ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr H C Mahadevappa: ಸ್ವಾಭಿಮಾನದ ಘೋಷಣೆ ಮೊಳಗಿಸಿದ ಬಲಗೈ ಸಮುದಾಯ ಸಮಾವೇಶ : 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

ಧರ್ಮೀಯತೆ ಮತ್ತು ಕೋಮುವಾದ ಸಂವಿಧಾನ ವಿರೋಧಿ ಶಕ್ತಿಗಳಾಗಿದ್ದು, ಅವುಗಳ ವಿರುದ್ಧ ಜನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದ ಅವರು, ಅಂಬೇಡ್ಕರ್ ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಸಂದೇಶವೇ ಶೋಷಿತ ಸಮುದಾಯಗಳ ಪ್ರಗತಿಗೆ ದಾರಿದೀಪ ವಾಗಿದೆ ಎಂದರು

ಸಂವಿಧಾನ ಬದ್ದವಾಗಿ ನಡೆಯಿರಿ "ಮತ ಮಾರಬೇಡಿ, ಹಕ್ಕುಗಳಿಗಾಗಿ ಸಂಘಟಿತರಾಗಿ"

-

Profile
Ashok Nayak Jul 19, 2026 9:20 PM

ಚಿಕ್ಕಬಳ್ಳಾಪುರ : ಸಂವಿಧಾನವನ್ನು ರಕ್ಷಣೆ ಮಾಡುವ ಮೂಲಕ ಭಾಗತೀಯತೆ ಉಳಿಸುವ ಅಗತ್ಯ ವಿದೆ. ಇದಕ್ಕಾಗಿ ನನ್ನ ಸಮುದಾಯ ಎಂದಿಗೂ ಕೂಡ ಮತವನ್ನು ಮಾರಿಕೊಳ್ಳದೆ ಅರ್ಹರಿಗೆ ಮತಚಲಾಯಿಸಿ.ತನ್ಮೂಲಕ ನ್ಯಾಯಯುತ ಹಕ್ಕುಗಳನ್ನು ಪಡೆಯಿರಿ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ(Dr H C Mahadevappa) ಕರೆ ನೀಡಿದರು.

ನಗರದ ಅಂಬಾರಿ ಪ್ಯಾಲೇಸ್‌ನಲ್ಲಿ ಜಿಲ್ಲಾ ಬಲಗೈ ಜಾತಿಗಳ ಒಕ್ಕೂಟ ಆಯೋಜಿಸಿದ್ದ 'ಬಲಗೈ ಜಾತಿಗಳ ಸ್ವಾಭಿಮಾನಿ ಜನಜಾಗೃತಿ ಸಮಾವೇಶ' ಉದ್ಘಾಟಿಸಿ ಮಾತನಾಡಿದರು.

ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಶೋಷಿತ ಸಮುದಾಯಗಳು ಸಂಘಟಿತರಾಗುವುದು ಕಾಲದ ಅಗತ್ಯ ಎಂದು ಹೇಳಿದರು. "ರಾಜರು ಇನ್ನು ಮುಂದೆ ಅರಮನೆಗಳಲ್ಲಿ ಹುಟ್ಟುವುದಿಲ್ಲ, ಮತಗಟ್ಟೆಗಳಲ್ಲಿ ಹುಟ್ಟುತ್ತಾರೆ" ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಅವರು, "ಯಾವುದೇ ಕಾರಣಕ್ಕೂ ಮತವನ್ನು ಮಾರಾಟ ಮಾಡಬೇಡಿ. ಅಧಿಕಾರ ಯೋಗ್ಯರ ಕೈಗೆ ತಲುಪಬೇಕು"ಇಲ್ಲವಾದಲ್ಲಿ ಸಂವಿಧಾನದ ಮೌಲ್ಯಗಳು ಅದಃಪತನಗೊಳ್ಳುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: HC Mahadevappa: ಕೆಆರ್‌ಎಸ್‌ ಡ್ಯಾಂಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಸಚಿವ ಮಹದೇವಪ್ಪ ವಿವಾದಿತ ಹೇಳಿಕೆ

ಧರ್ಮೀಯತೆ ಮತ್ತು ಕೋಮುವಾದ ಸಂವಿಧಾನ ವಿರೋಧಿ ಶಕ್ತಿಗಳಾಗಿದ್ದು, ಅವುಗಳ ವಿರುದ್ಧ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದ ಅವರು, ಅಂಬೇಡ್ಕರ್ ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಸಂದೇಶವೇ ಶೋಷಿತ ಸಮುದಾಯಗಳ ಪ್ರಗತಿಗೆ ದಾರಿದೀಪ ವಾಗಿದೆ ಎಂದರು. ಅಲ್ಪಸಂಖ್ಯಾತರು ಹಾಗೂ ದಲಿತರ ಹಕ್ಕುಗಳಿಗೆ ಧಕ್ಕೆ ತರುವ ಬೆಳವಣಿಗೆಗಳ ಬಗ್ಗೆ ಸಮಾಜ ಎಚ್ಚರಿಕೆಯಿಂದಿರಬೇಕೆಂದು ಸೂಚಿಸಿದರು.

ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಜನಜಾಗೃತಿ ಸಮಾವೇಶಕ್ಕೆ ಜಿಲ್ಲೆಯ ಎಂಟು ತಾಲೂಕು ಗಳಿಂದ ಆಗಮಿಸಿದ್ದ ಐದು ಸಾವಿರಕ್ಕೂ ಅಧಿಕ ಸಮುದಾಯದ ಸದಸ್ಯರು ಭಾಗವಹಿಸಿ, ಸಾಮಾಜಿಕ ಐಕ್ಯತೆ ಹಾಗೂ ರಾಜಕೀಯ ಸಬಲೀಕರಣದ ಸಂದೇಶ ಸಾರಿದರು. ಏಡುಕೊಂಡಲು ಡೆವಲಪರ್ಸ್ ಅಂಡ್ ಬಿಲ್ಡರ್ಸ್ ಸಂಸ್ಥಾಪಕ ಅಧ್ಯಕ್ಷ ಟಿ. ಶ್ರೀನಿವಾಸಪ್ಪ ಅವರ ನೇತೃತ್ವದಲ್ಲಿ ನಡೆದ ಸಮಾ ವೇಶದಲ್ಲಿ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.

cbpm1edukondal

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಲಗೈ ಜಾತಿಗಳ ಒಕ್ಕೂಟದ ಸಲಹಾ ಸಮಿತಿಯ ಅಧ್ಯಕ್ಷ ಟಿ. ಶ್ರೀನಿವಾಸಪ್ಪ, ಬಲಗೈ ಜಾತಿಗಳನ್ನು ಒಂದೇ ವೇದಿಕೆಗೆ ತಂದು ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಜನರನ್ನು ಹಣ ನೀಡಿ ಕರೆ ತರಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಕಾರ್ಯಕರ್ತರ ಪರಿಶ್ರಮದಿಂದಲೇ ಜನಸಾಗರ ಸೇರಿದೆ ಎಂದು ಸ್ಪಷ್ಟಪಡಿಸಿದರು. ಸಮಾಜವನ್ನು ಸ್ವಾರ್ಥಕ್ಕೆ ಬಳಸುವುದಿಲ್ಲ; ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲಗೊಳಿಸು ವುದೇ ತಮ್ಮ ಗುರಿ ಎಂದರು.

ಸಮತಾ ಸೈನಿಕ ದಳದ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳ ಆಧಾರದ ಮೇಲೆ ಶೋಷಿತ ಸಮುದಾಯಗಳು ರಾಜಕೀಯ ಶಕ್ತಿಯಾಗಿ ಬೆಳೆಯಬೇಕಿದೆ. ಒಕ್ಕೂಟದ ಚಿಹ್ನೆಯಲ್ಲಿರುವ ಅಶೋಕ ಚಕ್ರ ಸಮಾನತೆಯ ಸಂಕೇತವಾಗಿದ್ದು, ಬಿಗಿಮುಷ್ಟಿ ಸಮಾಜದ ಐಕ್ಯತೆಯ ಪ್ರತೀಕ ಎಂದು ಹೇಳಿದರು.

ಸಮಾವೇಶದಲ್ಲಿ ಮಾಜಿ ಸಚಿವ ಟಿ. ಚೆನ್ನಯ್ಯ, ಬಿ. ಬಸವಲಿಂಗಪ್ಪ, ವಿಜ್ಞಾನಿ ರಾಗಿ ಲಕ್ಷಣಯ್ಯ, ಸಾಹಿತಿಗಳಾದ ಸಿದ್ಧಲಿಂಗಯ್ಯ, ದೇವನೂರು ಮಹದೇವ ಅವರಂತಹ ನಾಯಕರ ಕೊಡುಗೆಗಳನ್ನು ಸ್ಮರಿಸಲಾಯಿತು. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಡಾ. ಹೆಚ್.ಸಿ. ಮಹದೇವಪ್ಪ ಅವರಿಗೆ ಸೂಕ್ತ ಸ್ಥಾನ ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂತು.

ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಬಳಿಕ ವಿವಿಧ ಕ್ಷೇತ್ರಗಳ ಸಾಧಕರು, ಅತಿಥಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು, ಏಡುಕೊಂಡಲ ಶ್ರೀನಿವಾಸ್ ದಂಪತಿಗಳನ್ನು ಸನ್ಮಾನಿಸಲಾಯಿತು.

ಅಪ್ಪಗೆರೆ ತಿಮ್ಮರಾಜು ಅವರ ತಂಡ ನಡೆಸಿಕೊಟ್ಟ ಕ್ರಾಂತಿಗೀತೆಗಳ ಕಾರ್ಯಕ್ರಮ ಸಮಾವೇಶಕ್ಕೆ ಮೆರಗು ತಂದಿತು.

ಒಟ್ಟಾರೆ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದ ಜಾಗೃತಿ ಸಮಾವೇಶದಲ್ಲಿ ಸ್ವಾಭಿಮಾನ, ಸಂಘಟನೆ ಮತ್ತು ಸಂವಿಧಾನಬದ್ಧ ಹಕ್ಕುಗಳ ಪ್ರತಿಪಾದನೆಯೊಂದಿಗೆ ಬಲಗೈ ಸಮುದಾಯದ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಯ ಹೊಸ ಶಕ್ತಿ ಪ್ರದರ್ಶನವಾಗಿ ಗಮನ ಸೆಳೆಯಿತು.