Chikkaballapur News: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ವಾತ್ಸಲ್ಯ” ಮನೆ ಹಸ್ತಾಂತರ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕ್ಷೇತ್ರ ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದೆ. ಸಮಾಜದ ಬಗ್ಗೆ ಅಪಾರ ಕಾಳಜಿ ವಹಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುವ ಕಾರ್ಯ ನಮ್ಮೆಲ್ಲರಿಗೂ ಪ್ರೇರಣೆ ಮತ್ತು ಮಾದರಿಯಾಗಿದೆ ಸೂರು ಇಲ್ಲದವರಿಗೆ ಮನೆ ನೀಡುತ್ತಿರುವುದು ಬಹಳ ಸಂತೋಷ. ಇಂತಹ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು
![ಮಾತೋಶ್ರೀ ಅಮ್ಮ ನವರ ಆಶಯದಂತೆ ವಾತ್ಸಲ್ಯ ಮನೆ ರಚನೆ](https://cdn-vishwavani-prod.hindverse.com/media/original_images/matoshri.jpg)
ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಡಾ.ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು.
![Profile](https://vishwavani.news/static/img/user.png)
ಬಾಗೇಪಲ್ಲಿ: ತಾಲ್ಲೂಕು ಯೋಜನಾ ಕಛೇರಿ ವ್ಯಾಪ್ತಿಯ ಮಿಟ್ಟೇಮರಿ ಗ್ರಾಮದ ಚೌಡಮ್ಮ ಇವರಿಗೆ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಡಾ.ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್, ಪ್ರದೇಶಿಕ ಜ್ಞಾನ ವಿಕಾಸ್ ಯೋಜನೆ ಅಧಿಕಾರಿ ಗಳಾದ ಸಂಧ್ಯಾ,ಪಿ.ಡಿ.ಓ ವೆಂಕಟೇಶ್, ವಿ.ಎಸ್.ಎಸ್.ಎನ್ ಕಾರ್ಯದರ್ಶಿ ವಿಜಯ್ ಕುಮಾರ್, ಗ್ರಾಮ ಪಂಚಾಯಿತಿ ಅದ್ಯಕ್ಷ ಸೀತಮ್ಮ ಹಾಗೂ ವಾತ್ಸಲ್ಯ ಮನೆ “ವಾತ್ಸಲ್ಯ” ಮನೆ ಫಲಾನುಭವಿ ಚೌಡಮ್ಮ ಟೇಪ್ ಕತ್ತರಿಸುವ ಮೂಲಕ ಹಸ್ತಾಂತರ ಮಾಡಲಾಯಿತು.
ಈ ವೇಳೆ ಮಾತನಾಡಿದ ಯೋಜನಾಧಿಕಾರಿ ಪ್ರವೀಣ್ ಸೂರು ಇಲ್ಲದವರಿಗೆ ಮಾತೋಶ್ರೀ ಅಮ್ಮ ನವರ ಆಶಯದಂತೆ ವಾತ್ಸಲ್ಯ ಮನೆ ರಚನೆ ಮಾಡಿ ಕೊಡಲಾಯಿತು. ಎಂದು ಯೋಜನಾಧಿಕಾರಿ ಪ್ರವೀಣ್ ಹೇಳಿದರು.
ಇದನ್ನೂ ಓದಿ: Chikkaballapur News: ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಆಚರಣೆ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕ್ಷೇತ್ರ ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದೆ. ಸಮಾಜದ ಬಗ್ಗೆ ಅಪಾರ ಕಾಳಜಿ ವಹಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುವ ಕಾರ್ಯ ನಮ್ಮೆಲ್ಲರಿಗೂ ಪ್ರೇರಣೆ ಮತ್ತು ಮಾದರಿಯಾಗಿದೆ ಸೂರು ಇಲ್ಲದವರಿಗೆ ಮನೆ ನೀಡುತ್ತಿರುವುದು ಬಹಳ ಸಂತೋಷ. ಇಂತಹ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಪ್ರಾದೇಶಿಕ ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ಸಂಧ್ಯಾ ಶೆಟ್ಟಿ ಮಾತನಾಡಿ ಮಾತೋಶ್ರೀ ಹೇಮಾವತಿ ವಿ ಹೆಗ್ಗಡೆ ಅಮ್ಮನವರ ಮಾರ್ಗದರ್ಶನದಲ್ಲಿ ಅನೇಕ ಮಹಿಳೆಯರಿಗೆ ಬದುಕಿನಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ನೊಂದ ಮಹಿಳೆಯವರಿಗೆ ಸಾಂತ್ವನ ನೀಡಲಾ ಗುತ್ತಿದೆ. ವಾತ್ಸಲ್ಯ ಮನೆ ನಿರ್ಮಿಸಿ ಚೌಡಮ್ಮ ಇವರಿಗೆ ಮನೆ ಹಸ್ತಾಂತರ ಮಾಡುತ್ತಿದ್ದು ಇದರ ಸಧ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಮಮತಾ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.