ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

International Women's Day: ಮಹಿಳೆಯರು ಕನಸು ಕಟ್ಟಿಕೊಂಡು ಧೈರ್ಯದಿಂದ ಮುನ್ನುಗ್ಗಿದರೆ ಜಯ ನಿಮ್ಮದೇ : ಪ್ರೊ.ಕೋಡಿರಂಗಪ್ಪ ಸಲಹೆ

ಮಹಿಳೆಗೆ ಈ ಮೊದಲು ಶಿಕ್ಷಣ ಮರೀಚಿಕೆಯಾಗಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ದೊರೆತ ಶಿಕ್ಷಣ ದ ಫಲವಾಗಿ ಸ್ವಾತಂತ್ರ್ಯ ಮತ್ತು ಹಕ್ಕುಗಳು ದೊರೆತ ಪರಿಣಾಮ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಸಾಧ್ಯವಾಗಿದೆ. ಮಹಿಳೆಯನ್ನು ಇಂದು ಕೇವಲ ಗೃಹಿಣಿ ಯಾಗಿ ಮಾತ್ರ ಕಾಣಲಾಗದು. ಸಿಕ್ಕಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ

ಚಿಕ್ಕಬಳ್ಳಾಪುರ : ಮಹಿಳೆಯರು ಕನಸು ಕಟ್ಟಿಕೊಂಡು ಧೈರ್ಯದಿಂದ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಮುನ್ನುಗ್ಗಿದರೆ ಸಮಾಜ ತಾನಾಗೇ ಗುರುತಿಸಲಿದೆ. ನಿಮ್ಮ ಅಸ್ತಿತ್ವ ಉಳಿಯಲಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಕೋಡಿರಂಗಪ್ಪ ತಿಳಿಸಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ(International Women's Day)ಗೆ ಚಾಲನೆ ನೀಡಿ ಮಾತನಾಡಿದರು.  

ಮಹಿಳೆಗೆ ಈ ಮೊದಲು ಶಿಕ್ಷಣ ಮರೀಚಿಕೆಯಾಗಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ದೊರೆತ ಶಿಕ್ಷಣದ ಫಲವಾಗಿ ಸ್ವಾತಂತ್ರ್ಯ ಮತ್ತು ಹಕ್ಕುಗಳು ದೊರೆತ ಪರಿಣಾಮ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಸಾಧ್ಯವಾಗಿದೆ. ಮಹಿಳೆಯನ್ನು ಇಂದು ಕೇವಲ ಗೃಹಿಣಿ ಯಾಗಿ ಮಾತ್ರ ಕಾಣಲಾಗದು.ಸಿಕ್ಕಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಇದನ್ನೂ ಓದಿ: International Women's Day: ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ಲಿಂಗ ತಾರತಮ್ಯ ಮಾಡದೆ ಅವರಿಗೆ ಅವಕಾಶಗಳನ್ನು ನೀಡಿದರೆ ಭಾರತದ ಭವಿಷ್ಯ ಬೆಳಗಲಿದೆ.ಆಟೋ ಚಾಲಕರಿಂದ ಮೊದಲಾಗಿ ಬಾಹ್ಯಾಕಾಶದವರೆಗೆ ಮಹಿಳೆಯ ಸಾಧನೆ ವಿಸ್ತರಿಸಿದೆ.ಇದನ್ನು ಮನಗಂಡು ಶಾಲಾ ಕಾಲೇಜುಗಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರು ಸಂವಿಧಾನದತ್ತ ಅವಕಾಶಗಳನ್ನು, ಸ್ವಾತಂತ್ರ್ಯವನ್ನು ಸಮರ್ಥವಾಗಿ ಬಳಸಿಕೊಂಡರೆ ಖಂಡಿತ ಸಂಕಲ್ಪಿತ ಸಾಧನೆ ಮಾಡಲು ಸಾಧ್ಯ. ಇಂದು ಸಾಮಾಜಿಕ ವ್ಯವಸ್ಥೆ ಬದಲಾಗಿದ್ದು ಮಹಿಳೆ ಎಲ್ಲವನ್ನೂ ಸಹಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಮಹಿಳೆಗೆ ಸಿಕ್ಕಿರುವ ಸ್ವಾತಂತ್ರ್ಯ ಮತ್ತು ಹಕ್ಕುಗಳ ಸದ್ಭಳಕೆಯ ಬಗ್ಗೆ ಸಮಾಜದಲ್ಲಿ ಚರ್ಚೆ ಗಳು ಪ್ರಾರಂಭವಾಗಿವೆ. ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗುವವರ ಸ್ವೇಚ್ಛಾಚಾರದ ಬಗ್ಗೆ ಕಟು ಟೀಕೆಗಳು ಕೇಳಿ ಬರುತ್ತವೆ. ಇಂತಹ ಅಪಸವ್ಯಗಳಿಗೆ ಅವಕಾಶ ನೀಡದಂತೆ ನಾಜೂಕಿನ ಬದುಕು ನಮ್ಮದಾಗಿ ಮಾಡಿಕೊಂಡರೆ ಮಹಿಳೆಯಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ವಿವಿಧ ಸಂಘಟನೆಗಳು ಮತ್ತು ಸಂಸ್ಥೆಗಳ ವತಿಯಿಂದ ಮಹಿಳೆಯರ ಸಾಧನೆಗಳನ್ನು ಕೊಂಡಾಡುವ ಕಾರ್ಯಕ್ರಮ ಆಯೋಜಿಸ ಲಾಯಿತು.

cbpm6dance

ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ  ಮಹಿಳೆಯರಿಂದ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡು ತ್ತಿದ್ದು, ಅವರ ಸಬಲೀಕರಣದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ. ಮಹಿಳೆಯರು ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದು, ಅವರಿಗೆ ಸಮಾನ ಅವಕಾಶ ಮತ್ತು ಗೌರವ ದೊರಕಬೇಕು ಎಂದು ಅಭಿಪ್ರಾಯಪಟ್ಟರು.

ಕೈವಾರ ತಾತಯ್ಯ ಅವರ ಬದುಕು ಬರಹ ಕಾಲಜ್ಞಾನ, ಸಮಸಮಾಜದ ಆಶಯಗಳ ಬಗ್ಗೆ ನಿವೃತ್ತ ಶಿಕ್ಷಕ ಸರ್ದಾರ್ ಚಾಂದ್ ಪಾಷ ಮಾತನಾಡಿದರೆ, ಮಹಿಳೆಯರ ಬದುಕು ಸಾಧನೆ ಸವಾಲುಗಳು ಬಗ್ಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ವಸುಂದರ ಸೊಗಸಾಗಿ ಮಾತನಾಡಿದರು.

ಪ್ರಾಂಶುಪಾಲ ಜಿ.ಡಿ. ಚಂದ್ರಯ್ಯ ಮಾತನಾಡಿ, ಮಹಿಳಾ ಸಬಲೀಕರಣವಾದಲ್ಲಿ ಮಾತ್ರ ಸಮಸಮಾಜದ ಆಶಯಗಳು ಈಡೇರಲಿವೆ. ಈ ನಿಟ್ಟಿನಲ್ಲಿ ಕಸಾಪ ಸಹಯೋಗದಲ್ಲಿ ಕೈವಾರ ತಾತಯ್ಯ ಜಯಂತಿ ಹಾಗೂ ಮಹಿಳಾ ದಿನಾಚರಣೆಯನ್ನು ಒಟ್ಟೊಟ್ಟಿಗೆ ಆಚರಿಸಿ ತಾತಯ್ಯ ಅವರ ಚಿಂತನೆಗಳು, ಮಹಿಳಾ ದಿನಾಚರಣೆಗೆ ಅರ್ಹ ಗೌರವ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ವಿವಿಧ ವೃತ್ತಿಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳೆಯರ ಹಕ್ಕುಗಳು, ಆರೋಗ್ಯ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿ ಮೂಡಿಸ ಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಮಹಿಳಾ ಸಂಘಗಳ ಸದಸ್ಯರು, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ವಿವಿಧ ಹಾಡುಗಳಿಗೆ ಆಕರ್ಷಕವಾಗಿ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೆಲ ಉಪನ್ಯಾಸಕರೂ ನೃತ್ಯಕ್ಕೆ ಹೆಜ್ಜೆ ಹಾಕಿ ಉತ್ಸಾಹ ತುಂಬಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಕೆ.ಎಂ.ರೆಡ್ಡಪ್ಪ, ಪ್ರೇಮಲೀಲಾ ವೆಂಕಟೇಶ್, ನಗರಸಭಾ ಸದಸ್ಯೆ ಅಣ್ಣಮ್ಮ, ಚಂದ್ರಶೇಖರ್, ಸೇರಿದಂತೆ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು.