ಗೌರಿಬಿದನೂರು: 2003ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯ ಕ್ರಮವು ಆತ್ಮೀಯ ಹಾಗೂ ಸಂಭ್ರಮದ ವಾತಾವರಣದಲ್ಲಿ ಅತ್ಯಂತ ಸರಳವಾಗಿ ನಡೆಯಿತು.
ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮದ ಶ್ರೀ ಭಾರ್ಗವ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು ಎರಡು ದಶಕಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು. ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡು, ಜೀವನದ ಅನುಭವಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮವನ್ನು ಶಾಲಾ ಸಂಸ್ಥಾಪಕ ವ್ಯವಸ್ಥಾಪಕರಾದ ಸತ್ಯನಾರಾಯಣ ರಾವ್ ಅವರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಸ್ನೇಹ ಸಮ್ಮಿಲನವು ಕೇವಲ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮವಲ್ಲ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ವೇದಿಕೆಯಾಗಬೇಕು ಸಮಾಜಮುಖಿ ಕಾರ್ಯಗಳಲ್ಲಿ ನೀವೆಲ್ಲರೂ ಭಾಗವಹಿಸುವ ಸಂಕಲ್ಪ ಮೈಗೂಡಿಸಿಕೊಳ್ಳಬೇಕು ಎಂದ ಅವರು ಶಾಲೆಯನ್ನು ಅಂತ ಅಂತವಾಗಿ ಯಾವ ರೀತಿಯಲ್ಲಿ ಉನ್ನತೀಕರಿಸಲಾಯಿತು ಎಂಬುದನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು.
ನಂತರ ಪುಟ್ಟಪರ್ತಿ ಸಾಯಿಬಾಬಾ ರವರ ಅನುಗ್ರಹದಿಂದ ಇಂದು ದೇಶಾದ್ಯoತ ವಿವಿಧ ರಾಜ್ಯ ಗಳಲ್ಲಿಯೇ ಅಲ್ಲದೆ ವಿದೇಶಗಳಲ್ಲಿಯೂ ಸಹಾ ಉಚಿತ ಆರೋಗ್ಯ, ವಿದ್ಯೆಯನ್ನು ಬಡಜನರಿಗೆ ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಯಾವ ರೀತಿಯಲ್ಲಿ ಸೇವೆ ಮಾಡಲಾಗುತ್ತಿದೆ ಎಂಬುದನ್ನು ತಿಳಿಸಿ ಒಂದು ಚಿಕ್ಕ ಕಿರು ಚಿತ್ರವನ್ನು ಪ್ರದರ್ಶಿಸಿ ಅರ್ಥಯಿಸಿದರು.
ಹಳೆಯ ವಿದ್ಯಾರ್ಥಿನಿಯಾದ ಅನಿತಾ ಲಕ್ಷ್ಮಿ ಮಾತನಾಡಿ, ನಾನು ಬೇರೆ ಶಾಲೆಗಳಲ್ಲಿ ಗುರುವಂದನಾ ಕಾರ್ಯಕ್ರಮ ವೀಕ್ಷಿಸಿ ನಮ್ಮ ಶಾಲೆಯಲ್ಲಿ ಇದೇ ರೀತಿಯಲ್ಲಿ ಆಚರಣೆ ಮಾಡಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿತ್ತು ಅದರಂತೆಯೇ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿ ಸಿರುವುದು ನನಗೆ ತುಂಬಾ ಸಂತಸ ತಂದಿದೆ ಮುಂಬರುವ ದಿನಗಳಲ್ಲಿ ನಮ್ಮೆಲ್ಲಾ ಸ್ನೇಹಿತರ ಅಭಿಪ್ರಾಯದಂತೆ ಶಿಕ್ಷಕ ಶಿಕ್ಷಕಿಯರನ್ನು ಸಂಪರ್ಕಿಸಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದರು.
ಮಂಜುನಾಥ್ ಮಾತನಾಡಿ, ಗುರುಗಳ ಆಶೀರ್ವಾದ, ಮಾರ್ಗದರ್ಶನ ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡರೆ ನಾವೆಲ್ಲರೂ ಸಮಾಜದಲ್ಲಿ ಸಪ್ಪ್ರಜೆಗಳಾಗಬಹುದು ಎಂದು ತಮ್ಮ ಅನಿಸಿಕೆ ಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರು ತಮ್ಮ ಅನುಭವಗಳನ್ನು ತುಂಬಾ ಸಂತೋಷ ದಿಂದ ಹಂಚಿಕೊಳ್ಳಯಿತು. ಅಂದಿನ ಶಾಲಾ ದಿನಗಳನ್ನು ನೆನೆದರು. ಅನೇಕ ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಸೇರಿ, ಶಾಲಾ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿದ ಕ್ಷಣಗಳು ನಿಜಕ್ಕೂ ಅಮೂಲ್ಯವಾಗಿದ್ದವು. ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು.
ಪರಿಚಯ, ನೆನಪುಗಳ ಹಂಚಿಕೆ, ಸ್ನೇಹಿತರೊಂದಿಗೆ ಮುಕ್ತ ಸಂವಾದ, ಗುಂಪು ಛಾಯಾಚಿತ್ರ, ಕಿರು ಸನ್ಮಾನ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲವೂ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಪ್ರತಿಯೊಂದು ಕ್ಷಣವೂ ನಮ್ಮೆಲ್ಲರ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿಯಲಿದೆ ಎಂದು ಪವಿತ್ರಾ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮಂಜುನಾಥ್ ಎಸ್ , ಶ್ವೇತಾ, ಪವಿತ್ರಾ, ಆನಂದ, ಬಾಲ ಕೃಷ್ಣ, ಅನ್ಸರ್ ಭಾಷಾ, ಅಪ್ಸರ್ ಭಾಷಾ, ನರೇಶ್, ನರೇಂದ್ರ ಕುಮಾರ್, ನಾಗೇಶ್, ಕಿರಣ್, ಅಮರ್ನಾಥ್, ನರಸಿಂಹ ಮೂರ್ತಿ, ಕೃಷ್ಣ ಮೂರ್ತಿ, ಎಂ ಡಿ ಶಿವಶಂಕರ, ಕುಟುಂಬ ಸದಸ್ಯರು ಹಾಗೂ ಶಿಕ್ಷಕರಾದ ಶಿವಮ್ಮ, ಪಟೇಲ್, ಜಗದೀಶ್ ಸೇರಿದಂತೆ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.