ಚಿಕ್ಕಬಳ್ಳಾಪುರ: ರಂಜಾನ್ ಹಬ್ಬದಲ್ಲಿ ವ್ರತಾಚರಣೆಗೆ ವಿಶೇಷವಾದ ಸ್ಥಾನಮಾನವಿದೆ. ಅದರಲ್ಲಿಯೂ ಉಪವಾಸದ 21ನೇ ದಿನ ಉಪವಾಸ ನಿರತರಿಗೆ ಅನ್ನದಾನ ಮಾಡಿದರೆ ಪುಣ್ಯಬರಲಿದೆ ಎಂಬ ಪ್ರತೀತಿಯಿದೆ.ಇಂತಹ ಸೌಭಾಗ್ಯ ಈ ವರ್ಷ ನನ್ನ ಪಾಲಿಗೆ ಬಂದಿರು ವುದು ಪೂರ್ವಜನ್ಮದ ಪುಣ್ಯವಾಗಿದೆ ಎಂದು ಜಯ್ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಜಯಕುಮಾರ್ ತಿಳಿಸಿದರು.
ನಗರದ ವಾಣಿ ಟಾಕೀಸ್ ಸಮೀಪದ ಮಸ್ಜಿದ್ ಎ ಹುಸೇನಿಯಾ ಮಸೀದಿಯಲ್ಲಿ ಜಯ್ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದ ಜೀವನಕ್ರಮದಲ್ಲಿಯೇ ಸಹೋದರತೆ, ಭ್ರಾತೃತ್ವ, ಸಹಿಷ್ಣುತೆ, ಧರ್ಮಜಾಗೃತಿ ಜೀವನಪಾಠವನ್ನು ಕಲಿಸಲಾಗಿದೆ.ಹೀಗಾಗಿಯೇ ನಮ್ಮ ಸಂವಿಧಾನದ ಹೃದಯವಾದ ಪೀಠಿಕೆಯಲ್ಲಿ ಭಾರತದ ಪ್ರೆಜೆಗಳಾದ ನಾವು ಭಾರತವನ್ನು ಒಂದು ಸರ್ವತಂತ್ರ ಸ್ವತಂತ್ರ, ಸಾರ್ವಭೌಮ, ಜಾತ್ಯಾತೀತ ಗಣರಾಜ್ಯವನ್ನಾಗಿ ರೂಪಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದ ತಿಳಿಸಿದೆ ಎಂದರು.
ಶಾಂತಿಯ ಪ್ರತೀಕವಾಗಿರುವ ಚಿಕ್ಕಬಳ್ಳಾಪುರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿ ಎಲ್ಲರೂ ಸಹೋದರತ್ವದ ಮನೋಭಾವದಿಂದ ಒಂದೇ ಕುಟುಂಬದವರಂತೆ ಬದುಕು ತ್ತಿದ್ದಾರೆ. ಈ ನಗರ ಶಾಂತಿಯ ತೋಟವಾಗಿದ್ದು ಮುಂದೆಯೂ ಇದೇ ರೀತಿಯ ಸೌಹಾರ್ದತೆ ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಅಲ್ಲಾಹನ ಕೃಪೆ ಎಲ್ಲರ ಮೇಲೂ ಇರಲಿ. ಈ ಪವಿತ್ರ ತಿಂಗಳಲ್ಲಿ ಕಠಿಣ ಉಪವಾಸ ಆಚರಿಸು ತ್ತಿರುವ ಮುಸ್ಲಿಂ ಬಾಂಧವರ ಪ್ರಾರ್ಥನೆಗಳನ್ನು ದೇವರು ಸ್ವೀಕರಿಸಿ ದೇಶದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಅಮೆರಿಕ, ಇಸ್ರೇಲ್ ಕೂಡಿಕೊಂಡು ಇರಾನ್ ಮೇಲೆ ನಡೆಸುತ್ತಿರುವ ದಾಳಿಯು ಸರಿಯಿಲ್ಲ. ಯುದ್ದದಿಂದ ಹಿಂಸೆಯನ್ನಲ್ಲದೆ ಬೇರೆ ಏನನ್ನೂ ಪಡೆಯಲು ಸಾಧ್ಯವಿಲ್ಲ. ಪವಿತ್ರ ರಂಜಾನ್ ತಿಂಗಳಲ್ಲಿ ಇಂತಹ ಘಟನೆಗಳು ನಡೆಯಬಾರದಿತ್ತು. ಮೂರು ದೇಶಗಳ ಮುಖ್ಯ ಸ್ಥರು ಒಂದೆಡೆ ಕೂತು ಚರ್ಚಿಸಿ ಹಿಂಸೆ ನಿಲ್ಲಿಸಲಿ. ಆದಷ್ಟು ಬೇಗ ಯುದ್ಧ ನಿಂತು ವಿಶ್ವದಲ್ಲಿ ಶಾಂತಿ ನೆಲೆಸಲಿ. ಇದರಿಂದಾಗಿ ಭಾರತದ ಮೇಲೆ ಆಗುತ್ತಿರುವ ಅಡ್ಡ ಪರಿಣಾಮಗಳು ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
ಹೆಚ್.ಎನ್.ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಶಾಸಕರು ಬೆಂಬಲ ಸೂಚಿಸಿದ್ದರೂ ಹೆಚ್ಚಿನ ಅಧಿಕಾರ ಬಂದ ಕೂಡಲೇ ಈ ಕಾರ್ಯ ಮಾಡುವುದಾಗಿ ತಿಳಿಸಿದರೂ, ಬಂದ್ ನಿಂದಲೇ ಎಲ್ಲವನ್ನೂ ಪಡೆಯಬಹುದು ಎನ್ನುವುದು ಬರೀ ಭ್ರಮೆಯಷ್ಟೆ. ಶಾಸಕರೇ ಮುಂದೆ ನಿಂತು ಸರ್ವಪಕ್ಷ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯುವ ಮಾತಾಡಿದ್ದಾರೆ. ಇದು ಆಗುತ್ತದೆಯೋ ಇಲ್ಲವೋ ಎಂಬುದನ್ನು ನೋಡಿಕೊಂಡು ಹೋರಾಟ ಮಾಡಬಹುದಿತ್ತು. ಭಾನುವಾರದ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಜಯ ಫೌಂಡೇಶನ್ ಕಾರ್ಯದರ್ಶಿ ಮುಬಾರಕ್, ಸಲ್ಮಾನ್, ಅಸ್ಗರ್, ಅಮ್ಮು,ಮುದಾಸಿರ್, ನಜೀಂ ಮತ್ತು ಇತರರು ಉಪಸ್ಥಿತರಿದ್ದರು.