Deputy Speaker JK Krishna Reddy: ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾದ್ಯಕ್ಷರಾಗಿ ಮಾದಮಂಗಲ ಆಂಜಿ ಅಯ್ಕೆ ಆದೇಶ ಪತ್ರ ಹಸ್ತಾಂತರಿಸಿದ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ
ಜಾತ್ಯಾತೀತ ಜನತಾ ದಳದ ಎಸ್ಸಿ ಘಟಕದ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿ ಮಾದಮಂಗಲ ಆಂಜಿ ಮತ್ತು ಒಬಿಸಿ ಜಿಲ್ಲಾ ಅಧ್ಯಕ್ಷರಾಗಿ ಜಕ್ಕಲಮಡಗು ಲಕ್ಷ್ಮಿನರಸಿಂಹಪ್ಪನವರಿಗೆ ಮಾಜಿ ಶಾಸಕ ಹಾಗು ಉಪಸಭಾದ್ಯಕ್ಷ ಜೆಕೆ ಕೃಷ್ಣಾರೆಡ್ಡಿ( Former MLA and Deputy Speaker JK Krishna Reddy) ಆದೇಶ ಪತ್ರ ವಿತರಿಸಿದರು

-

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೊರಹೊಲಯದ ಜೆಕೆ ಭವನ ದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಜಾತ್ಯಾತೀತ ಜನತಾ ದಳದ ಎಸ್ಸಿ ಘಟಕದ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿ ಮಾದಮಂಗಲ ಆಂಜಿ ಮತ್ತು ಒಬಿಸಿ ಜಿಲ್ಲಾ ಅಧ್ಯಕ್ಷರಾಗಿ ಜಕ್ಕಲಮಡಗು ಲಕ್ಷ್ಮಿನರಸಿಂಹಪ್ಪನವರಿಗೆ ಮಾಜಿ ಶಾಸಕ ಹಾಗು ಉಪಸಭಾದ್ಯಕ್ಷ ಜೆಕೆ ಕೃಷ್ಣಾರೆಡ್ಡಿ( Former MLA and Deputy Speaker JK Krishna Reddy) ಆದೇಶ ಪತ್ರ ವಿತರಿಸಿದರು.
ಇದೇ ವೇಳೆಯಲ್ಲಿ ಮಾತನಾಡಿದ ಅವರು ರಾಷ್ರೀಯ ಅಧ್ಯಕ್ಷರಾದ ದೇವೆಗೌಡರು ರಾಜ್ಯಾದ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ,ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹಕಾರದಿಂದ ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಎಸ್ಸಿ ಘಟಕದ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದ್ದು ನೂತನವಾಗಿ ಆಯ್ಕೆಯಾದ ಎಸ್ಸಿ ಘಟಕದ ಜಿಲ್ಲಾದ್ಯಕ್ಷ ಮಾದಮಂಗಲ ಆಂಜಿ ಮತ್ತು ಒಬಿಸಿ ಘಟಕ ಜಿಲ್ಲಾಧ್ಯಕ್ಷ ಲಕ್ಷ್ಮಿನರಸಿಂಹಪ್ಪನವರು ಇಬ್ಬರು ತಳ ಮಟ್ಟದಿಂದ ಕಾರ್ಯ ಕರ್ತರನ್ನು ಒಗ್ಗೂಡಿಸಿ ಜೆಡಿಎಸ್ ಪಕ್ಷವನ್ನು ಬಲಿಷ್ಟ ಪಡಿಸಬೇಕು ಎಂದು ಸೂಚಿಸಿದ್ದೇನೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬೈರಾರೆಡ್ಡಿ, ಟಮೋಟಗೌಸ್, ದೇವಳಂ ಶಂಕರ್, ಮಂಜುನಾಥ, ವೆಂಕಟರವಣಪ್ಪ, ಮುನಗನಹಳ್ಳಿ ಶ್ರೀನಿವಾಸ್, ಗೋಪಾಲಕೃಷ್ಣ, ಆನಂದ್, ಚಾಂದ್ ಪಾಷ, ಬೊಮ್ನೆಕಲ್ಲು ನಾರಾಯಣಸ್ವಾಮಿ, ದಲಿತ ಮುಖಂಡರುಗಳಾದ ಜನ ನಾಗಪ್ಪ, ನರಸಿಂಹಮೂರ್ತಿ, ಜನರ್ದನ್, ಸಂತೋಷ್, ರಾಜೇಂದ್ರ ಬಾಬು, ಹರಿ, ಬ್ಲೇಡ್ ಮಂಜು, ಶ್ರೀಕಂಠ, ಬಾಲಾಜಿ ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.