ಚಿಂತಾಮಣಿ : ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್(Dr B R Ambedkar) ಅವರು ಪ್ರತಿಪಾದಿಸಿದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಸಮಾನತೆಯ ಮೌಲ್ಯಗಳನ್ನು ಪ್ರತಿಯೊಬ್ಬ ರೂ ಅರಿತು ಸಂರಕ್ಷಿಸಬೇಕು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ(H C Mahadevappa) ಹೇಳಿದರು.
ಚಿಂತಾಮಣಿ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಅನುಭವ ಕೇಂದ್ರ, ಭಗವಾನ್ ಬುದ್ಧರ ಪುತ್ಥಳಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಹಾಗೂ ಡಿಜಿಟಲ್ ಅಧ್ಯಯನ ಕೇಂದ್ರವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
“ಪ್ರಜಾಪ್ರಭುತ್ವವನ್ನು ಕಷ್ಟಪಟ್ಟು ಪಡೆದುಕೊಂಡಿದ್ದೇವೆ. ಅದನ್ನು ನಮ್ಮದೇ ತಪ್ಪಿನಿಂದ ಕಳೆದು ಕೊಂಡರೆ ಅದರ ಪರಿಣಾಮವನ್ನು ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಹೇಳಿದರು.
ಇದನ್ನೂ ಓದಿ: Dr H C Mahadevappa: ಸ್ವಾಭಿಮಾನದ ಘೋಷಣೆ ಮೊಳಗಿಸಿದ ಬಲಗೈ ಸಮುದಾಯ ಸಮಾವೇಶ : 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
ದೇಶದ ಶಾಸನ ರೂಪಿಸುವ ಸಂಸತ್‌ನಂತಹ ಮಹತ್ವದ ಸ್ಥಳದಲ್ಲಿ ಬಾಬಾ ಸಾಹೇಬರು ಪ್ರತಿಪಾದಿ ಸಿದ ಮುಕ್ತ ಚರ್ಚೆ, ಸಂವಾದ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತಷ್ಟು ಬಲಗೊಳ್ಳಬೇಕಿದೆ. ಪ್ರಜಾಪ್ರಭುತ್ವದ ಬದಲಿಗೆ ಸರ್ವಾಧಿಕಾರದ ಪ್ರವೃತ್ತಿಗಳು ಬೆಳೆಯದಂತೆ ಜನರು ಎಚ್ಚರ ವಹಿಸ ಬೇಕು ಎಂದರು.
“ಒಂದು ಮತ, ಒಂದು ಮೌಲ್ಯ” ಎಂಬುದು ಪ್ರಜಾಪ್ರಭುತ್ವದ ಪ್ರಮುಖ ಆಶಯ. ಪ್ರತಿಯೊಬ್ಬ ಮತದಾರನ ಮತಕ್ಕೂ ಸಮಾನ ಮೌಲ್ಯವಿದೆ ಎಂಬ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿ ನಲ್ಲಿ ರಾಜ್ಯದಾದ್ಯಂತ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು ಎಂದು ಸ್ಮರಿಸಿದರು.
ತಾವು ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ಚಿಂತಾಮಣಿಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸುಮಾರು ರೂಪಾಯಿ 10 ಕೋಟಿ ಅನುದಾನ ಮಂಜೂರು ಮಾಡಿದ್ದೆನು. ಇಂದು ಅದು ಸುಸಜ್ಜಿತವಾಗಿ ನಿರ್ಮಾಣಗೊಂಡು ಲೋಕಾರ್ಪಣೆಯಾಗಿರುವುದು ಸಂತಸದ ಸಂಗತಿ ಎಂದರು.
ಅಂಬೇಡ್ಕರ್ ಭವನ ಮತ್ತು ಅನುಭವ ಕೇಂದ್ರವು ಬಾಬಾ ಸಾಹೇಬರ ಜೀವನ, ಹೋರಾಟ ಹಾಗೂ ವಿಚಾರಧಾರೆಗಳನ್ನು ಯುವಜನರಿಗೆ ಪರಿಚಯಿಸುವ ಜ್ಞಾನಕೇಂದ್ರವಾಗಿ ಬೆಳೆಯಬೇಕು. ಡಿಜಿಟಲ್ ಅಧ್ಯಯನ ಕೇಂದ್ರದ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸಂವಿಧಾನದ ಆಶಯಗಳನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ(K H Muniyappa), ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ(Eshwar Khandre), ಮಾಜಿ ಸಚಿವ ಹಾಗೂ ಶಾಸಕ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.