ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr M C Sudhakar: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್ ಅಸಹಾಯಕತೆ

ಅತಿಥಿ ಉಪನ್ಯಾಸಕರ ಹಲವು ಬೇಡಿಕೆಗಳನ್ನು ನಮ್ಮ ಸರಕಾರ ಈಡೇರಿಸಿದೆ.ಕನಿಷ್ಟ ೧೦ ತಿಂಗಳ ಅವಧಿ ಗೆ ನೇಮಕಾತಿ ಮಾಡಿಕೊಂಡು ಗರಿಷ್ಟ ೪೦ ಸಾವಿರ ಕನಿಷ್ಟ ೨೮ ಸಾವಿರ ನೀಡುತ್ತಿದ್ದೇವೆ. ಜೂನ್ ೨ಕ್ಕೆ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದು, ಈಗ ಮರು ನೇಮಕ ಮಾಡಿಕೊಳ್ಳಲು ಕೋರ್ಟಿನ ನಿರ್ದೇಶನ ಬೇಕಾಗಿದೆ.

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ

ಡಾ.ಎಂ.ಸಿ.ಸುಧಾಕರ್ -

Ashok Nayak Ashok Nayak Sep 3, 2025 11:40 PM

ಚಿಕ್ಕಬಳ್ಳಾಪುರ : ಅತಿಥಿ ಉಪನ್ಯಾಸಕರ ನೇಮಕಾತಿ ಆಗದ ಕಾರಣ ಪದವಿ ಕಾಲೇಜು ವಿದ್ಯಾರ್ಥಿ ಗಳ ಪಾಠಪ್ರವಚನಕ್ಕೆ ತೊಂದರೆ ಆಗಿರುವುದು ನಿಜ.ಈ ವಿಚಾರ ಕೋರ್ಟಿನ ಆಂಗಳದಲ್ಲಿರುವ ಕಾರಣ ನಾನು ಹೆಚ್ಚಿಗೆ ಮಾತನಾಡಲಾಗುವುದಿಲ್ಲ.ಕೋರ್ಟಿನ ನಿರ್ದೇಶನ ಬಂದ ಕೂಡಲೇ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಬುಧವಾರ ನಡೆದ ಪಂಚಗ್ಯಾರೆಂಟಿ ಯೋಜನೆಗಳ ರಾಜ್ಯ ಮಟ್ಟದ ಕಾರ್ಯಾ ಗಾರದ ನಂತರ ಅವರು ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ಅತಿಥಿ ಉಪನ್ಯಾಸಕರ ಹಲವು ಬೇಡಿಕೆಗಳನ್ನು ನಮ್ಮ ಸರಕಾರ ಈಡೇರಿಸಿದೆ.ಕನಿಷ್ಟ ೧೦ ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಂಡು ಗರಿಷ್ಟ ೪೦ ಸಾವಿರ ಕನಿಷ್ಟ ೨೮ ಸಾವಿರ ನೀಡುತ್ತಿದ್ದೇವೆ. ಜೂನ್ ೨ಕ್ಕೆ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದು, ಈಗ ಮರು ನೇಮಕ ಮಾಡಿ ಕೊಳ್ಳಲು ಕೋರ್ಟಿನ ನಿರ್ದೇಶನ ಬೇಕಾಗಿದೆ. ಈ ಕೇಸು ವಿಚಾರಣೆ ಹಂತದಲ್ಲಿದ್ದು ಒಂದೆರಡು ದಿನಗಳಲ್ಲಿ ತೀರ್ಪು ಬರುವ ಸಾಧ್ಯತೆಯಿರುವುದರಿಂದ ಆದಷ್ಟು ಬೇಗ ತೀರ್ಮಾನ ಮಾಡಲಾಗು ವುದು ಎಂದರು.

ಇದನ್ನೂ ಓದಿ: Minister Dr M C Sudhakar: ಸಂಸದರ ಗೊಡ್ಡು ಬೆದರಿಕೆಗೆ ಹೆದರುವ ಪೈಕಿನ ನಾನಲ್ಲ : ಡಾ.ಎಂ.ಸಿ.ಸುಧಾಕರ್

ಸರಕಾರಿ ಕಾಲೇಜಿಗೆ ದಾಖಲಾತಿ ಪಡೆಯುವವರೆಲ್ಲಾ ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳೇ ಆಗಿದ್ದಾರೆ.ಇವರಿಗೆ ತೊಂದರೆ ಆಗುತ್ತಿರುವುದು ನೋಡಿದರೆ ನನಗೆ ಬೇಸರವಾಗುತ್ತಿದೆ.ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಏರುಪೇರು ಆಗಿದ್ದ ಶೈಕ್ಷಣಿಕ ವೇಳಾಪಟ್ಟಿಯನ್ನು ಏಕರೂಪಕ್ಕೆ ತರಲು ಶ್ರಮಿಸಲಾಗಿದೆ.ಅಂತೆಯೇ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ದಾಖಲಾತಿ ಪ್ರಕ್ರಿಯೆ ನಡೆಯುವಂತೆಯೋ ನೋಡಿಕೊಳ್ಳ ಲಾಗಿದೆ. ಇವೆಲ್ಲಾ ಕಾರಣಗಳಿಗಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಭವಾಗಿದೆ ಎಂದರು.

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಹೈಕೋರ್ಟಿನ ಆದೇಶ ಬಂದ ಮೇಲೆ ಇವೆಲ್ಲಾ ಸಮಸ್ಯೆಗಳು ನಮ್ಮ ಮುಂದೆ ಬಂದಿವೆ.ಈಗ ಅತಿಥಿ ಉಪನ್ಯಾಸಕರ ವಿಷಯ ನ್ಯಾಯಾಲಯದ ಮುಂದಿದೆ.ತ್ವರಿತವಾಗಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ನ್ಯಾಯಾಲಯ ಹೇಳಿದೆ.ಬಹುಶಃ ಇವತ್ತು ಕೋರ್ಟಿನ ಮುಂದೆ ಈ ವಿಚಾರ ಬಂದಿದೆ.ನ್ಯಾಯಾಲಯದ ವಿಚಾರಗಳ ಬಗ್ಗೆ ನಾನು ಹೆಚ್ಚು ಹೇಳಲು ಆಗುವುದಿಲ್ಲ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನ್ಯಾಯಾಲಯದ ಗಮನಕ್ಕೂ ತರಲಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥಪಡಿಸಿ ಬಡಮಕ್ಕಳಿಗೆ ಆಗಿರುವ ತೊಂದರೆ ಸರಿಪಡಿಸಲಾಗುವುದು ಎಂದರು.