ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Minister Dr M C Sudhakar: ಸಂಸದರ ಗೊಡ್ಡು ಬೆದರಿಕೆಗೆ ಹೆದರುವ ಪೈಕಿನ ನಾನಲ್ಲ : ಡಾ.ಎಂ.ಸಿ.ಸುಧಾಕರ್

ಜನರ ವಿಶ್ವಾಸ ಇರೋವರೆಗೂ ನಮ್ಮನ್ನು ಯಾರೂ ಏನು ಮಾಡಕ್ಕಾಗಲ್ಲ,ಎರಡು ಕಾಲು ವರ್ಷದಲ್ಲಿ ನಾವು ಯಾವತ್ತು ದ್ವೇಷದ ರಾಜಕಾರಾಣ ಮಾಡಿಲ್ಲ , ಎಲ್ಲರನ್ನೂ ಸೋಲಿಸಿ ಬಿಡ್ತೇನೆ, ಮುಗಿಸಿ ಬಿಡುತ್ತೇನೆ ಎಂದು ಅಬ್ಬರಿಸುವ ಈತ ದುಡ್ಡಿನ ದುರಹಂಕಾರದಿಂದ ಆ ರೀತಿ ಮಾತಾಡ್ತಾರೆ. ೨೦೨೩ರ ಚುನಾವಣೆಯಲ್ಲಿ ಚಿಂತಾಮಣಿಯಲ್ಲಿ ನಾನು ನಿಲ್ಲಿಸುವ ಕ್ಯಾಂಡಿಟೇಟ್ ಮೇಲೆ ಗೆದ್ದು ಬರಲಿ ನೋಡೋಣ ಅಂದಿದ್ರು

ಸಂಸದರ ಗೊಡ್ಡು ಬೆದರಿಕೆಗೆ ಹೆದರುವ ಪೈಕಿನ ನಾನಲ್ಲ

ಸಂಸದರ ಗೊಡ್ಡು ಬೆದರಿಕೆಗೆ ಹೆದರುವ ಪೈಕಿನ ನಾನಲ್ಲ  ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

Ashok Nayak Ashok Nayak Aug 16, 2025 12:31 AM

ಚಿಕ್ಕಬಳ್ಳಾಪುರ : ಸಂಸದ ಡಾ.ಕೆ.ಸುಧಾಕರ್ ಅವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಪೈಕಿ ನಾನಲ್ಲ.ಅವರು ಯಾವ ರೀತಿಯ ರಾಜಕಾರಣ ಮಾಡಿದ್ದಾರೆ ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ.ಇನ್ನು ಮುಂದೆ ಹೇಗೆ ಮಾಡುತ್ತಾರೆ ಎಂಬ ಬಗ್ಗೆಯೂ ಜನತೆಗೆ ಗೊತ್ತಿದೆ.ನಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿರುವ ಈತನ ಗೊಡ್ಡು ಬೆದರಿಕೆಗೆ ಹೆದರುವ ಪೈಕಿ ನಾನಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ಆತನ ಪತ್ನಿ ನೀಡಿರುವ ದೂರಿನ ರೀತಿಯಲ್ಲಿಯೇ ಆಗಿದೆ. ಈವಿಚಾರದಲ್ಲಿ ನನ್ನ ಮತ್ತು ಶಾಸಕ ಪ್ರದೀಪ್ ಈಶ್ವರ್ ಹೆಸರು ತರುವುದರಲ್ಲಿ ಅರ್ಥವೇ ಇಲ್ಲ. ನನಗೂ ಬಾಬು ಮತ್ತು ಅವರ ಕುಟುಂಬಕ್ಕೂ ಏನು ಸಂಬAಧ, ಕಾಮಾಲೆ ಕಣ್ಣಿಗೆ ಕಾಣುವು ದೆಲ್ಲಾ ಹಳದಿ ಎಂದರು.

ಇದನ್ನೂ ಓದಿ: Chikkaballapur News: ತಾಲೂಕು ಆರೋಗ್ಯ ಅಧಿಕಾರಿಗೆ ಸನ್ಮಾನಿಸಿದ ಭೋವಿ ಸಮಾಜ

ಜನರ ವಿಶ್ವಾಸ ಇರೋವರೆಗೂ ನಮ್ಮನ್ನು ಯಾರೂ ಏನು ಮಾಡಕ್ಕಾಗಲ್ಲ,ಎರಡು ಕಾಲು ವರ್ಷದಲ್ಲಿ ನಾವು ಯಾವತ್ತು ದ್ವೇಷದ ರಾಜಕಾರಾಣ ಮಾಡಿಲ್ಲ , ಎಲ್ಲರನ್ನೂ ಸೋಲಿಸಿ ಬಿಡ್ತೇನೆ, ಮುಗಿಸಿ ಬಿಡುತ್ತೇನೆ ಎಂದು ಅಬ್ಬರಿಸುವ ಈತ ದುಡ್ಡಿನ ದುರಹಂಕಾರದಿಂದ ಆ ರೀತಿ ಮಾತಾಡ್ತಾರೆ. ೨೦೨೩ರ ಚುನಾವಣೆಯಲ್ಲಿ ಚಿಂತಾಮಣಿಯಲ್ಲಿ ನಾನು ನಿಲ್ಲಿಸುವ ಕ್ಯಾಂಡಿಟೇಟ್ ಮೇಲೆ ಗೆದ್ದು ಬರಲಿ ನೋಡೋಣ ಅಂದಿದ್ರು. ಗೆದ್ದಿದ್ದೂ ಆಯಿತು, ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದೂ ಆಯಿತು. ಇವರಂತೆ ನಾನು ರಾಜಕಾರಣ ಮಾಡಲ್ಲ, ನಾನು ನನ್ನದೇ ರೀತಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡುವ ರಾಜಕಾರಣ ಮಾಡುವನು ಎಂದು ತಿರುಗೇಟು ನೀಡಿದರು.

ಸಚಿವ ರಾಜಣ್ಣ ಅವರ ರಾಜೀನಾಮೆ ಸಲ್ಲಿಸುವ ಸಂದರ್ಭ, ಮುಖ್ಯಮಂತ್ರಿಗಳನ್ನು ಮಾತನಾಡಿದ ಸಂದರ್ಭದಲ್ಲಿ ನಾನು ಅವರ ಜತೆಯೇ ಇದ್ದೆ. ನಾವೆಲ್ಲಾ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧರಾಗಿರು ವವರು. ಹೈಕಮಾಂಡ್ ಹೇಳಿದರೆ ರಾಜಿನಾಮೆ ಕೊಡಲೇಬೇಕು.ಅದು ರಾಜಣ್ಣ ಆಗಲಿ, ನಾನಾಗಲಿ ಅಷ್ಟೇ.ಈ ವಿಚಾರ ಮುಗಿದ ಅಧ್ಯಾಯ. ಹೈಕಮಾಂಡ್‌ಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಮಾತಾಡಿರುವ ಸತೀಶ್ ಜಾರಕಿಹೊಳಿ ಅವರ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.

ಜಾತಿನಿಂದನೆ ಪ್ರಕರಣ ದಾಖಲಾಗಿರುವ ಬಗ್ಗೆ ಇವರಿಗೆ ಈಗ ನೋವಾಗಿರುವಂತೆ, ಇವರ ಅಧಿಕಾರ ದಲ್ಲಿ ಎಷ್ಟು ಜನ ನೊಂದಿಲ್ಲ, ಕರ್ಮ ಯಾರನ್ನೂ ಬಿಡುವುದಿಲ್ಲ. ಬಾಬು ಎಂಬ ವ್ಯಕ್ತಿ ಡೆತ್ ನೋಟ್‌ನಲ್ಲಿ ಇವರ ಹೆಸರನ್ನೇ ಯಾಕೆ ಪದೇ ಪದೇ ಬರೆದಿದ್ದಾರೆ? ಇವರ ತೆವಲಿಗಾಗಿ ಜಿಲ್ಲಾ ಕೇಂದ್ರದಿAದ ೧೮/೨೦ ಕಿ.ಮೀ ದೂರದಲ್ಲಿ, ತಮ್ಮ ಊರಿಗೆ ಸಮೀಪ ಮೆಡಿಕಲ್ ಕಾಲೇಜು ಮಾಡಿಕೊಂಡ ಮೇಲೆ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕಲ್ಲ,ದೊಡ್ಡ ಗುಮ್ಮಟ ಬೇಕೆಂದರು ಮಾಡಿಸಿದ್ದೇನೆ.ವಿದ್ಯಾರ್ಥಿಗಳ ಅನುಕೂಲಕ್ಕೆ ಮೆಡಿಕಲ್ ಕಾಲೇಜಿಗೆ ನನ್ನ ಅವಧಿಯಲ್ಲಿ ೩೦೦ ಕೋಟಿ ಮಂಜೂರು ಮಾಡಿಕೊಡಲಾಗಿದೆ.ಸರಕಾರ ಪಾಪರ್ ಆಗಿದೆ ಎನ್ನುವ ಇವರಿಗೆ ಈ ಹಣ ಹೇಗೆ ನೀಡಲಾಯಿತು ಎನ್ನುವುದು ತಿಳಿದಿದೆಯೇ ಎಂದರು.