ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 08 ಗಂಟೆವರೆಗೆ ವಸ್ತು ಪ್ರದರ್ಶನ : ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
ಚಿಕ್ಕಬಳ್ಳಾಪುರ: ಜ.26 ಮತ್ತು 27 ಎರಡು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(District In-charge Minister Dr.M.C.Sudhakar) ಉದ್ಘಾಟಿಸಲಿದ್ದು ನಾಗರೀಕರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಜಿಲ್ಲಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಎಂ.ಗಾಯಿತ್ರಿ ತಿಳಿಸಿದರು.
ನಗರ ಹೊರವಲಯ ಜಿಲ್ಲಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಬಂಧ ಏರ್ಪಡಿರುವ ಫಲಪುಷ್ಪ ಪ್ರದರ್ಶನ ಕುರಿತು ಮಾಹಿತಿ ನೀಡುವ ಸಂಬಂಧ ಏರ್ಪಡಿಸಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಚಿಕ್ಕಬಳ್ಳಾಪುರ ನಗರದ ಸರ್. ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋ ತ್ಸವದ ಅಂಗವಾಗಿ ಜ.26 ಮತ್ತು 27ರಂದು ಎರಡು ದಿನ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲ ಸಾರ್ವಜನಿಕರು ಬಂದು ವೀಕ್ಷಿಸುವಂತೆ ತೋಟಗಾರಿಕೆ ಜಂಟಿ ನಿರ್ದೇಶಕಿ ಎಂ. ಗಾಯತ್ರಿ ಮನವಿ ಮಾಡಿದರು.
ಇದನ್ನೂ ಓದಿ: Chimul Election: ಚಿಮೂಲ್ ಚುನಾವಣೆಗೆ ನಾಮಪತ್ರ ಸಲ್ಲಿಕೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಫಲಪುಷ್ಟ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ,
ಎರಡು ದಿನ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಪ್ರದರ್ಶನವನ್ನು ನೋಡಲು ಎಲ್ಲ ಸಾರ್ವಜನಿಕರು, ರೈತರಿಗೆ ಉಚಿತ ಪ್ರವೇಶವಿರುತ್ತದೆ. ಇದರ ಉಪಯೋಗ ವನ್ನು ಜಿಲ್ಲೆಯ ಜನತೆ ಪಡೆಯಬಬೇಕು ಎಂದರು.
ಪ್ರಮುಖ ಆಕರ್ಷಣೆಗಳಾಗಿ ಹೂವುಗಳಿಂದ ಅಲಂಕರಿಸಿದ ಐಸಿಸಿ ಮಹಿಳಾ ವಿಶ್ವ ಕಪ್ ಕಲಾಕೃತಿಯ ಚಿತ್ರ , ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಪ್ರತಿಮೆ, ಡಾ ಎಂ.ಹೆಚ್.ಮರೀಗೌಡರ ಪ್ರತಿಮೆ, ಹಸು-ಕರು ಪ್ರತಿಮೆ, ಜಿಲ್ಲೆಯ ರೈತ ಮಹಿಳೆಯರಿಂದ ತಯಾರಿಸಲ್ಪಡುವ ಹೂವಿನ ಜೋಡಣೆ ಕಲಾಕೃತಿ, ಹೂವುಗಳಿಂದ ಅಲಂಕರಿಸಿದ ಆಧುನಿಕ ಮಹಿಳೆ ಕಲಾಕೃತಿ, ಮಾದರಿ ಕೈತೋಟ ಕಿಟೆನ್ ಗಾರ್ಡನ್ ಇರಲಿದೆ ಎಂದರು.
ಹಣ್ಣು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆ ಮಾಡಲಾಗಿದ್ದು, ಜಾನೂರ್ ಕಲಾ ಕೃತಿಗಳ ಪ್ರದರ್ಶನ, ಜಿ.ಐ ಟ್ಯಾಗ್ ಹೊಂದಿರುವ ಭೌಗೋಳಿಕ ಗುರುತಿಸುವಿಕೆಯ ಬೆಳೆಗಳ ಪ್ರದರ್ಶನ, ಔಷಧಿ ಸಸ್ಯಗಳ ಪ್ರದರ್ಶನ, ಜೇನು ಸಾಕಾಣಿಕೆ ಪ್ರದರ್ಶನ, ಐಸಿಎಂಆರ್ ಶಿಫಾರಸ್ಸಿನನ್ವಯ ಸಮತೋಲನ ಆಹಾರ ವಿಂಗಡಣೆ ಕುರಿತ ಕಲಾಕೃತಿ, ಹೂವು ಕುಂಡಗಳ ಜೋಡಣೆ, ವಿವಿಧ ರೀತಿಯ ದೇಶೀಯ ಹಾಗೂ ವಿದೇಶೀಯ ಹೂ, ಹಣ್ಣು ಹಾಗೂ ತರಕಾರಿ ಗಳ ಪ್ರದರ್ಶನ,ಎಕ್ಸೋಟಿಕ್ ಫ್ರೂಟ್ಸ್, ಫ್ಲವರ್, ಅಂಡ್ ಡಿಸ್ʼಪ್ಲೆ, ಇಲಾಖಾ ಯೋಜನೆಗಳ ಮಾಹಿತಿ ಹಾಗೂ ಇತ್ಯಾದಿಗಳನ್ನು ಪ್ರದರ್ಶಿಸಲಾಗುತ್ತದೆ.
ಬೆಂಗಳೂರಿನಲ್ಲಿ ತರಬೇತಿ ನೀಡಿರುವ ೨೦ ಮಂದಿ ಮಹಿಳೆಯರಿಂದ ಬೊಕ್ಕೆ ತಯಾರಿ ಬಗ್ಗೆ ಆಸಕ್ತರಿಗೆ ತರಬೇತಿ ನೀಡಲಾಗುವುದು.ಹೂವುಗಳನ್ನು ಬಳಸಿಕೊಂಡು ಹೇಗೆ ಕಾರ್ಯಕ್ರಮ ಗಳಿಗೆ ಅಂಲಕಾರದ ಬೊಕ್ಕೆ ತಯಾರಿಸುವ ಕಟ್ ಪ್ಲವರ್ ಅರೇಂಜ್‌ಮೆಂಟ್ ಕಲೆಯನ್ನು ತಿಳಿಸಲಾಗುವುದು ಎಂದರು.
ಹೂಕುಂಡಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದ್ದು ಆಸಕ್ತರು ಬಂದು ಇಲಾಖೆ ನಿಗದಿ ಮಾಡಿರುವ ಬೆಲೆಯನ್ನು ನೀಡಿ ಸ್ಥಳದಲ್ಲಿಯೇ ಖರೀದಿ ಮಾಡಬಹುದು.ಜಿಲ್ಲೆಯ ಎಲ್ಲ ರೈತರು, ಸಾರ್ವಜನಿಕರನ್ನು ಆಹ್ವಾನಿಸುತ್ತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ ಅವರು ತೋಟಗಾರಿಕೆ ಇಲಾಖೆ ಬಗ್ಗೆ ರೈತರಿಗೆ ಮಾಹಿತಿ ನೀಡುವ ಮಾಹಿತಿ ಕೇಂದ್ರವನ್ನು ತರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.