ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಖ್ಯಮಂತ್ರಿ ಸ್ಥಾನಕ್ಕೆ ಮಾದಿಗ ಸಮುದಾಯದ ಕೆ.ಹೆಚ್.ಮುನಿಯಪ್ಪಗೆ ಅವಕಾಶ ನೀಡಿ : ಆದಿ ಜಾಂಬವ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ ಒತ್ತಾಯ

ರಾಜ್ಯ ರಾಜಕೀಯ ವಲಯದಲ್ಲಿ ಸದ್ಯ ಮುಖ್ಯಮಂತ್ರಿಗಳ ಕುರ್ಚಿ ಬದಲಾವಣೆ ಚರ್ಚೆ ತಾರಕಕ್ಕೇರಿದ್ದು, ದಲಿತರಿಗೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಹುದ್ದೆಗಳು ದೊರೆತಿವೆ. ಈಗ ಮುಖ್ಯಮಂತ್ರಿಯ ಸ್ಥಾನ ನೀಡಲು ಸೂಕ್ತ ಸಮಯ ಬಂದಿದೆ. ಪಕ್ಷದ ನಾಯಕರು ಕೆ.ಎಚ್.ಮುನಿಯಪ್ಪಗೆ ಬೆಂಬಲ ಸೂಚಿಸಬೇಕು. ಇದರಿಂದ ರಾಜಕೀಯ ನ್ಯಾಯ ದೊರಕುತ್ತದೆ. ಸಿಎಂ ಸ್ಥಾನ ಸಾಧ್ಯವಾಗದಿದ್ದರೆ, ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು

ಮಾದಿಗ ಸಮುದಾಯದವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು. ಹಿರಿಯ ರಾಜಕಾರಣಿ ಕೆ.ಎಚ್.ಮುನಿಯಪ್ಪ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಆದಿ ಜಾಂಬವ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ ಒತ್ತಾಯಿಸಿದರು.

ಚಿಕ್ಕಬಳ್ಳಾಪುರ : ಮಾದಿಗ ಸಮುದಾಯದವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು. ಹಿರಿಯ ರಾಜಕಾರಣಿ ಕೆ.ಎಚ್.ಮುನಿಯಪ್ಪ(K.H.Muniyappa) ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಆದಿ ಜಾಂಬವ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ(Sri Shadakshari Swamiji of Adi Jambava Mutt) ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ರಾಜಕೀಯ ವಲಯದಲ್ಲಿ ಸದ್ಯ ಮುಖ್ಯಮಂತ್ರಿಗಳ ಕುರ್ಚಿ ಬದಲಾವಣೆ ಚರ್ಚೆ ತಾರಕಕ್ಕೇರಿದ್ದು, ದಲಿತರಿಗೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಹುದ್ದೆಗಳು ದೊರೆತಿವೆ. ಈಗ ಮುಖ್ಯಮಂತ್ರಿಯ ಸ್ಥಾನ ನೀಡಲು ಸೂಕ್ತ ಸಮಯ ಬಂದಿದೆ. ಪಕ್ಷದ ನಾಯಕರು ಕೆ.ಎಚ್.ಮುನಿಯಪ್ಪಗೆ ಬೆಂಬಲ ಸೂಚಿಸಬೇಕು. ಇದರಿಂದ ರಾಜಕೀಯ ನ್ಯಾಯ ದೊರಕುತ್ತದೆ. ಸಿಎಂ ಸ್ಥಾನ ಸಾಧ್ಯವಾಗದಿದ್ದರೆ, ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಮಾತು ಬಂದಾಗ ಹಲವು ಸಮುದಾಯಗಳು ತಮ್ಮವರಿಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸುವುದು ಸಹಜ. ಪ್ರಸ್ತುತ ರಾಜ್ಯದಲ್ಲಿ ಸಿ.ಎಂ.ಬದಲಾವಣೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ದಲಿತರಿಗೆ ಸಿಎಂ ಅವಕಾಶ ನೀಡುವ ವಿಷಯ ಮುನ್ನೆಲೆಗೆ ಬಂದರೆ ಪರಿಶಿಷ್ಟ ಜಾತಿಯಲ್ಲಿನ ಮಾದಿಗ ಸಮುದಾಯವನ್ನು ಪರಿಗಣಿಸ ಬೇಕು. ಅದರಲ್ಲೂ ಹಿರಿಯ ರಾಜಕಾರಣಿ ಕೆ.ಎಚ್.ಮುನಿಯಪ್ಪಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Chikkaballapur News: ದೇಶದ ಎಲ್ಲರಿಗೂ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ: ಡೀನ್ ಡಾ.ಎಂ.ಎಲ್.ಮಂಜುನಾಥ್

ಏಳು ಬಾರಿ ಸಂಸದರಾಗಿ ಈಗ ಸಚಿವರಾಗಿ ಜನರ ವಿಶ್ವಾಸ ಗೆದ್ದು ಸೇವೆ ಸಲ್ಲಿಸಿರುವ ಮುನಿಯಪ್ಪ ಅವರು ಪ್ರಾಮಾಣಿಕ, ಹಿರಿಯ ಹಾಗೂ ಸಜ್ಜನ ರಾಜಕಾರಣಿ. ಎಲ್ಲ ಸಮುದಾಯದವರನ್ನೂ ಜೊತೆಗೂಡಿಸಿಕೊಂಡು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮುನಿಯಪ್ಪ ಅವರು ಸಿಎಂ ಆದರೆ ರಾಜ್ಯದ ಎಲ್ಲ ವರ್ಗಗಳಿಗೂ ಪ್ರಗತಿ ಖಚಿತ ಎಂದರು.

ಅಧಿಕಾರವು ಬಲಿಷ್ಠರ ಕೈಯಲ್ಲಿ ಇರುವಾಗ ದಲಿತರನ್ನು ವಂಚಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ರಾಜಕೀಯ ಷಡ್ಯಂತ್ರಗಳನ್ನು ನಿಲ್ಲಿಸಬೇಕು. ಇಂತಹ ಸಂದರ್ಭದಲ್ಲಿ ಪಕ್ಷದ ವಿರುದ್ಧ ಭಾವನೆ ಬೆಳೆಸುವುದಕ್ಕಿಂತ, ಅವರ ಮನಸ್ಸು ಗೆಲ್ಲುವ ಹಾಗೂ ಅವರ ಆಲೋಚನೆ ಬದಲಾಯಿಸುವ ಕೆಲಸ ಸಮುದಾಯ ಮಾಡಬೇಕಾಗಿದೆ. ಇಡೀ ದಲಿತ ಸಮುದಾಯ ಒಗ್ಗಟ್ಟಿನಿಂದ ನಿಂತು ಅಧಿಕಾರ ಪಡೆದು, ಅಧಿಕಾರವನ್ನು ಸರ್ವ ಜನರ ಏಳಿಗೆಗಾಗಿ ಬಳಸುತ್ತೇವೆ ಎಂಬುದನ್ನು ಸಾಬೀತುಪಡಿಸಬೇಕಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕಿ ಅನಸೂಯಮ್ಮ, ಪಟ್ರೇನಹಳ್ಳಿ ಕೃಷ್ಣ, ಕಣಿತಹಳ್ಳಿ ವೆಂಕಟೇಶ್, ತಿರುಮಳ್ಳಪ್ಪ, ಶಿವಪ್ಪ, ಪೆದ್ದಣ್ಣ, ವಿ.ಶ್ರೀನಿವಾಸ್, ಅಣ್ಣಮ್ಮ, ಮುರಳಿ ಮೋಹನ್ ಇದ್ದರು.