ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಭಾನುವಾರ ಬಂದ್ ಕರೆ ಸಮಂಜಸವಲ್ಲ, ವ್ಯಾಪಾರಕ್ಕೆ ತೊಂದರೆ, ಬೇರೆ ದಿನದಲ್ಲಿ ಬಂದ್‌ ಮಾಡಿ: ಮಂಜುನಾಥ್ ಆಗ್ರಹ

ಮಾ.19ರಂದು ಯುಗಾದಿ ಹಬ್ಬವಿದೆ. ಅದರ ಮರುದಿನ ವರುಷ ತೊಡಕು, ಆನಂತರ ಒಂದೆರಡು ದಿನಗಳಲ್ಲಿ ರಂಜಾನ್ ಹಬ್ಬ ಬರುತ್ತದೆ. ಇವರು ಮಾ.15ರಂದು ಬಂದ್ ಕರೆದಿರುವು ದರಿಂದ ಯುಗಾದಿ ಹಬ್ಬ, ವರ್ಷ ತೊಡಕು ಮತ್ತು ರಂಜಾನ್ ಹಬ್ಬ ಆಚರಣೆ ಮಾಡುವವರಿಗೆ, ಹಬ್ಬದ ಸಾಮಗ್ರಿ ಖರೀದಿಸುವವರಿಗೆ, ಹೊಸಬಟ್ಟೆ ಮತ್ತು ಹಬ್ಬದ ಆಚರಣೆಗೆ ಸಿದ್ಧತೆ ಮಾಡಿ ಕೊಳ್ಳಲು, ಮದುವೆ ಇತ್ಯಾದಿ ಶುಭ ಸಮಾರಂಭಗಳಲ್ಲಿ ಭಾಗಿ ಯಾಗುವವರಿಗೆ, ಭಾನುವಾರದ ವ್ಯಾಪಾರ ನಂಬಿ ಬದುಕುವವರಿಗೆ ತುಂಬಾ ತೊಂದರೆ ಆಗಲಿದೆ

ಭಾನುವಾರ ಬಂದ್ ಕರೆ ಸಮಂಜಸವಲ್ಲ, ಬೇರೆ ದಿನ ಬಂದ್‌ ಮಾಡಿ

ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ 15ನೇ ವಾರ್ಡ್ ನಿವಾಸಿ ಜೆ.ಎಲ್.ಮಂಜುನಾಥ್ ಬಂದ್ ದಿನಾಂಕ ಬದಲಿಸುವಂತೆ ಮುಖಂಡರಲ್ಲಿ ಮನವಿ ಮಾಡಿದರು. -

Ashok Nayak
Ashok Nayak Mar 9, 2026 10:43 PM

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರಕ್ಕೆ ಪರಿಶುದ್ಧವಾದ ನೀರಿನ ಸೌಲಭ್ಯ ಒದಗಿಸಲು ಸರ್ಕಾರ ವನ್ನು ಒತ್ತಾಯಿಸಿ ಮಾ.15ರಂದು ಕೆಲವು ಸಂಘಟನೆಗಳ ಮುಖಂಡರು ಕರೆದಿರುವ ಬಂದ್ ಸಮಂಜಸವಲ್ಲ. ಇದರಿಂದಾಗಿ ವ್ಯಾಪಾರ ವಹಿವಾಟು ಮದುವೆ ಮುಂಜಿ ಹಬ್ಬ ಹರಿದಿನ ಗಳಿಗೆ ತೊಂದರೆಯಾಗಲಿದೆ. ಬೇರೊಂದು ದಿನ ಮಾಡಿ ಎಂದು ಹದಿನೈದನೇ ವಾರ್ಡ್ ಯುವ ಮುಖಂಡ ಜೆ.ಎಲ್.ಮಂಜುನಾಥ್ ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದರು.

ಮಾ.19ರಂದು ಯುಗಾದಿ ಹಬ್ಬವಿದೆ. ಅದರ ಮರುದಿನ ವರುಷ ತೊಡಕು, ಆನಂತರ ಒಂದೆರಡು ದಿನಗಳಲ್ಲಿ ರಂಜಾನ್ ಹಬ್ಬ ಬರುತ್ತದೆ. ಇವರು ಮಾ.15ರಂದು ಬಂದ್ ಕರೆದಿರುವುದರಿಂದ ಯುಗಾದಿ ಹಬ್ಬ, ವರ್ಷ ತೊಡಕು ಮತ್ತು ರಂಜಾನ್ ಹಬ್ಬ ಆಚರಣೆ ಮಾಡುವವರಿಗೆ, ಹಬ್ಬದ ಸಾಮಗ್ರಿ ಖರೀದಿಸುವವರಿಗೆ, ಹೊಸಬಟ್ಟೆ ಮತ್ತು ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲು, ಮದುವೆ ಇತ್ಯಾದಿ ಶುಭ ಸಮಾರಂಭಗಳಲ್ಲಿ ಭಾಗಿ ಯಾಗುವವರಿಗೆ, ಭಾನುವಾರದ ವ್ಯಾಪಾರ ನಂಬಿ ಬದುಕುವವರಿಗೆ ತುಂಬಾ ತೊಂದರೆ ಆಗಲಿದೆ ಎಂದರು.

ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆ ಎಂದರೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ, ಇಟ್ಟಿಗೆ ಫ್ಯಾಕ್ಟರಿ., ಕ್ರರ‍್ಸ್, ಕೋಳಿಸಾಕಾಣಿಕೆ ಕೇಂದ್ರಗಳಲ್ಲಿ ಕೆಲಸ ಮಾಡುವ ಈಶಾನ್ಯ ರಾಜ್ಯಗಳ ಕಾರ್ಮಿಕರಿಗೆ ಭಾನುವಾರ ಒಂದೇ ದಿನ ಖರೀದಿಗೆ ದೊರೆಯುವ ದಿನವಾಗಿದೆ. ಇದೇ ದಿನ ಬಂದ್ ಮಾಡಿದರೆ ಅವರನ್ನು ನಂಬಿ ವ್ಯಾಪಾರ ನಡೆಸುವ ವರ್ತಕರಿಗೆ, ವ್ಯಾಪಾರಕ್ಕೆ ಬರುವ ಕಾರ್ಮಿಕರಿಗೆ ತುಂಬಾ ತೊಂದರೆಯಾಗಲಿದೆ.

ಇದನ್ನೂ ಓದಿ: Chikkaballapur News: ಆಶ್ರಯ ಯೋಜನೆಯಡಿ ಅರ್ಹ ನಿವೇಶನ ರಹಿತರೆ ಆಯ್ಕೆ ಆಗಬೇಕು: ಜಿ.ಪ್ರಭು ಸೂಚನೆ

ಮೇಲಾಗಿ ಭಾನುವಾರ ಬಂದ್ ಮಾಡುವುದರಿಂದ ಯಾವ ಸರಕಾರಿ ಕಚೇರಿಗಳು ತೆರೆಯದ ಕಾರಣ, ಅಧಿಕಾರಿಗಳು ಲಭ್ಯವಿಲ್ಲದ ಕಾರಣ ನಯಾಪೈಸೆ ಪ್ರಯೋಜನ ಆಗುವುದಿಲ್ಲ. ಸಂದೀಪ್‌ರೆಡ್ಡಿ ಮತ್ತು ತಂಡ ಯಾರ ಮಾತು ಕೇಳಿ ಹೀಗೆ ಮಾಡಿದ್ದಾರೋ ಗೊತ್ತಿಲ್ಲ, ದಯ ವಿಟ್ಟು ಬೇರೆ ಸೋಮವಾರದಿಂದ ಶನಿವಾರದ ತನಕ ಹಬ್ಬ ಮುಗಿದ ಮೇಲೆ ಬಂದ್ ನಡೆಸಿದರೆ ಒಳ್ಳೆಯದು ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರದ ಇತಿಹಾಸದಲ್ಲಿ ಭಾನುವಾರದ ದಿನ ಎಂದೂ ಕೂಡ ಬಂದ್ ನಡೆದಿಲ್ಲ.  ಇದೆ ಮೊದಲ ಬಾರಿ ನಡೆಯುತ್ತಿದೆ, ಭಾನುವಾರ ಬಂದ್ ಮಾಡಿದ್ದಾರೆ ಸಮಾಜದ ಎಲ್ಲಾ ವರ್ಗಗಳ ಜನತೆಗೆ ತೀವ್ರ ತೊಂದರೆ ಆಗುತ್ತದೆ. ಆದ ಕಾರಣ ಬಂದ್ ದಿನಾಂಕವನ್ನು ಮುಂದೂಡುವಂತೆ ನಾನು ಈ ಪತ್ರಿಕಾಗೋಷ್ಠಿ ಮುಖಾಂತರ ಮನವಿ ಮಾಡುತ್ತೇನೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಗೆ ಪರಿಶುದ್ಧವಾದ ಕೃಷ್ಣಾ ನದಿ ನೀರನ್ನು ಹರಿಸಬಹುದು. ಹಿಂದೂ ಪುರದ ತನಕ ಬಂದಿರುವ ನೀರನ್ನು ಜಿಲ್ಲೆಗೆ ಹರಿಸಲು ಸಂದೀಪ್‌ರೆಡ್ಡಿ ನೇತೃತ್ವ ವಹಿಸಿದರೆ ನಾವು ಕೂಡ ಬೆಂಬಲ ನೀಡಲು ಸಿದ್ದ. ಸರ್ಕಾರವನ್ನು ನಂಬಿಕೊಳ್ಳದೆ ಜಿಲ್ಲೆಯ ಜನರ ಸಹಕಾರದಿಂದಲೇ ಈ ಕೆಲಸ ಮಾಡಬಹುದು.ಅಂಗಡಿ ಮುಂಗಟ್ಟೆ ಸೇರಿ ಎಲ್ಲಾ ನಾಗರೀಕ ರಿಂದಳು ಹಣ ಪಡೆದು ಈ ಕೆಲಸ ಮಾಡಬಹುದು. ನೀವು ಎಷ್ಟೇ ಬಂದ್ ಮಾಡಿದರೂ ಸರಕಾರದ ಬಳಿ ಹಣವಿಲ್ಲ, 3ನೇ ಹಂತದ ಶುದ್ಧೀಕರಣ ಮಾಡುವುದಿಲ್ಲ. ಸರಕಾರಕ್ಕೆ ಮನಸ್ಸಿದ್ದಿದ್ದರ ಬಜೆಟ್‌ನಲ್ಲಿಯೇ ಘೋಷಣೆ ಮಾಡುತ್ತಿದ್ದರು ಎಂದರು.

*
ಹೆಚ್.ಎನ್ ವ್ಯಾಲಿ ನೀರು ತಂದು ಜಿಲ್ಲೆಯೆ ಕೆರೆಗಳಿಗೆ ಬಿಟ್ಟ ಪುಣ್ಯಾತ್ಮರು ಈ ಊರಿನಲ್ಲಿ ವಾಸಿಸುತ್ತಿಲ್ಲ, ಇಲ್ಲಿನ ನೀರು ಬಳಸಲ್ಲ, ತರಕಾರಿ ತಿನ್ನಲ್ಲ, ಈ ನೀರಿನಿಂದ ಅಡಿಗೆ ಮಾಡುತ್ತಿಲ್ಲ, ಈ ನೀರಿನಿಂದ ಸ್ನಾನ ಮಾಡುತ್ತಿಲ್ಲ ಅಂತ ಪುಣ್ಯಾತ್ಮರು ಬೆಂಗಳೂರಿನಲ್ಲಿ ಇದ್ದು ಬಿಸ್ಲೇರಿ ನೀರನ್ನು ಹಾಗೂ ಪರಿಶುದ್ಧವಾದ ನೀರನ್ನು ಪಡೆದುಕೊಂಡಿದ್ದಾರೆ ಅವರಿಗೆ ಇಲ್ಲಿನವರ ಕಷ್ಟ ತಿಳಿಯುತ್ತಿಲ್ಲ. ಈಗ ಬಂದ್‌ಗೆ ಕರೆ ನೀಡಿದವರೂ ಕೂಡ ಹೀಗೇ ಮಾಡು ತ್ತಿದ್ದಾರೆ ಆದರೂ ಆರೋಗ್ಯ ಕೆಡುತ್ತಿದೆ ಎಂದು ಅಬ್ಬರಿಸುತ್ತಿದ್ದಾರೆ.ಈ ಸಮಸ್ಯೆ ಗೊತ್ತಿರುವ ಸ್ಥಳೀಯರು ನಾಯಕರಾಗಿದ್ದರೂ ಹೋರಾಟಕ್ಕೆ ಕರೆ ನೀಡುತ್ತಿಲ್ಲ ಎಂದು 15ನೇ ವಾಡ್ ನಿವಾಸಿ ಜೆ.ಎಲ್.ಮಂಜುನಾಥ್ ವ್ಯಂಗ್ಯವಾಡಿದರು.