ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ದೇಶದ ಎಲ್ಲರಿಗೂ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ: ಡೀನ್ ಡಾ.ಎಂ.ಎಲ್.ಮಂಜುನಾಥ್

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಭಾರತದ ಸಂವಿಧಾನ ಅಂಗೀಕಾರವಾಗಿದ್ದು, 1949 ರ ನವೆಂಬರ್ 26 ರಂದೇ, ಆದರೂ ಅನುಷ್ಠಾನಕ್ಕೆ ಬಂದಿದ್ದು 1950 ರ ಜನವರಿ 26 ರಂದು. ಈ ದಿನವನ್ನು ಗಣರಾಜೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ.

ದೇಶದ ಎಲ್ಲರಿಗೂ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ

-

Ashok Nayak
Ashok Nayak Nov 26, 2025 9:15 PM

ಚಿಕ್ಕಬಳ್ಳಾಪುರ, ನ.26: ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ಭಾರತದ ದೇಶದ ಎಲ್ಲರಿಗೂ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋದನಾ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಎಂ.ಎಲ್.ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋ ದನಾ ಸಂಸ್ಥೆಯಲ್ಲಿ ಬುಧವಾರ ನಡೆದ 10 ನೇ ಸಂವಿಧಾನ ಸಮರ್ಪಣಾ ದಿನಾಚರಣೆ(10th Constitution Dedication Day Celebration) ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ (Constitution architect Bharat Ratna Dr. B.R. Ambedkar) ರವರ ಭಾವ ಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು 

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಭಾರತದ ಸಂವಿಧಾನ ಅಂಗೀಕಾರವಾಗಿದ್ದು, 1949 ರ ನವೆಂಬರ್ 26 ರಂದೇ, ಆದರೂ ಅನುಷ್ಠಾನಕ್ಕೆ ಬಂದಿದ್ದು 1950 ರ ಜನವರಿ 26 ರಂದು. ಈ ದಿನವನ್ನು ಗಣರಾಜೋತ್ಸವ ದಿನವಾಗಿ ಆಚ ರಣೆ ಮಾಡಲಾಗುತ್ತದೆ. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ.

ಇದನ್ನೂ ಓದಿ: Chikkaballapur News: ಇತಿಹಾಸವಾದ ಕಾರ್ಯಕ್ರಮದಲ್ಲಿ ಅನುದಾನಕ್ಕೆ ಮೊರೆಯಿಟ್ಟ ಶಾಸಕ : ಅಸ್ತು ಎಂದ ಮುಖ್ಯಮಂತ್ರಿ

ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು.ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸು ವುದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆ. ಭಾರತದ ಸಂವಿಧಾನಕ್ಕೆ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಇದೆ ಎಂದು ತಿಳಿಸಿದರು. 

ಹೈಕೋರ್ಟ್ ವಕೀಲ ಬಿ.ಲಕ್ಷ್ಮಿಣಾರಾಯಣ ಮಾತನಾಡಿ, ಜಾತಿ, ಸಂಪತ್ತು ಮತ್ತು ಅಧಿಕಾರ ದ ಹತಾರುಗಳ ಹೊಡೆತದಿಂದ ನಲುಗಿ ಹೋಗಿದ್ದ ಕೋಟ್ಯಂತರ ಭಾರತೀಯರಿಗೆ, ಶೋಷಣೆ, ದೌರ್ಜನ್ಯ ಮತ್ತು ಅವಮಾನಗಳಿಂದ ಬಿಡುಗಡೆ ಪಡೆಯಲು ದಾರಿ ತೋರಿದ ಭಾರತೀಯ ಸಂವಿಧಾನವು ಕರಡು ರಚನಾ ಸಭೆಯಲ್ಲಿ ಅಂಗೀಕಾರಗೊಂಡ ಐತಿಹಾಸಿಕ ದಿನವಿದು. ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವ ಮತ್ತು ಘನತೆಯ ಬದುಕನ್ನು ಸಂವಿ ಧಾನದ ಮೂಲಕ ನೀಡಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರನ್ನು ಇಂದು ಗೌರವದಿಂದ ಸ್ಮರಿಸಿ, ನಮಿಸುತ್ತೇನೆ.ಸಮಸ್ತ ಭಾರತೀಯರಿಗೆ ಸಂವಿಧಾನ ದಿನಾಚರಣೆಯ ಶುಭಾಶಯ ಗಳು ಎಂದರು.

ಸಂವಿಧಾನದಂತೆ ಸಮಾನತೆ ನೀಡುವವರು ವೈದ್ಯರು. ಅವರಿಗೆ ಜಾತಿ, ಧರ್ಮ, ಬೇದ ಬಾವವಿಲ್ಲದೇ ಅನಾರೋಗ್ಯದಿಂದ ಬರುವ ಎಲ್ಲರಿಗೂ ಚಿಕ್ಇತ್ಸೆ ನೀಡುತ್ತಾರೆ. ಜನರು ದೇವರಿಗೆ ಕೈ ಮುಗಿಯುವುದು ಬಿಟ್ಟರೆ ವೈದ್ಯರಿಗೆ, ಇಂತಹ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ನೀವು ಧನ್ಯರು.

ದೇಶದಲ್ಲಿ ಅಲ್ಲದೇ ವಿದೇಶಗಳಿಗೂ ಹೋಗಿ ಉನ್ನತ ವಿದ್ಯಾಬ್ಯಾಸ ಪಡೆಯಿರಿ. ದೇಶಕ್ಕೆ ಕೀರ್ತಿ ತನ್ನಿರಿ. ಆದರೆ ವಾಪಸ್ಸು ತಾಯ್ ನೆಲಕ್ಕೆ ಬಂದು ಇಲ್ಲಿನ ಜನತೆಗೆ ಸೇವೆ ಮಾಡಿದಲ್ಲಿ ದೇಶ ಸೇವೆ ಮಾಡಿದಂತೆ, ಏಕೆಂದರೆ ಭಾರತ ದೇಶದ ಜನಸಂಖ್ಯೆ 140 ಕೋಟಿ ದಾಟಿದ್ದು ಇಲ್ಲಿ ಜನತೆಗೆ ತಕ್ಕಂತೆ ವೈದ್ಯರಿಲ್ಲ. ಅದನ್ನು ಮನಗಂಡು ನಿಮ್ಮ ಸೇವೆ ಮಾಡಿ ಎಂದು ಮೆಡಿಕಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.   

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಪನ್ಮೂಲ ವ್ಯೆಕ್ತಿ ಹಾಗೂ ವಕೀಲ ಸಿ.ಆರ್. ನವೀನ್ ಕುಮಾರ್ ಸಂವಿಧಾನ ಪೀಠಿಕೆಯನ್ನು ಬೋಧಿಸಿ, ಸಂವಿಧಾನ ಪೀಟಿಕೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ನೋಡಲ್ ಅಧಿಕಾರಿ ಡಾ.ರವೀಂದ್ರ. ವಿಭಾಗ ಮುಖ್ಯಸ್ಥರಾದ ಡಾ.ರಮೇಶ್, ಡಾ.ಸುನೀಲ್ ಜೋಷಿ, ಡಾ.ರವೀಂದ್ರ, ಸಹಾಯಕ ಪ್ರಾಧ್ಯಾ ಪಕರಾದ ಡಾ.ನರಸಿಂಹ, ಡಾ.ಬಸವರಾಜು, ಡಾ.ಚೈತ್ರರಾವ್, ಡಾ.ಜ್ಯೋತಿ, ಬೋಧಕ, ಬೋಧಕೇತರ ಸಿಬ್ಬಂದಿ, ಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.