ಗೌರಿಬಿದನೂರು: ತಾಲೂಕಿನ ಕಾದಲವೇಣಿ ಗ್ರಾಮ ಪಂಚಾಯತಿಯಲ್ಲಿ ಉಪಾಧ್ಯಕ್ಷೆ ಕವಿತಾ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ,ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ , ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರ ಬೆಂಬಲಿಗ ಗೋಪಾಲ್ ಅವರು ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕಾದಲವೇಣಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕವಿತಾ ಅವರ ರಾಜೀನಾಮೆಯಿಂದಾಗಿ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು.
ಒಟ್ಟು ಹದಿನಾಲ್ಕ ಮಂದಿ ಸದಸ್ಯರ ಬಲಹೊಂದಿರುವ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸ್ಥಾನಕ್ಕೆ ಶಾಸಕರ ಬಣದ ಮರಳೂರು ಗೋಪಾಲ್, ಶಾಸಕರ ಸೂಚನೆಯಂತೆ ನಾಮಪತ್ರವನ್ನು ಸಲ್ಲಿಸಿದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಉಪಾಧ್ಯಕ್ಷ ಸ್ಥಾನಕ್ಕೆ ಗೋಪಾಲ್ ಹೊರತುಪಡಿಸಿ ಮತ್ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ, ಚುನಾವಣಾಧಿಕಾರಿ ತಹಶಿಲ್ದಾರ್ ಅರವಿಂದ್, ಗೋಪಾಲ್ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಫಲಿತಾಂಶ ಹೊರ ಬೀಳುತ್ತಿದ್ದಂತೆ ಮರಳೂರು ಗೋಪಾಲ್ ಅವರ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗರತ್ನಮ್ಮ, ಗ್ರಾ.ಪಂ ಸದಸ್ಯರಾದ ವೇಣುಗೋಪಾಲ ರೆಡ್ಡಿ, ಪುಷ್ಪ, ಅಭಿಲಾಷ, ಗಂಗಾಧರಪ್ಪ, ಗಂಗಮ್ಮ, ಮುಖಂಡರಾದ ಲಕ್ಷ್ಮಣ್ ರಾವ್, ಬಾಲಕೃಷ್ಣ, ಜಿಎಲ್ ಅಶ್ವತ್ಥನಾರಾಯಣ್, ಲಿಂಗಪ್ಪ , ಅಶೋಕ್, ಶ್ರೀನಾಥ್, ಮಹೇಂದ್ರ, ದಿಲೀಪ್, ಧನರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.