ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

International Women's Day: ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ

ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಮತ್ತು ಹಣಕಾಸು ಸಾಕ್ಷರತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು. ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ-1,2 ಮತ್ತು ಗ್ರೀನ್ಸ್ ಇನೋವೇಟರ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆವಲಹಳ್ಳಿ ಯ ಕುವೆಂಪು ರಂಗ ಮಂದಿರದಲ್ಲಿ ದಕ್ಷಿಣ ವಲಯ-2ರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉದ್ಘಾಟಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ

-

Ashok Nayak
Ashok Nayak Mar 9, 2026 3:19 PM

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಮತ್ತು ಹಣಕಾಸು ಸಾಕ್ಷರತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು.

ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ-1,2 ಮತ್ತು ಗ್ರೀನ್ಸ್ ಇನೋವೇಟರ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆವಲಹಳ್ಳಿಯ ಕುವೆಂಪು ರಂಗ ಮಂದಿರದಲ್ಲಿ ದಕ್ಷಿಣ ವಲಯ-2ರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉದ್ಘಾಟಿಸಿದರು.

WhatsApp Image 9

ನಂತರ ಮಾತನಾಡಿದ ಗಿರಿಜಮ್ಮ, ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿ ಯಾಗಬೇಕು. ಇದಕ್ಕಾಗಿ ಸೂಕ್ತ ಹಣಕಾಸು ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Bangalore Tunnel Road: ಸಂಚಾರ ದಟ್ಟಣೆ ಮುಕ್ತಿಗೆ ಬೆಂಗಳೂರಿನಲ್ಲಿ ಶೀಘ್ರವೇ ಮತ್ತೊಂದು ಸುರಂಗ ಮಾರ್ಗ

ಡಾ.ನಳಿನಿ ಮಾತನಾಡಿ, ಹೆಣ್ಣು ಮಕ್ಕಳು ಆರೋಗ್ಯ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕು. ಗುಣಮಟ್ಟದ ಆಹಾರ, ವಿಹಾರಕ್ಕೆ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು.

ಕೆನರಾ ಬ್ಯಾಂಕ್ ಮ್ಯಾನೇಜರ್ ಲಾವಣ್ಯ ಅವರು, ಹಣಕಾಸು ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗಿನ್ನಿಸ್ ವಿಶ್ವ ದಾಖಲೆಯ ರಂಗಲಕ್ಷ್ಮಿ ಶ್ರೀನಿವಾಸರವರ ನಗೆಯೋಗ ನೃತ್ಯದಲ್ಲಿ ಮಹಿಳೆಯರು ಅತ್ಯಂತ ಆನಂದದಿಂದ ಪಾಲ್ಗೊಂಡು ಸಂಭ್ರಮಿಸಿ ದರು.