ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೊನ್ನುಡಿ ಪ್ರಭಾಕರ್ ನಿಧನ: ಜಿಲ್ಲಾ ಪತ್ರಕರ್ತರ ಸಂಘ ಸಂತಾಪ

ಹಿರಿಯ ವರದಿಗಾರ ವೆಂಕಟೇಶ್ ಮಾತನಾಡಿ ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಹೊನ್ನುಡಿ ಪತ್ರಿಕೆ ಸಂಪಾದಕ ಎಂ.ಜಿ. ಪ್ರಭಾಕರ (76) ಭಾನುವಾರ ರಾತ್ರಿ ನಗರದ ಕೋಟೆಯ ತಮ್ಮ ನಿವಾಸದಲ್ಲಿ ನಿಧನರಾದ ಸುದ್ದಿ ಕೇಳಿ ಆಘಾತವಾಯಿತು

ಅಧ್ಯಕ್ಷ ರವಿಕುಮಾರ್ ಮಾತನಾಡಿದರು.

ಚಿಕ್ಕಬಳ್ಳಾಪುರ: ಕೋಲಾರದ ಹಿರಿಯ ಪತ್ರಕರ್ತ(Senior journalist from Kolar)ರಾಗಿದ್ದ ಹೊನ್ನುಡಿ ಪ್ರಭಾಕರ್ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನುಡಿನಮನದ ಮೂಲಕ ತೀವ್ರ ಸಂತಾಪ ಸಲ್ಲಿಸಿತು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸಂತಾಪ ಸಭೆಯಲ್ಲಿ ಅನೇಕ ಪತ್ರಕರ್ತ ಮಿತ್ರರು ಪ್ರಭಾಕರ್ ಅವರ ಕುರಿತು ಮನದುಂಬಿ ಮಾತನಾಡಿದರು.

ಹಿರಿಯ ವರದಿಗಾರ ವೆಂಕಟೇಶ್ ಮಾತನಾಡಿ ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಹೊನ್ನುಡಿ ಪತ್ರಿಕೆ ಸಂಪಾದಕ ಎಂ.ಜಿ. ಪ್ರಭಾಕರ (76) ಭಾನುವಾರ ರಾತ್ರಿ ನಗರದ ಕೋಟೆಯ ತಮ್ಮ ನಿವಾಸದಲ್ಲಿ ನಿಧನರಾದ ಸುದ್ದಿ ಕೇಳಿ ಆಘಾತವಾಯಿತು ಎಂದರು.

ಇದನ್ನೂ ಓದಿ: Raghavendra Chitravani: ರಾಘವೇಂದ್ರ ಚಿತ್ರವಾಣಿಗೆ 50ರ ಸಡಗರ; ಲೋಗೋ ಲಾಂಚ್

ಅಲ್ಪಕಾಲದಿಂದ ಅನಾರೋಗಕ್ಕೆ ತುತ್ತಾಗಿದ್ದ ಪ್ರಭಾಕರ ಅವರನ್ನು ಭಾನುವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಗದೆ ರಾತ್ರಿ 9:30ರಲ್ಲಿ ವಿಧಿವಶರಾಗಿದ್ದಾರೆ. ಮೃತ ಪ್ರಭಾಕರ್ ಅವರು ಪತ್ನಿ ಹಾಗೂ ಓರ್ವ ಪುತ್ರಿ ಯನ್ನು ಅಗಲಿದ್ದಾರೆ. ಅಂತ್ಯವಿಧಿಗಳು ಸೋಮವಾರ ಮಧ್ಯಾಹ್ನ ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ ಎಂದು ಹೇಳಿದರು.

ಮೂಲತ: ಕಂಟ್ರಾಕ್ಟರ್ ಆಗಿದ್ದ ಪ್ರಭಾಕರ್ 1980ರ ದಶಕದಲ್ಲಿ ಹೊನ್ನುಡಿ ಪತ್ರಿಕೆಯ ಪಾಲುದಾರರಾಗಿ ಪತ್ರಿಕೋದ್ಯಮ ಪ್ರವೇಶಿಸಿದರು. ಕಳೆದ ಮೂರು ದಶಕಗಳಿಂದ ಹೊನ್ನುಡಿ ಸಂಪಾದಕರಾಗಿದ್ದ ಅವರು ತಮ್ಮ ಹೊನ್ನಲಗು ಅಂಕಣ ಹಾಗೂ ಮೊನಚು ಬರವಣಿಗೆಯಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜನಪ್ರಿಯರಾಗಿದ್ದರು.ಇಂತಹವರ ಒಡನಾಟದಲ್ಲಿದ್ದ ನಾವೇ ಧನ್ಯರು ಎಂದರು.

ಸೋಮಶೇಖರ್ ಮಾತನಾಡಿ, ಎರಡು ಬಾರಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಪ್ರಭಾಕರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿದ್ದರು.

ಸಾಮಾಜಿಕ ಹಾಗೂ ಕಾರ್ಮಿಕ ಹೋರಾಟಗಳಲ್ಲಿ ಮುಂಚೂಣಿ ವಹಿಸುತ್ತಿದ್ದ ಎಂ.ಜಿ.ಪ್ರಭಾಕರ ಬಂಗಾರಪೇಟೆ ಯಲಹಂಕ ನಡುವಿನ ನ್ಯಾರೋಗೇಜ್ ರೈಲು ಮಾರ್ಗಕ್ಕೆ ಕುತ್ತು ಬಂದ ಸಂದರ್ಭದಲ್ಲಿ ರೈಲ್ವೆ ಗ್ಯಾಂಗ್‌ಮೆನ್ ನಡುಪಳ್ಳಿ ಮುನಿಸ್ವಾಮಿ ಅವರ ಜೊತೆಗೂಡಿ ಬ್ರಾಡ್‌ಗೇಜ್ ಮಾರ್ಗವಾಗಿ ಅಭಿವೃದ್ಧಿಗೊಳಿಸುವಲ್ಲಿ ಹತ್ತಾರು ಹೋರಾಟ ಗಳನ್ನು ನಡೆಸಿ ಯಶಸ್ವಿಯಾಗಿದ್ದರು.ಇವರ ಅಗಲಿಕೆ ತುಂಬಲಾರದ ನೋವು ತಂದಿದೆ ಎಂದರು.

ಕೋಲಾರದ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷರಾಗಿ ದಶಕಗಳ ಕಾಲ ನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ಅವರ ಒಡನಾಡಿಗಳಿಂದ ಕೇಳಿದ್ದೇನೆ. ಶರಣರ ಸಾವು ಮರಣದಲ್ಲಿ ನೋಡಬೇಕು ಎಂಬAತೆ ಮಾಧ್ಯಮಲೋಕದಲ್ಲಿ ಅಪಾರ ಬಂದು ಬಳಗ ಹೊಂದಿದ್ದ ಇವರ ಸಾವಿನ ನೋವು ಭರಿಸುವ ಶಕ್ತಿ ಭಗವಂತ ಕುಟುಂಬಕ್ಕೆ ದಯಪಾಲಿಸಲಿ ಎಂದು ಸಂತಾಪ ಸಬೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್ ತಿಳಿಸಿದರು.

ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಸೋಮಶೇಖರ್, ಜಿಲಾನಿ,ನಾರಾಯಣಸ್ವಾಮಿ ಚಂದ್ರಶೇಖರ್, ವೆಂಕಟೇಶ್,ಟಿಎಸ್ ನಾಗೇಂದ್ರನಾಥ್, ಸೋ.ಸು ನಾಗೇಂದ್ರ, ನಾಗರಾಜ್,ಮತ್ತಿತರರು ನುಡಿನಮನ ಸಲ್ಲಿಸಿದರು.