Bagepally News: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ತರಲು ಆಂತರಿಕ ದೂರು ಸಮಿತಿ ಕಡ್ಡಾಯ:-ಎ.ಜಿ.ಸುಧಾಕರ್
ಕಾನೂನು ಪ್ರಕಾರ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಪ್ರತಿ ಬಂಧಿಸಲು, ನಿಷೇಧಿಸಲು ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ಒದಗಿಸಲು ಈ ಸಮಿತಿಯು ಕಾರ್ಯ ಪ್ರವತ್ತವಾಗಬೇಕಾಗಿದೆ. ದೂರುದಾರಳಿಗೆ ಪರಿಹಾರ ನೀಡುವುದು ಹಾಗೂ ಕೆಲಸದ ಸ್ಥಳದಲ್ಲಿ ದುಡಿಯುವ ಮಹಿಳೆಯರಿಗೆ ಭದ್ರತೆ ನೀಡುವುದು ಈ ಸಮಿತಿಯ ಕರ್ತವ್ಯ ವಾಗಿರುತ್ತದೆ
-
ಬಾಗೇಪಲ್ಲಿ: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಸಮ ರ್ಪಕ ಅನುಷ್ಠಾನಕ್ಕೆ ತರಲು ಆಂತರಿಕ ದೂರು ಸಮಿತಿ ಕಡ್ಡಾಯವಾಗಿ ಸ್ಥಾಪಿಸಬೇಕು ಎಂದು ಎ.ಜಿ.ಸುಧಾಕರ ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಸಂತ್ವಾನ ಕೇಂದ್ರ ಬಾಗೇಪಲ್ಲಿ ಸದಸ್ಯರು ಸೂಚಿಸಿದರು.
ಬಾಗೇಪಲ್ಲಿ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯದಲ್ಲಿ ಆಂತರಿಕ ದೂರು ನಿರ್ವಹಣಾ ಸಮಿತಿಗೆ ಆಯ್ಕೆ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿ, ಕಾನೂನು ಪ್ರಕಾರ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಪ್ರತಿ ಬಂಧಿಸಲು, ನಿಷೇಧಿಸಲು ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ಒದಗಿಸಲು ಈ ಸಮಿತಿಯು ಕಾರ್ಯ ಪ್ರವತ್ತವಾಗಬೇಕಾಗಿದೆ. ದೂರುದಾರಳಿಗೆ ಪರಿಹಾರ ನೀಡುವುದು ಹಾಗೂ ಕೆಲಸದ ಸ್ಥಳದಲ್ಲಿ ದುಡಿಯುವ ಮಹಿಳೆಯರಿಗೆ ಭದ್ರತೆ ನೀಡುವುದು ಈ ಸಮಿತಿಯ ಕರ್ತವ್ಯ ವಾಗಿರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಯುವಶಕ್ತಿಗೆ ದೊರೆತಿರುವ ರಾಷ್ಟ್ರಮಟ್ಟದ ಅವಕಾಶ ಸದುಪಯೋಗವಾಗಲಿ: ಭಾನು ಚೈತನ್ಯ ವರ್ಮಾ
ಇತ್ತೀಚೆಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಈ ಆಂತರಿಕ ದೂರು ಸಮಿತಿ ರಚಿಸಲಾಗಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಯಾವುದೇ ರೀತಿಯ ಅಭದ್ರತೆ ಅನಿಸಿದರೆ, ಕೂಡಲೇ ಈ ಸಮಿತಿಗೆ ದೂರು ನೀಡಬಹುದು ಎಂದು ಹೇಳಿದರು.
ಆಂತರಿಕ ದೂರ ನಿರ್ವಹಣಾ ಸಮಿತಿ ಆಯ್ಕೆ ಪಟ್ಟಿ:- ಬಿ.ಎಸ್.ಕವಿತ ಅಧ್ಯಕ್ಷೆ ನಿಲಯ ಪಾಲಕರು ಬಾಗೇಪಲ್ಲಿ ಟೌನ್ ರತ್ನಮಾಲ ಎನ್. ಕಾರ್ಯದರ್ಶಿ ಸದಸ್ಯರು ನಿಲಯ ಪಾಲಕರು ಬಾಗೇಪಲ್ಲಿ ಎ.ಜಿ.ಸುಧಾಕರ್ ಹಿರಿಯ ವಕೀಲರು ಬಾಗೇಪಲ್ಲಿ ಸದಸ್ಯರು, ಶ್ರೀಮತಿ ಸುಮಿತ್ರ. ಎಸ್ ಸದಸ್ಯರು, ಅಲವೇಲಮ್ಮ ಸದಸ್ಯರು, ಲಕ್ಷ್ಮೀನರಸಮ್ಮ ಸದಸ್ಯರು ಇವರು ಆಯ್ಕೆ ಯಾಗಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಮಹಿಳಾ ಸಂತ್ವಾನ ಕೇಂದ್ರ ಸದಸ್ಯರಾದ ಸುಶೀಲಮ್ಮ, ಅಲುವೇಲಮ್ಮ ಹಾಗು ಇತರೆ ಸದಸ್ಯರು ಹಾಜರಿದ್ದರು.