ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಆರೋಗ್ಯ ವಿಚಾರಣೆ ನೆಪದಲ್ಲಿ ಜೆಡಿಎಸ್ ಮುಖಂಡರ ಭೇಟಿ ಸಮಾಲೋಚನೆ

ಜೆಡಿಎಸ್ ಮುಖಂಡರ ಭೇಟಿಯ ಬಗ್ಗೆ ಮಾಧ್ಯಮದವರು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರನ್ನು ಮಾತಿ ಗೆಳೆದಾಗ ಅವರು ಹೇಳಿದ್ದಿಷ್ಟು.ನಾನು ಈಗ ಕಾಂಗ್ರೆಸ್‌ನಲ್ಲಿದ್ದೇನೆ. ಯಾವ ಪಕ್ಷದಲ್ಲಿರುತ್ತೇನೋ ಆ ಪಕ್ಷಕ್ಕೆ ನಿಷ್ಟೆ ತೋರುವುದು ನಾನು ಪಾಲಿಸಿಕೊಂಡು ಬಂದಿರುವ ತತ್ವ. ನಾನು ಜೆಡಿಎಸ್ ಸೇರುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರ ಮನೆಗೆ ಜೆಡಿಎಸ್ ಮುಖಂಡರು ಭೇಟಿ ನೀಡಿ ಸಮಾಲೋಚನೆ ನಡೆಸಿರುವ ಪೋಟೋ..

ಚಿಕ್ಕಬಳ್ಳಾಪುರ: 2023ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಟರು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಚುನಾವಣೆ ಖರ್ಚಿನ ನಿಧಿ ನೀಡಲಿಲ್ಲ, ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ( Former MLA KP Bachegowda)ರ ಮನೆಗೆ ದಿಢೀರ್ ಎಂದು ಬಂದ ಜೆ.ಕೆ. ಕೃಷ್ಣಾರೆಡ್ಡಿ ಮತ್ತು ತಂಡ ಆರೋಗ್ಯ ವಿಚಾರಿಸಿರುವುದು ಹಲವು ರೀತಿಯ ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಹೌದು ನಗರ ಹೊರವಲಯ ದೊಡ್ಡ ಮರಳಿ ಸಮೀಪದ ಕೆ.ಪಿ.ಬಚ್ಚೇಗೌಡರ ಮನೆಗೆ ಗುರುವಾರ ರಾತ್ರಿ ದಿಢೀರ್ ಎಂದು ಭೇಟಿ ನೀಡಿರುವ ಚಿಂತಾಮಣಿಯ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಗೌರಿಬಿದನೂರಿನ ನರಸಿಂಹಮೂರ್ತಿ ಶಾಂತಮೂರ್ತಿ ಮತ್ತು ಇತರರು ಆರೋಗ್ಯ ವಿಚಾರಿಸುವ ಕೆಲಸ ಮಾಡಿದ್ದಾರೆ.

ಈ ಮೂಲಕ ಜೆಡಿಎಸ್ ವರಿಷ್ಟರು ಮರಳಿ ಮನೆಗೆ ಸೇರುವಂತೆ ಮನವೊಲಿಸುವ ಜವಾಬ್ದಾರಿಯನ್ನು ಜೆ.ಕೆ.ಕೃಷ್ಣಾರೆಡ್ಡಿ ಅವರ ಹೆಗಲಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ:Chikkaballapur News: ಬೆಳೆ ವಿಮಾ ಯೋಜನೆ ನೋಂದಣಿಗೆ ಒತ್ತು: ಜಿಲ್ಲಾಧಿಕಾರಿ ಜಿ.ಪ್ರಭು

ಜೆಡಿಎಸ್ ಮುಖಂಡರ ಭೇಟಿಯ ಬಗ್ಗೆ ಮಾಧ್ಯಮದವರು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರನ್ನು ಮಾತಿಗೆಳೆದಾಗ ಅವರು ಹೇಳಿದ್ದಿಷ್ಟು.ನಾನು ಈಗ ಕಾಂಗ್ರೆಸ್‌ನಲ್ಲಿದ್ದೇನೆ. ಯಾವ ಪಕ್ಷದಲ್ಲಿರುತ್ತೇನೋ ಆ ಪಕ್ಷಕ್ಕೆ ನಿಷ್ಟೆ ತೋರುವುದು ನಾನು ಪಾಲಿಸಿಕೊಂಡು ಬಂದಿರುವ ತತ್ವ. ನಾನು ಜೆಡಿಎಸ್ ಸೇರುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆ.ಕೆ. ಕೃಷ್ಣಾರೆಡ್ಡಿ ಬಚ್ಚೇಗೌಡರು ಜೆಡಿಎಸ್ ಕುಟುಂಬದ ಹಿರಿಯ ನಾಯಕರಾಗಿದ್ದವರು.ಅವರಿಗೆ ಆರೋಗ್ಯ ಹದಗೆಟ್ಟಿರುವುದರಿಂದ ವಿಚಾರಿಸಿಕೊಂಡು ಹೋಗಲು ಬಂದಿದ್ದು ನಿಜ.ಈ ವೇಳೆ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದೇವೆ.ರಾಜಕಾರಣದಲ್ಲಿ ಯಾರೂ ಶಾಶ್ವತ ಶತೃಗಳಾಗಲಿ ಮಿತ್ರರಾಗಲಿ ಇರುವುದಿಲ್ಲ.ಅವರು ಮರಳಿ ಮನೆಗೆ ಬಂದಲ್ಲಿ ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ ಬಚ್ಚೇಗೌಡರು ಪಕ್ಷಕ್ಕೆ ಮರಳಿ, ಬರುವುದು ಬಿಡುವುದು ವರಿಷ್ಟರ ತೀರ್ಮಾನ.ಈ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ.ಅವರ ಆರೋಗ್ಯ ವಿಚಾರಿಸಲು ಬಂದಿದ್ದೆವು. ವಿಚಾರಿಸಿ ಲೋಕಾಭಿರಾಮವಾಗಿ ಮಾತಾಡಿದ್ದೇವೆ ಅಷ್ಟೇ ಎಂದರು.

ಒಟ್ಟಾರೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರಿಲ್ಲದೆ ಸೊರಗಿರುವ ಜೆಡಿಎಸ್‌ಗೆ ಜೀವಕಳೆ ತರಲು ಯೋಜನೆ ರೂಪಿಸಿರುವ ವರಿಷ್ಟರು ಜೆ.ಕೆ.ಮೂಲಕ ಸಂಧಾನಕ್ಕೆ ಮುಂದಾಗಿರಬಹುದೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.ಇದು ನಿಜವೇ ಆಗಿದ್ದಲ್ಲಿ 202ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮರ್ಮಾಘಾತ ಆಗುವುದು ಖಚಿತ ಎಂಬುದು ರಾಜಕೀಯ ಪಡಸಾಲೆಯ ಮಾತಾಗಿದೆ.

ಈ ವೇಳೆ ಜೆ.ಕೆ. ಕೃಷ್ಣಾರೆಡ್ಡಿ, ಗೌರಿಬಿದನೂರು ನರಸಿಂಹಮೂರ್ತಿ,ಚಿಕ್ಕಬಳ್ಳಾಪುರದ ಶಾಂತ ಮೂರ್ತಿ, ಸ್ಟುಡಿಯೋ ಮಂಜುನಾಥ್, ವೆಂಕಟರಾಮು, ಮಂಚೇನಹಳ್ಳಿ ತಾಲೂಕು ಅಧ್ಯಕ್ಷ ಪ್ರಕಾಶ್‌ರೆಡ್ಡಿ, ಮಂಜುನಾಥರೆಡ್ಡಿ, ಶ್ರೀನಿವಾಸ್‌ಗಾಂಧಿ ಇತರರು ಇದ್ದರು.