ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gauribidanur News: ಭಾರತ ದೇಶವು ಇಂದು ಪ್ರಗತಿಯ ಕಡೆ ಮುಂದಡಿಯಿಡುತ್ತಿದೆ: ಶ್ರೀಮತಿ ಎಸ್.ವಿಜಯಲಕ್ಷ್ಮಿ

1947ರ ಆಗಸ್ಟ್ 15ರಂದು ಭಾರತ ಸ್ವತಂತ್ರ ಪಡೆದ ಬಳಿಕ ಡಾ. ಬಿಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಸಮಿತಿ ರಚನೆ ಮಾಡಲಾಯಿತು. 1950 ಜನವರಿ 26 ರಂದು ಭಾರತ ಸಂವಿಧಾನವನ್ನು ಜಾರಿಗೊಳಿಸಿ ಸ್ವತಂತ್ರ ಗಣರಾಜ್ಯವಾದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತೇವೆ.

"ಭಾರತ ದೇಶವು ಇಂದು ಪ್ರಗತಿಯ ಕಡೆ ಮುಂದಡಿಯಿಡುತ್ತಿದೆ" ಎಂದು ಪ್ರಜ್ಞಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಎಸ್. ವಿಜಯಲಕ್ಷ್ಮಿ ತಿಳಿಸಿದರು.

ಗೌರಿಬಿದನೂರು: "ಭಾರತ ದೇಶವು ಇಂದು ಪ್ರಗತಿಯ ಕಡೆ ಮುಂದಡಿಯಿಡುತ್ತಿದೆ" ಎಂದು ಪ್ರಜ್ಞಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಎಸ್.ವಿಜಯಲಕ್ಷ್ಮಿ ತಿಳಿಸಿದರು.

ಪ್ರಜ್ಞಾ ಟ್ರಸ್ಟ್ ಸಂಸ್ಥೆ ನಡೆಸುತ್ತಿರುವ ಅರುಣೋದಯ ವಿಶೇಷ ಶಾಲೆ ಮತ್ತು ಪ್ರತೀಕ್ಷಾ ಕೇಂದ್ರದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

1947ರ ಆಗಸ್ಟ್ 15ರಂದು ಭಾರತ ಸ್ವತಂತ್ರ ಪಡೆದ ಬಳಿಕ ಡಾ. ಬಿಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಸಮಿತಿ ರಚನೆ ಮಾಡಲಾಯಿತು. 1950 ಜನವರಿ 26ರಂದು ಭಾರತ ಸಂವಿಧಾನವನ್ನು ಜಾರಿಗೊಳಿಸಿ ಸ್ವತಂತ್ರ ಗಣರಾಜ್ಯವಾದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಆರ್.ಬಿ.ತಿಮ್ಮಾಪುರ ಸೇರಿ ದಲಿತ ಸಚಿವರ ಮೇಲಿನ ಅಪಪ್ರಚಾರ ನಿಲ್ಲಿಸಿ: ಇಲ್ಲವೇ ಹೋರಾಟ ಎದುರಿಸಿ

ಕಾರ್ಯಕ್ರಮದ ಅತಿಥಿಗಳಾದ ವೀರಂಡ ಹಳ್ಳಿಯ ಜೆ.ಪಿ ಮುಖಂಡರಾದ ನಂದೀಶ್ ರವರು ಮಕ್ಕಳಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ, ಸಂವಿಧಾನದ ಮಹತ್ವ ಮತ್ತು ಅವಶ್ಕಕತೆಯನ್ನು ವಿವರವಾಗಿ ಹೇಳಿ,  ಇಂದು ಭಾರತ ಇಡೀ ಪ್ರಪಂಚದಲ್ಲಿ ವಿಶ್ವ ಗುರು ಎನಿಸಿಕೊಳ್ಳಲು ನಮ್ಮ ರಾಷ್ಟ್ರದ ಜೀವನ ಪದ್ಧತಿ, ನಡವಳಿಕೆ, ಸಹನೆ, ಶಾಂತಿ, ಸಹಬಾಳ್ವೆ ಮುಖ್ಯವಾಗಿವೆ ಎಂದರು. ಮುಂದುವರೆದು ಅವರು ನಮ್ಮ ಶಾಲೆಗೆ ಬೇಕಾಗುವ ಸಹಾಯ ಸಹಕಾರಗಳನ್ನು ನೀಡುವುದಾಗಿ ತಿಳಿಸಿದರು.  

ಬಿಐಆರ್‌ಟಿ  ದಾಳಪ್ಪರವರು ಕಾರ್ಯಕ್ರಮ ನಿರೂಪಿಸಿದರು.  ಅಂಗನವಾಡಿ ಶಿಕ್ಷಕಿ ಶ್ರೀಮತಿ ರಮಾದೇವಿರವರು ಪ್ರಾರ್ಥನೆ ನಡೆಸಿಕೊಟ್ಟರು.

ಶಾಲಾ ಸಿಬ್ಬಂದಿ ಶಾಂತಾಮಹೇಶ್. ನಳಿನ. ಸವಿತಾ, ಗೌತಮಿ, ಶಾಂತ ಲಕ್ಷ್ಮಿ, ಮುಬೀನಾ, ಮಕ್ಕಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ಸಿಹಿ ಹಂಚಲಾಯಿತು.