Chikkaballapur News: ಮೀಸಲಾತಿ ನೀಡುವ ಬಗ್ಗೆ ಅಫಿಡವಿಟ್ ಸಲ್ಲಿಸಿದರೆ ಹೈಕೋರ್ಟಿನಲ್ಲಿನ ದಾವೆ ವಾಪಸ್ಸು ಪಡೆಯುತ್ತೇವೆ : ಅಲೆಮಾರಿ ಮುಖಂಡ ಡಾ.ಡಿ.ವಿ.ಶ್ರೀನಿವಾಸ್ ಹೇಳಿಕೆ
ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರ ಜಾರಿಮಾಡಿರುವ ಒಳಮೀಸಲಾತಿ ಅವೈಜ್ಞಾ ನಿಕವಾಗಿದೆ. ಇದನ್ನು ಅಲೆಮಾರಿ ಬುಡಕಟ್ಟು ಮಹಾಸಭಾ, ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಾಗಮೋಹನ್ ದಾಸ್ ವರದಿಯಲ್ಲಿರುವಂತೆ ಎಬಿಸಿಡಿಇ ಎಂದು ವರ್ಗೀಕರಿಸಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ನೀಡಲಾಗಿತ್ತು
-
ಚಿಕ್ಕಬಳ್ಳಾಪುರ : ರಾಜ್ಯ ಸರಕಾರಕ್ಕೆ ತಬ್ಬಲಿ ಸಮುದಾಯಗಳಾದ ಅಲೆಮಾರಿಗಳ ಬಗ್ಗೆ ಪ್ರೀತಿ ಅನುಕಂಪವಿದ್ದಲ್ಲಿ ಕೂಡಲೇ ಹೈಕೋರ್ಟಿಗೆ ನಾಗಮೋಹನ್‌ದಾಸ್ ವರದಿ(Nagamohandas Report)ಯಂತೆ ಶೇ.೧ಷ್ಟು ಮೀಸಲಾತಿ ಒದಗಿಸುತ್ತೇವೆ ಎಂದು ಹೈಕೋರ್ಟಿಗೆ ಅಫಿಡವಿಟ್ ಸಲ್ಲಿಸಲಿ. ಆ ಕೂಡಲೇ ನಾವು ಸರಕಾರದ ವಿರುದ್ಧದ ದಾವೆಯನ್ನು ವಾಪಸ್ಸು ಪಡೆಯುತ್ತೇವೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ್ ಸರಕಾರವನ್ನು ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷಿಯಲ್ಲಿ ಮಾತನಾಡಿದರು.
ಸುಪ್ರಿಂಕೋರ್ಟ್(Supreme Court) ನಿರ್ದೇಶನದಂತೆ ರಾಜ್ಯ ಸರಕಾರ ಜಾರಿಮಾಡಿರುವ ಒಳಮೀಸಲಾತಿ ಅವೈಜ್ಞಾ ನಿಕವಾಗಿದೆ. ಇದನ್ನು ಅಲೆಮಾರಿ ಬುಡಕಟ್ಟು ಮಹಾಸಭಾ, ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಾಗಮೋಹನ್ ದಾಸ್ ವರದಿಯಲ್ಲಿರುವಂತೆ ಎಬಿಸಿಡಿಇ ಎಂದು ವರ್ಗೀಕರಿಸಿ ಎಲ್ಲ ಸಮುದಾಯ ಗಳಿಗೂ ಸಮಾನ ಅವಕಾಶ ನೀಡಲಾಗಿತ್ತು. ಆದರೆ ರಾಜ್ಯ ಸರಕಾರ ಪ್ರವರ್ಗಎ ವರ್ಗದಲ್ಲಿ ಬರುವ ಎಡಗೈ ಸಂಬAಧಿತ ಜಾತಿಗಳಿಗೆ ಶೇ.೬, ಪ್ರವರ್ಗಬಿ ವರ್ಗದಲ್ಲಿ ಬರುವ ಬಲಗೈ ಸಮುದಾಯಕ್ಕೆ ಶೆ೬ ಪ್ರವರ್ಗ ಸಿ ವರ್ಗ ದಲ್ಲಿನ ಕೊರಮ, ಕೊರಚ, ಬೋವಿ, ಲಂಬಾಣಿ ಇತ್ಯಾದಿ ೪೯ ಬಲಿಷ್ಟ ಸಮುದಾಯಗಳೊಂದಿಗೆ ಅಲೆಮಾರಿಗಳನ್ನು ಸೇರಿಸಿ ಶೆ.೫ರಷ್ಟು ಮೀಸಲಾತಿ ನೀಡಲಾಗಿದೆ. ಇದು ಚಾರಿತ್ರಿಕ ದ್ರೋಹ ಎಂದರು.
ಇದನ್ನೂ ಓದಿ: Chikkaballapur Crime: ಒಂಟಿ ಮಹಿಳೆಯ ಸರ ಕಳವು : ಆರೋಪಿಗಳ ಬಂಧನ, ಮಾಲು ವಶ
ಒಳಮೀಸಲಾತಿಯನ್ನು ಜಾರಿ ಮಾಡುವ ಸಂದರ್ಭದಲ್ಲಿ ರಾಜ್ಯ ಸರಕಾರ ತನ್ನ ಮನಸ್ಸಿನಂತೆ ನಡೆಯುವುದಾದರೆ ಜಸ್ಟೀಸ್ ನಾಗಮೋಹನ್‌ದಾಸ್ ಸಮಿತಿ ನೇಮಕ ಏಕೆ ಮಾಡಬೇಕಾಗಿತ್ತು. ನೂರಾರು ಕೋಟಿ ರೂಪಾಯಿ ಏಕೆ ಸಾರ್ವಜನಿಕರ ಹಣವನ್ನು ಪೋಲು ಮಾಡಬೇಕಾಗಿತ್ತು ಎಂದು ಕಿಡಿ ಕಾರಿದರು.
ಸರಕಾರ ಅಲೆಮಾರಿಗಳಿಗೆ ಶೇ೧ರಷ್ಟು ಮೀಸಲಾತಿ ಜಾರಿಮಾಡಲಾಗದಿದ್ದಲ್ಲಿ ನಮಗೆ ನಿಗಮ ಮಂಡಳಿ ಮಾಡುವ , ವಿಶೇಷ ಅನುದಾನ ನೀಡುವ ಮಾತು ಬಿಟ್ಟು ಮೊದಲು ಕೋರ್ಟಿಗೆ ತನ್ನ ಹೇಳಿಕೆಯನ್ನು ದಾಖಲಿಸಲಿ.ನಮಗೆ ನ್ಯಾಯಾಂಗದ ಮೇಲೆ ಅಪಾರವಾದ ನಂಬಿಕೆಯಿದ್ದು ಅಲ್ಲಿಯೇ ನ್ಯಾಯ ಪಡೆದುಕೊಳ್ಳುತ್ತೇವೆ ಎಂದರು.
ತಬ್ಬಲಿ ಸಮುದಾಯಗಳಿಗೆ ಶೇ೧ರಷ್ಟು ಮೀಸಲಾತಿ ನೀಡದೆ ವಂಚಿಸಲು ಕಾರಣ ನಮ್ಮ ಸಮು ದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ,ರಾಜಕೀಯವಾಗಿ ಮುನ್ನೆಲೆಗೆ ಬಂದಿಲ್ಲ ಎನ್ನುವುದೇ ಆಗಿದೆ.ರಾಜ್ಯದಲ್ಲಿ ಅಲೆಮಾರಿ ಸಮುದಾಯದ ೪೯ ಪಂಗಡದ ಜನಸಂಖ್ಯೆ ೫ ಲಕ್ಷಕ್ಕೂ ಮೀರಿದೆ ಎನ್ನುವುದನ್ನು ನಾಗಮೋಹನ್‌ದಾಸ್ ಸಮಿತಿ ವರದಿಯಲ್ಲಿದೆ.ನಾವು ಕೇಳುತ್ತಿರುವುದು ಅವರಿವರ ಪಾಲನ್ನು ಕಿತ್ತು ನಮಗೆ ಕೊಡಿ ಎಂದು ಕೇಳುತ್ತಿಲ್ಲ.ನ್ಯಾಯಬದ್ಧವಾಗಿ ನಮಗೆ ಕೊಡಬೇಕಾದಷ್ಟನ್ನೇ ಕೊಟ್ಟರೆ ಶತಮಾನಗಳ ನಮ್ಮ ಶಾಪ ವಿಮೋಚನ ಆಗಿ ನಮ್ಮ ಮಕ್ಕಳು ಶೈಕ್ಷಣಿಕವಾಗಿ ಸಾಮಾಜಿಕ, ಆರ್ಥಿಕ ರಾಜಕೀಯವಾಗಿ ಬದುಕು ಕಟ್ಟಿಕೊಳ್ಳಲಿ ಆಗಲಿದೆ ಎಂದರು.
ವಕೀಲ ರಮೇಶ್ ಮಾತನಾಡಿ ರಾಜ್ಯ ಸರಕಾರ ಮೇಲೆ ನಮಗೆ ನಂಬಿಕೆಯಿಲ್ಲ. ಒಳಮೀಸಲಾತಿ ಜಾರಿ ವಿಚಾರದಲ್ಲಿ ತಬ್ಬಲಿ ಸಮುದಾಯಗಳಿಗೆ ಶೇ ೧ರಷ್ಟು ಮೀಸಲಾತಿ ಒದಗಿಸಲು ಪ್ರಬಲ ಸಮುದಾಯ ಗಳ ಸಚಿವರು ಅಡ್ಡಿಯಾಗಿದ್ದಾರೆ.ಮುಖ್ಯಮಂತ್ರಿಗಳು ನಮಗೆ ನ್ಯಾಯ ಒದಗಿಸುವ ಮನಸ್ಸಿದ್ದರೂ ಬಲಾಡ್ಯ ಸಮುದಾಯದ ಸಚಿವರ ಹೆದರಿಕೆಯಿಂದ ಮಾಡಲಾಗುತ್ತಿಲ್ಲ. ಹೀಗಾಗಿ ಹೈಕೋರ್ಟಿನಲ್ಲಿ ದಾವೆ ಹೂಡಿದ್ದೇವೆ. ಸರಕಾರ ಈ ಕೂಡಲೇ ತನ್ನ ನಿಲುವನ್ನು ಲಿಖಿತವಾಗಿ ಸಲ್ಲಿಸಿದ್ದಲ್ಲಿ ನ್ಯಾಯಾಲಯದ ಮೂಲಕವೇ ನಮ್ಮ ಪಾಲನ್ನು ಪಡೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಟಿಯಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ವಿ.ಗಂಗಾಧರ್, ಖಜಾಂಚಿ ಮಂಜುನಾಥ್ ಜಿ.ಎಂ.,ಗೌರವಾಧ್ಯಕ್ಷ ಕುಳಾಯಪ್ಪ, ವಕೀಲ ರಮೇಶ್. ಆರ್. ರಾಮಾಂಜಮ್ಮ, ಅಶ್ವತ್ಥಪ್ಪ, ಮಾಲಮ್ಮ, ಗಂಗರತ್ನಮ್ಮ ಇತರರು ಇದ್ದರು.