ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA Pradeep Eshwar: ಲೋಕಕ್ಕೆ ಆಧ್ಯಾತ್ಮಿಕ ಮುಕ್ತಿಮಾರ್ಗ ತೋರಿದ ಶ್ರೇಷ್ಠ ಸಂತ ಕಾಲಜ್ಞಾನಿ ಕೈವಾರ ತಾತಯ್ಯ : ಶಾಸಕ ಪ್ರದೀಪ್ ಈಶ್ವರ್ ಬಣ್ಣನೆ

ಜೀವನದಲ್ಲಿ ಶಿಕ್ಷಣಕ್ಕಿಂತ ದೊಡ್ಡದು ಯಾವುದು ಇಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಿಗೆ ಸಾಧಕರ ಬಗ್ಗೆ ತಿಳಿಸಿಕೊಡುವುದು ಬಹಳ ಮುಖ್ಯ. ಕೈವಾರ ತಾತಯ್ಯ ಅವರು ಸಮಾಜಕ್ಕೆ ನೀಡಿದ ಕೊಡುಗೆ, ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿ. ಕೈವಾರ ತಾತಯ್ಯ ಅವರ ಆದರ್ಶದ ಹಾದಿಯಲ್ಲಿ ನಾವು ನಡೆಯಬೇಕು. ತಾತಯ್ಯ ಅವರ ಬದುಕು ಆದರ್ಶಗಳು ನಮ್ಮ ಜೀವನಕ್ಕೆ ಸ್ಫೂರ್ತಿಯಾಗಬೇಕು

ಜಗತ್ತಿಗೆ ಆಧ್ಯಾತ್ಮಿಕತೆಯ ಮೂಲಕ ಮುಕ್ತಿ ಮಾರ್ಗ ತೋರಿದ ಶ್ರೇಷ್ಠ ಸಂತ ಕಾಲಜ್ಞಾನಿ ಶ್ರೀ ಯೋಗಿನಾರೇಯಣ ಯತೀಂದ್ರರಾಗಿದ್ದಾರೆ. ಕೈವಾರ ತಾತಯ್ಯ ಅವರ ಆದರ್ಶ ತತ್ವಸಿದ್ಧಾಂತಗಳು ಸದಾ ಕಾಲ ಅನುಕರಣೀಯ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಗೌರಿಬಿದನೂರು: ಜಗತ್ತಿಗೆ ಆಧ್ಯಾತ್ಮಿಕತೆಯ ಮೂಲಕ ಮುಕ್ತಿ ಮಾರ್ಗ ತೋರಿದ ಶ್ರೇಷ್ಠ ಸಂತ ಕಾಲಜ್ಞಾನಿ ಶ್ರೀ ಯೋಗಿನಾರೇಯಣ ಯತೀಂದ್ರರಾಗಿದ್ದಾರೆ. ಕೈವಾರ ತಾತಯ್ಯ ಅವರ ಆದರ್ಶ ತತ್ವಸಿದ್ಧಾಂತಗಳು ಸದಾ ಕಾಲ ಅನುಕರಣೀಯ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್(Chikkaballapur MLA Pradeep Eshwar)ಹೇಳಿದರು.

ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿರುವ ಡಾ. ಹೆಚ್. ನರಸಿಂಹಯ್ಯ ಮತ್ತು ಡಾ. ಎಂ. ಎಸ್. ರಾಮಯ್ಯ ಸೇವಾಮಂದಿರ, ಬಲಿಜ ಭವನ, ಕೈವಾರ ತಾತಯ್ಯ ದೇವಸ್ಥಾನದ ಅವರಣದಲ್ಲಿ ಬಲಿಜ ಸಮಾಜ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರ ಅವರ 300ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಶಿಕ್ಷಣಕ್ಕಿಂತ ದೊಡ್ಡದು ಯಾವುದು ಇಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಿಗೆ ಸಾಧಕರ ಬಗ್ಗೆ ತಿಳಿಸಿಕೊಡುವುದು ಬಹಳ ಮುಖ್ಯ. ಕೈವಾರ ತಾತಯ್ಯ ಅವರು ಸಮಾಜಕ್ಕೆ ನೀಡಿದ ಕೊಡುಗೆ, ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿ. ಕೈವಾರ ತಾತಯ್ಯ ಅವರ ಆದರ್ಶದ ಹಾದಿಯಲ್ಲಿ ನಾವು ನಡೆಯಬೇಕು. ತಾತಯ್ಯ ಅವರ ಬದುಕು ಆದರ್ಶಗಳು ನಮ್ಮ ಜೀವನಕ್ಕೆ ಸ್ಫೂರ್ತಿಯಾಗಬೇಕು ಎಂದರು.

ಇದನ್ನೂ ಓದಿ: MLA Pradeep Eshwar: ಶಾಸಕರಾಗಿ ನೀಡಿರುವ ಭರವಸೆಗಳನ್ನು ಈಡೇರಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ : ಸುಷ್ಮಾ ಶ್ರೀನಿವಾಸ್ ಆಗ್ರಹ

ಶಿಕ್ಷಣ ಎಂಬುದು ಬದಲಾವಣೆಯ ಗಾಳಿ ಸೂಸುವ ಸುಂದರ ಅವಕಾಶ. ಇಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಅವಶ್ಯವಾಗಿ ಬೇಕಾಗುತ್ತದೆ. ಶಿಕ್ಷಣ ಇಲ್ಲದಿದ್ದರೆ ಸಮಾಜ ಅರಿಯುವುದು, ಸುಧಾರಿಸುವುದು ಕಷ್ಟವಾಗುತ್ತದೆ. ಇಂದಿನ ಮಕ್ಕಳು ಓದಿನ ಸಂಸ್ಕೃತಿ ಯಿಂದ ದೂರವಾಗಿದ್ದು ಟಿ.ವಿ., ಮೊಬೈಲ್‌ಗಳಲ್ಲಿಯೇ ಹೆಚ್ಚಿನ ಕಾಲ ಕಳೆಯುತ್ತಾರೆ. ಇವುಗಳಿಂದ ಮಕ್ಕಳನ್ನು ಆದಷ್ಟು ದೂರವಿಡಬೇಕು. ಮಗುವಿನ ಶಿಕ್ಷಣದ ಕಡೆ ಪಾಲಕರು ಕಾಳಜಿ ವಹಿಸಬೇಕು. ಆಗಾಗ ಮಕ್ಕಳ ಶೈಕ್ಷಣಿಕ ಪ್ರಗತಿಯ ಅವಲೋಕನ ಮಾಡುತ್ತಿರಬೇಕು ಎಂದು ಪೋಷಕರಿಗೆ ತಿಳಿ ಹೇಳಿದರು.

‘ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸುವಲ್ಲಿ ಹಿಂದೆ ಬೀಳಬಾರದು. ಅದರಲ್ಲೂ ಹೆಣ್ಣುಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮಹತ್ವ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲಿಯೂ ಸಮರ್ಥವಾಗಿ ಹೆಜ್ಜೆಯೂರಿ ತಮ್ಮ ತನವನ್ನು ತೋರು ತ್ತಿರುವುದನ್ನು ಕಾಣುತ್ತಿದ್ದೇವೆ.ಹೀಗಾಗಿ ಮಕ್ಕಳಲ್ಲಿ ತಾರತಮ್ಯ ಮಾಡದೆ ಅವರಿಗೆ ಶಿಕ್ಷಣ ಒದಗಿಸಿ ಎಂದರು.

‘ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶ್ರದ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ಸಮಾಜಕ್ಕೆ ಸಹಾಯವಾಗ ದಿದ್ದರೂ, ತಮ್ಮ ಕುಟುಂಬಕ್ಕೆ ನೆರವಾಗಬೇಕು’ ಎಂದರು.

ಅತಿ ಶೀಘ್ರದಲ್ಲಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲಾಗುವುದು. ನಮ್ಮ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ 500 ಮಂದಿ ವಿದ್ಯಾರ್ಥಿ ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಉಚಿತ ತರಬೇತಿ ತರಗತಿಗಳನ್ನು ಪ್ರಾರಂಭಿಸು ತ್ತಿದ್ದೇವೆ ಎಂದು ತಿಳಿಸಿದರು.

ಸಮುದಾಯದ ಹಿತದೃಷ್ಟಿಯಿಂದ 30 ವರ್ಷಗಳ ಹಿಂದೆಯೇ ಬಲಿಜ ಸಮುದಾಯಕ್ಕೆ ನೀವೇಶನವನ್ನು ನೀಡಿದ ದಾನಿಗಳಿಗೆ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಮುದಾಯ ಮುಖಂಡರು, ಗ್ರಾಮಸ್ಥರು ಮತ್ತಿತರರು ಭಾಗವಹಿಸಿದ್ದರು.