Chikkaballapur News: ಪೂಜ್ಯ ಸಪ್ತ ಋಷಿಗಳೇ ಆರತಿಯನ್ನು ಅರ್ಪಿಸಲು ಬರುತ್ತಾರೆ ಎಂಬ ನಂಬಿಕೆಯಿದೆ
ಪ್ರಪಂಚದಾದ್ಯಂತ ಆಧ್ಯಾತ್ಮಿಕ ಮೂಲಸೌಕರ್ಯಗಳನ್ನು ನಿರ್ಮಿಸಿ ಸಂಪೂರ್ಣ ಮಾನವೀಯತೆಗೆ ಆಧ್ಯಾತ್ಮಿಕತೆಯ ಒಂದು ಹನಿಯನ್ನು ನೀಡುವ ಸದ್ಗುರುಗಳ ಆಶಯದ ಒಂದು ಭಾಗವಾಗಿದೆ. ಈ ಸ್ಥಳವು ಜನರಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇದು ಮನ ಸ್ಸು, ದೇಹ, ಭಾವನೆ ಮತ್ತು ಶಕ್ತಿಗಳಿಗೆ ಸಾಮರಸ್ಯವನ್ನು ತರಲು ನಮ್ಮ ಪರಂಪರೆಯಾದ ಯೋಗ ವಿಜ್ಞಾನ ದಿಂದ ಹಲವಾರು ಸಾಧನಗಳು ಮತ್ತು ತಂತ್ರಜ್ಞಾನಗಳನ್ನು ಅರ್ಪಿಸುತ್ತದೆ.


ಚಿಕ್ಕಬಳ್ಳಾಪುರ: ತಾಲೂಕಿನ ಈಶಾದ ಸದ್ಗುರು ಸನ್ನಿಧಿಯಲ್ಲಿರುವ ಯೋಗೇಶ್ವರ ಲಿಂಗದಲ್ಲಿ ಕಾಶಿ ಯಿಂದ ಬಂದ ಏಳು ಅರ್ಚಕರು ಸಪ್ತ ಋಷಿ ಆವಾಹನಂ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಪ್ತ ಋಷಿ ಆವಾಹನಂ ಎಂಬುದು ಶಿವನ ಅನುಗ್ರಹಕ್ಕೆ ಪಾತ್ರರಾಗಲು ಕಾಶಿ ವಿಶ್ವನಾಥ ದೇವಾಲಯ ದಲ್ಲಿ ಪ್ರತಿದಿನ ನಡೆಯುವ ಶಕ್ತಿಯುತ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯನ್ನು ಶತಮಾನಗಳಿಂದ ಸಂರಕ್ಷಿಸಲಾಗಿದೆ ಮತ್ತು ಪೂಜ್ಯ ಸಪ್ತ ಋಷಿಗಳೇ ಆರತಿಯನ್ನು ಅರ್ಪಿಸಲು ಬರುತ್ತಾರೆ ಎಂಬ ನಂಬಿಕೆಯಿದೆ.
ಪ್ರಪಂಚದಾದ್ಯಂತ ಆಧ್ಯಾತ್ಮಿಕ ಮೂಲಸೌಕರ್ಯಗಳನ್ನು ನಿರ್ಮಿಸಿ ಸಂಪೂರ್ಣ ಮಾನವೀಯತೆಗೆ ಆಧ್ಯಾತ್ಮಿಕತೆಯ ಒಂದು ಹನಿಯನ್ನು ನೀಡುವ ಸದ್ಗುರುಗಳ ಆಶಯದ ಒಂದು ಭಾಗವಾಗಿದೆ. ಈ ಸ್ಥಳವು ಜನರಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇದು ಮನ ಸ್ಸು, ದೇಹ, ಭಾವನೆ ಮತ್ತು ಶಕ್ತಿಗಳಿಗೆ ಸಾಮರಸ್ಯವನ್ನು ತರಲು ನಮ್ಮ ಪರಂಪರೆಯಾದ ಯೋಗ ವಿಜ್ಞಾನದಿಂದ ಹಲವಾರು ಸಾಧನಗಳು ಮತ್ತು ತಂತ್ರಜ್ಞಾನಗಳನ್ನು ಅರ್ಪಿಸುತ್ತದೆ.
ಈಶದ ಸದ್ಗುರು ಸನ್ನಿಧಿಯಲ್ಲಿ ಪ್ರಸ್ತುತ ನಾಗ ಮಂಟಪ, ಆದಿಯೋಗಿ ಮತ್ತು ಯೋಗೇಶ್ವರ ಲಿಂಗ ಇವುಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಲಿಂಗ ಭೈರವಿ ದೇವಿ, ನವಗ್ರಹ ಮಂಟಪ ಮತ್ತು ೨ ತೀರ್ಥ ಕುಂಡಗಳ ಸ್ಥಾಪನೆಯಾಗಲಿದೆ. ಇದು ಈಶ ಹೋಮ್ ಸ್ಕೂಲ್, ಸಾಂಪ್ರದಾಯಿಕ ಭಾರತೀಯ ಕಲಾ ಪ್ರಕಾರಗಳ ಶಾಲೆಯಾದ ಈಶ ಸಂಸ್ಕೃತಿ ಮತ್ತು ಈಶ ಲೀಡರ್‌ಶಿಪ್ ಅಕಾಡೆಮಿ ಹೊಂದಿರಲಿದೆ. ಕೊಯಮತ್ತೂರಿನ ಈಶ ಯೋಗ ಕೇಂದ್ರದಂತೆಯೇ, ಇಲ್ಲಿಯೂ ಜನರು ಆಂತರಿಕ ಬೆಳವಣಿಗೆಯತ್ತ ಮುನ್ನಡೆಯಲು ಅನುವು ಮಾಡಿಕೊಡಲಾಗುತ್ತಿದೆ.