುಂದರ ಬಣ್ಣದಿಂದ ಕೂಡಿ, ಹಿಂಬದಿಯಲ್ಲಿ ಐಎಸ್‌ಐ ಮಾರ್ಕಿನ ಚಿತ್ರವಿದ್ದರೂ ಗುಣಮಟ್ಟದಲ್ಲಿ ಕಡಿಮೆ ಎನಿಸುತ್ತದೆ. ಆದರೂ ಕೂಡ ದಂಡದಿಂದ ಪಾರಾಗುವ ಉಪಾಯ ಹುಡುಕಿರುವ ದ್ವಿಚಕ್ರವಾಹನ ಸವಾರರು ಇಂತಹ ಕಡಿಮೆ ಬೆಲೆಯ ಹೆಲ್ಮೆಟ್‌ಗಳನ್ನು ಧರಿಸಲು ಮನಸ್ಸು ಮಾಡಿರುವುದು ಸರಿಯಲ್ಲ. ಒಮ್ಮೆ ಗುಣಮಟ್ಟದ ಜೀವವುಳಿಸುವ ಗಟ್ಟಿಮುಟ್ಟಾದವು ಗಳನ್ನು ಕೊಳ್ಳಲು ಮುಂದಾಗಲಿ ಎನ್ನುವುದೇ ಹೆಸರು ಹೇಳಲು ಇಚ್ಛಿಸದ ಪೊಲೀಸ್ ಇಲಾಖೆ ಅಧಿಕಾರಿಗಳ ಮಾತಾಗಿದೆ.
ಉದ್ದೇಶ ಅರಿಯಬೇಕು
ಜಿಲ್ಲೆಯಲ್ಲಿ ನಡೆದಿರುವ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಮಂದಿ ಸಾವನ್ನಪ್ಪಿರುವುದು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಆಗಿದೆ. ಇವರೆಲ್ಲಾ ಯುವಕರೇ ಎಂಬುದು ನೋವಿನ ಸಂಗತಿಯಾಗಿದೆ. ಅಲ್ಲದೆ ತಲೆಗೆ ಪೆಟ್ಟಾದ ಕಾರಣ ಸಾವು ಸಂಭವಿಸಿದೆ ಎಂಬುದನ್ನು ಮನಗಂಡ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ನ್ಯಾಯಾಲಯ ಮತ್ತು ಕಾನೂನು ಸೇವಾ ಆಯೋಗ ಸುಪ್ರಿಂ ಕೋರ್ಟಿನ ಆದೇಶದ ಹಿನ್ನೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿ ಮಾಡಿದೆ. ಇದನ್ನು ಅರಿಯದ ನಾಗರೀಕರು ದಂಡದಿಂದ ಪಾರಾಗುವ ಏಕೈಕ ಉದ್ದೇಶದಿಂದ ಯಾವ್ಯಾವುದೋ ಗುಣಮಟ್ಟವಿಲ್ಲದ ಹೆಲ್ಮೆಟ್ ಧರಿಸಲು ಮುಂದಾಗುತ್ತಿದ್ದಾರೆ.ಇದು ಸರಿಯಲ್ಲ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಿದೆ.
ಘನತೆಯಿರಲಿ
ಹೀಗೆ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ದಂಡದಿಂದ ಪಾರಾಗಿ ಎಂದು ಹೇಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಬೀದಿಗಿಳಿದಿರುವುದು ಪೊಲೀಸರ ಕಾರ್ಯಕ್ಷಮತೆ ಯ ಮೇಲೆ ನೇರ ಪರಿಣಾಮ ಬೀರಿದೆ. ಯಾರಿಗೂ ಕೂಡ ರಿಯಾಯಿತಿ ನೀಡದೆ ದಂಡ ಹಾಕುವ ಮೂಲಕ ನಿಯಮ ಪಾಲಿಸುವ ಪಾಠ ಮಾಡುತ್ತಿದ್ದಾರೆ.ಏನೇ ಆಗಲಿ ನಿಯಮ ಪಾಲಿಸಿದಾಗ ಮಾತ್ರವೇ ನಿಯಮಕ್ಕೂ ಗೌರವ, ನಾಗರೀಕರಿಗೂ ಘನತೆ ಪ್ರಾಪ್ತಿಯಾಗಲಿದೆ ಎನ್ನುವುದು ಸತ್ಯ.
ಜಿಲ್ಲೆಯೆಲ್ಲೆಡೆ ಸಂಚಲನ
ಹೆಲ್ಮೆಟ್ ಜಾಗೃತಿ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿರುವುದು ಸುಳ್ಳಲ್ಲ. ಪೊಲೀಸರು ಸಮರ ವೀರರಂತೆ ಅಲ್ಲಲ್ಲಿ ನಿಂತು ಹೆಲ್ಮೆಟ್ ಧರಿಸದೆ ಬರುವವರನ್ನು ಹಿಡಿದು ಮೊದಲಿಗೆ 500 ರೂ ದಂಡ ಹಾಕುತ್ತಿದ್ದಾರೆ.ಎರಡನೇ ಬಾರಿ ಇದು ಮುಂದುವರೆದಿರೆ 1000 ರೂಪಾಯಿ ದಂಡ ತೆರಬೇಕು. ಮೂರನೇ ಬಾರಿ ಮುಂದುವರೆದರೆ ಡಿ.ಎಲ್ ಕ್ಯಾನ್ಸ್÷ಲ್ ಆಗಲಿದೆ.ಇದನ್ನು ಮನಗಂಡು ಸಂಚಾರಿ ನಿಯಮಗಳನ್ನು ಪಾಲಿಸಿ ಡಂಡದಿAದ ಪಾರಾಗೋಣ ಎನ್ನುವುದೇ ವಿಶ್ವವಾಣಿ ಪತ್ರಿಕೆಯ ಕಳಕಳಿ ಯಾಗಿದೆ.
ಕಾನೂನು ಗೌರವಿಸೋಣ..
ಜಿಲ್ಲಾ ಪೊಲೀಸರ ಕಳಕಳಿ ಕಾಳಜಿ ಕೇವಲ ದಂಡ ಹಾಕಿ ಹೆದರಿಸುವುದಲ್ಲ. ಕೇವಲ ದಂಡದಿAದ ಮಾತ್ರ ಪಾರಾಗಲು ಹೆಲ್ಮೆಟ್ ಧರಿಸಿದರೆ ಸಾಲದು. ಹದಿಹರೆಯದ ಶಾಲಾ ಕಾಲೇಜು ಮಕ್ಕಳ ಕೈಗೆ ದ್ವಿಚಕ್ರವಾಹನಗಳನ್ನು ಕೊಡದಂತೆ ಎಚ್ಚರವಹಿಸಬೇಕು. ವಾಹನಕ್ಕೆ ವಿಮೆ ಮಾಡಿಸಿರಬೇಕು. ಸವಾರರು ಕಡ್ಡಾಯವಾಗಿ ವಾಹನ ಚಾಲನ ಪರವಾನಗಿ ಹೊಂದಿರಬೇಕು. ವಾಹನವನ್ನು ಸಂಚಾರಿ ನಿಯಮಗಳಂತೆ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ವಾಹನವನ್ನು ರಸ್ತೆಗೆ ತರುವ ಮೊದಲು ತಲೆಗೆ ಹೆಲ್ಮೆಟ್ ಧರಿಸುವುದನ್ನು ರೂಢಿಸಿಕೊಳ್ಳಬೇಕು. ಇಷ್ಟೆಲ್ಲಾ ಇದ್ದಾಗ ಮಾತ್ರ ಜೀವ ಮತ್ತು ಜೀವನ ಸುರಕ್ಷಿತವಾಗಿರಲಿದೆ.ನೆಲದ ಕಾನೂನು ಕೂಡ ಪಾಲನೆ ಆಗಲಿದೆ ಎನ್ನುವುದು ಕರ್ನಾಟಕ ರಕ್ಷಣಾ ಸಮಿತಿ ರಾಜ್ಯ ಗೌರವಾಧ್ಯಕ್ಷ ಮತ್ತು ಏಡುಕೊಂಡಲ ಡೆವಲರ‍್ಸ್ ಮಾಲಿಕ ಶ್ರೀನಿವಾಸ್ ಅವರ ಮಾತಾಗಿದೆ.
*
ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಯ ಬಗ್ಗೆ ಮಾಧ್ಯಮಗಳಲ್ಲಿ ಓದಿ ತಿಳಿದ ಪರಿಣಾಮ ಇಲ್ಲಿ ವ್ಯಾಪಾರ ಆಗುತ್ತದೆ ಎಂದು ಭಾವಿಸಿ ಹೆಲ್ಮೆಟ್ ಮಾರಾಟ ಮಾಡಲು ಬಂದಿದ್ದೇವೆ. ಆದರೆ ನಾವು ಅಂದುಕೊಂಡಂತೆ ವ್ಯಾಪಾರ ಆಗುತ್ತಿಲ್ಲ. ನಮ್ಮಲ್ಲಿ 350, 500 ಮೌಲ್ಯದ ಹೆಲ್ಮೆಟ್ ಇವೆ. ಬೆಳಗಿನಿಂದ 20 ಹೆಲ್ಮೆಟ್ ಮಾರಾಟ ಮಾಡಿದ್ದೇವೆ. ಇದೇ ರೀತಿ ವ್ಯಾಪಾರ ಆದರೆ ಊಟಕ್ಕೂ ಏನೂ ಉಳಿಯುವುದಿಲ್ಲ ಎನ್ನುವುದು ಮೈಸೂರಿನ ವ್ಯಾಪಾರಿ ಮಹೇಶ್ ಅವರ ಮಾತು.
ದೆಹಲಿಯಿಂದ ಹೆಲ್ಮೆಟ್ ಖರೀದಿ ಮಾಡಿ ಇಲ್ಲಿ ಮಾರಾಟ ಮಾಡಲು ಬಿಹಾರದಿಂದ ಬರಲಾಗಿದೆ. ಶನಿವಾರ ದಿನವಿಡೀ ಮಾರಿದರೂ 9 ಹೆಲ್ಮೆಟ್ ಮಾರಾಟವಾಗಿವೆ. ಒಂದು ಹೆಲ್ಮೆಟ್ ಮಾರಿದರೆ 50 ರೂಪಾಯಿ ದೊರೆಯಲಿದೆ. ನಾವು ಉಳಿದುಕೊಳ್ಳಲು, ಊಟ ಮಾಡಲು ಕೂಡ ಇದರಿಂದ ಆಗುವು ದಿಲ್ಲ. ಕಾನೂನು ಜಾರಿಯಾಗಿದ್ದರೂ ಜನತೆ ಖರೀದಿಗೆ ಆಸಕ್ತಿ ತೋರುತ್ತಿಲ್ಲ ಎಂದು ಬಿಹಾರ ಮೂಲದ ಧೀರಜ್ ಕುಮಾರ್ ಹೇಳುತ್ತಾರೆ.