ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಿಂಗಳಿಂದ ತಿಂಗಳಿಗೆ ಭಕ್ತರ ಪಾಲ್ಗೊಳ್ಳುವಿಕೆ ಹೆಚ್ಚುತ್ತೆ ಎಂಬುದು ನನ್ನ ನಂಬಿಕೆ: ಸಂಸದ ಡಾ.ಕೆ. ಸುಧಾಕರ್

ನಮ್ಮ ಇವತ್ತಿನ ಗಿರಿಪ್ರದಕ್ಷಿಣೆ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಬಂದಿದ್ದು ಮತ್ತಷ್ಟು ಕಳೆ ಬಂದಿದೆ ಭಕ್ತರ ಇಚ್ಛೆಯಂತೆ ಗಿರಿ ಪ್ರದಕ್ಷಿಣೆ ಪ್ರಾರಂಭ ಮಾಡಿದ್ದೇವೆ. ಇದು ತಮಿಳುನಾಡು ಅರುಚಲೇಶ್ವರ ದೇವಾಲಯ ಸುತ್ತಿದಷ್ಟೆ ಪವಿತ್ರ ಮತ್ತು ಪಾವನವಾದ ಪ್ರದಕ್ಷಿಣೆ ಎಂದು ನಾನು ಭಾವಿಸಿದ್ದೇನೆ. ಪ್ರದಕ್ಷಿಣೆ ಪ್ರಾರಂಭ ಮಾಡಿ ಮೂರು ತಿಂಗಳಾಗಿದೆ ಪ್ರತಿ ಹುಣ್ಣಿಮೆಗೆ ನಡೆಯುವ ಈ ಗಿರಿ ಪ್ರದಕ್ಷಿಗೆ ತಿಂಗಳಿಂದ ತಿಂಗಳಿಗೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಚಿಕ್ಕಬಳ್ಳಾಪುರ: ಇಲ್ಲಿಂದ ನೂರಾರು ಕಿಮಿ ದೂರದ ಅರುಣಾಚಲ ದೇವಾಲಯಕ್ಕೆ ಹೋಗಿ ಅಲ್ಲಿನ ದೇವಾಲಯ ಸುತ್ತುವ ಕನಸು ಕೆಲವು ಭಕ್ತರಿಗೆ ಇಡೇರದೆ ಇರಬಹುದು ಅಂತವರೆಲ್ಲರಿಗೂ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದಲ್ಲಿನ‌ ಅರುಣಾಚಲ ದೇವರ ದರ್ಶನ ಪಡೆದು ಗಿರಿ ಪ್ರದಕ್ಷಿಣೆ ಮಾಡುವುದರಿಂದ ದೇವರಿಗೆ ಇನ್ನಷ್ಟು ಮೆಚ್ಚುಗೆಯಾಗುತ್ತದೆಂಬ ಉದ್ದೇಶದಿಂದ ನಂದಿಗಿರಿ ಪ್ರದಕ್ಷಿಣೆ ಪ್ರಾರಂಭ ಮಾಡಲಾಗಿದೆ ಎಂದು ಸಂಸದ ಡಾ.ಕೆ‌.ಸುಧಾಕರ್(MP Dr. K. Sudhakar) ತಿಳಿಸಿದರು.

ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ನಂದಿ ಭೋಗನಂದೀಶ್ವರ ದೇವಾಲಯ ದಿಂದ ಹುಣ್ಣಿಮೆ ಅಂಗವಾಗಿ ವಿಷೇಶ ಗಿರಿ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿತ್ತು.ಮೂರನೆ ಗಿರಪ್ರದಕ್ಷಿಣೆ ಇಂದು ಆದಿಚುಂಚನಗಿರಿ ಮಹಾಪೀಠಾದ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮಿ ಆಗಮಿಸಿ ಪ್ರದಕ್ಷಿಣೆಗೆ ಚಾಲನೆ ನೀಡಿದರು.

ಇದನ್ನೂ ಓದಿ: MP Dr. K. Sudhakar: ತೃತೀಯ ಹಂತದ ಸಂಸ್ಕರಣೆ ಯೋಜನೆ ತರಬೇಕು: ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ

ಈ ವೇಳೆ ಮಾತನಾಡಿದ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್, ನಮ್ಮ ಇವತ್ತಿನ ಗಿರಿಪ್ರದಕ್ಷಿಣೆ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಬಂದಿದ್ದು ಮತ್ತಷ್ಟು ಕಳೆ ಬಂದಿದೆ ಭಕ್ತರ ಇಚ್ಛೆಯಂತೆ ಗಿರಿ ಪ್ರದಕ್ಷಿಣೆ ಪ್ರಾರಂಭ ಮಾಡಿದ್ದೇವೆ. ಇದು ತಮಿಳುನಾಡು ಅರುಚಲೇಶ್ವರ ದೇವಾಲಯ ಸುತ್ತಿದಷ್ಟೆ ಪವಿತ್ರ ಮತ್ತು ಪಾವನವಾದ ಪ್ರದಕ್ಷಿಣೆ ಎಂದು ನಾನು ಭಾವಿಸಿದ್ದೇನೆ. ಪ್ರದಕ್ಷಿಣೆ ಪ್ರಾರಂಭ ಮಾಡಿ ಮೂರು ತಿಂಗಳಾಗಿದೆ ಪ್ರತಿ ಹುಣ್ಣಿಮೆಗೆ ನಡೆಯುವ ಈ ಗಿರಿ ಪ್ರದಕ್ಷಿಗೆ ತಿಂಗಳಿಂದ ತಿಂಗಳಿಗೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಈ ಗಿರಿಪ್ರದಕ್ಷಿಣೆ ಇನ್ನಷ್ಟು ಮತ್ತಷ್ಟು ಪ್ರಸಿದ್ದಿಯನ್ನು ಪಡೆಯಲಿದೆ ಎಂದು ತಿಳಿಸಿದರು.

ಈ ವೇಳೆ ಚಿಮುಲ್ ನಿರ್ದೇಶಕ ಕೆ. ವಿ.ನಾಗರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ,ಜೈ ಫೌಂಡೇಶನ್ ಅಧ್ಯಕ್ಷ ಜಯ ಕುಮಾರ್, ಗಿರೀಶ್ ಹರಿಸ್ಥಳ,ಬಾಗೇಪಲ್ಲಿ ಜೆಡಿಎಸ್ ಮುಖಂಡ ಹರಿನಾಥ್ ರೆಡ್ಡಿ, ಮಧು ಚಂದ್ರ ಸಂಸದರ ಅಭಿಮಾನಿಗಳು ಹಿರಿಯರು ಕಿರಿಯರು ಮಹಿಳೆಯರು ಪಾಲ್ಗೊಂಡಿದ್ದರು.