ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕನ್ನಡ ಒಂದು ಭಾಷೆ ಮಾತ್ರವಲ್ಲ, ಅದು ನಮ್ಮ ಪಾದೇಶಿಕತೆಯ ಭಾವನೆ: ಡೀನ್ ಡಾ.ಎಂ.ಎಲ್.ಮಂಜುನಾಥ್

ಇತರೆ ಬಾಷೆಗಳ ಪ್ರಭಾವವಿದ್ದರೂ ನಾವು ಆ ಭಾಷೆಗಳನ್ನು ವಿರೋಧಿಸಬೇಕಾಗಿಲ್ಲ. ಭಾಷೆಗಳು ಬೇರೆಯಾದರೂ ನಮ್ಮೆಲ್ಲರ ಭಾವಗಳು ಒಂದೇ ಆಗಬೇಕು. ಕನ್ನಡದ ಸಹೋದರ ಭಾಷೆಗಳು ಮತ್ತುಸಂಸ್ಕೃತಿಗಳ ನಡುವೆ ಸಾಮರಸ್ಯ ಇರಬೇಕು-ಸಂಘರ್ಷ ಬೇಡ ಎಂಬ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳು ಭಾಷಾ ಸಾಮರಸ್ಯಕ್ಕೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ಕನ್ನಡ ಒಂದು ಭಾಷೆ ಮಾತ್ರವಲ್ಲ, ಅದು ನಮ್ಮ ಪಾದೇಶಿಕತೆಯ ಭಾವನೆ

ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವವನ್ನು ಡಾ.ಕೋಡಿರಂಗಪ್ಪ ಉದ್ಘಾಟಿಸಿದರು -

Ashok Nayak
Ashok Nayak Nov 20, 2025 9:50 PM

ಚಿಕ್ಕಬಳ್ಳಾಪುರ: ನಾಡು-ನುಡಿ, ನೆಲ-ಜಲ, ಹಾಗೂ ಸಾಹಿತ್ಯ-ಸಂಸ್ಕೃತಿಗಳ ಪರಂಪರೆ ನಡೆದು ಬಂದ ದಾರಿಯನ್ನು ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆ ಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿ ಗೌರವಿಸು ವುದು ನಮ್ಮ ಕರ್ತವ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಒಂದು ಭಾಷೆ ಮಾತ್ರವಲ್ಲ, ಅದು ನಮ್ಮ ಪಾದೇಶಿಕತೆಯ ಭಾವನೆ ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಎಂ.ಎಲ್. ಮಂಜುನಾಥ್ ಹೇಳಿದರು. 

ತಾಲ್ಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಿಂಡಿಮ-2025 ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯೋತ್ಸವವು ನಾಡ ಹಬ್ಬವಾಗಿದ್ದು ಕನ್ನಡಿಗರೆಲ್ಲರು ಸಂಭ್ರಮಿಸಬೇಕಾದ ಸಂದರ್ಭ.ಈ ಸಂಭ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರ ನಾಡು ನುಡಿಗಳ ಅಭಿವೃದ್ದಿಗಾಗಿ ಕನ್ನಡವನ್ನು ಕಟ್ಟಿ ಕೊಳ್ಳಬೇಕು ಎಂದರು.

ಇತರೆ ಬಾಷೆಗಳ ಪ್ರಭಾವವಿದ್ದರೂ ನಾವು ಆ ಭಾಷೆಗಳನ್ನು ವಿರೋಧಿಸಬೇಕಾಗಿಲ್ಲ. ಭಾಷೆಗಳು ಬೇರೆಯಾದರೂ ನಮ್ಮೆಲ್ಲರ ಭಾವಗಳು ಒಂದೇ ಆಗಬೇಕು. ಕನ್ನಡದ ಸಹೋದರ ಬಾಷೆಗಳು ಮತ್ತುಸಂಸ್ಕೃತಿಗಳ ನಡುವೆ ಸಾಮರಸ್ಯ ಇರಬೇಕು-ಸಂಘರ್ಷ ಬೇಡ ಎಂಬ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳು ಭಾಷಾ ಸಾಮರಸ್ಯಕ್ಕೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: Child Marriage Eradication: ಬಾಲ್ಯ ವಿವಾಹ ಮುಕ್ತ ಗ್ರಾ.ಪಂ.ಗಳಿಗೆ 25 ಸಾವಿರ ರೂ. ಬಹುಮಾನ ಘೋಷಿಸಿದ ಸರ್ಕಾರ

ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಪ್ರಾಚೀನ ಬಾಷೆ ನಮ್ಮದು. ಆದರೆ ಇಂದು ನಾವೆಲ್ಲರೂ ನಮ್ಮ ಮಕ್ಕಳನ್ನು ಆಂಗ್ಲಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಖಾಸಗಿ ಶಾಲೆಗಳಿಗೆ ಸೇರಿಸುತ್ತೇವೆಯೇ ಹೊರತು ನಾವು ಕಲಿತ ಸರ್ಕಾರಿ ಶಾಲೆಗಳಿಗೆ ಸೇರಿಸಲ್ಲ. ಆದ್ದರಿಂದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಅಂದರೆ ಕೆಟ್ಟದೃಷ್ಟಿಯಿಂದಲೆ ನೋಡುವ ಜನ ಇದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗೋ ಚಿಕಿತ್ಸೆ ಬೇರೆಲ್ಲೂ ಸಿಗೊಲ್ಲ ಅನ್ನುವುದಕ್ಕೆ ನ್ಮ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯೇ ಉದಾಹರಣೆಯಾಗಿದೆ ಎಂದರು. 

ಕಾರ್ಯಕ್ರಮ ಉಧ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆ ಕನ್ನಡ ಅಂತಹ ಕನ್ನಡ ಭಾಷೆಯ ಸೊಗಡನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಮತ್ತು ಪಸರಿಸುವ ಕಾರ್ಯವೇ ಕನ್ನಡ ರಾಜ್ಯೋತ್ಸವ ವಾಗಿದೆ. ಕನ್ನಡಿಗರು ನಿರಭಿಮಾನಿಗಳಾಗದೆ, ಭಾಷಾಭಿಮಾನಿಗಳಾಗಬೇಕಿದೆ.

ತಾಯಿ ಭಾಷೆಯನ್ನು ಉಳಿಸುವುದು ಕನ್ನಡಿಗರ ಕರ್ತವ್ಯವಾಗಬೇಕು.ನಮ್ಮ ಭಾಷೆಯನ್ನು ಮರೆತರೆ ನಮ್ಮ ಸಂಸ್ಕೃತಿಯ ನ್ನು ಮರೆತಂತೆ.ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿ ಮಡಿದ ಮಹನೀಯರ ಆಶಯಗಳನ್ನು ಜೀವಂತವಾಗಿ ಇಡಬೇಕಾಗಿರುವುದು ಕನ್ನಡಿಗರ ಕರ್ತವ್ಯ.ಹಲವಾರು ಪ್ರಾಂತ್ಯಗಳಾಗಿ ಹಂಚಿಹೋಗಿದ್ದ ಕರುನಾಡನ್ನು ಏಕೀಕರಣ ಮಾಡಿಕೊಟ್ಟ ಏಕೀಕರಣ ಪಿತಾಮಹ ಅಲೂರು ವೆಂಕಟರಾಯರ ಆದಿಯಾಗಿ ಅನೇಕ ಮಹನೀಯರ ಶ್ರಮದಿಂದ ಈ ನಾಡು ಭಾರತದ ಭೂಪಟದಲ್ಲಿ ಮುಂಚೂಣಿಯಲ್ಲಿದೆ. ಭಾಷೆಯನ್ನು ಬಳಸಿದರೆ ಭಾಷೆಯನ್ನು ಉಳಿಸಿದಂತೆ.

ಅನ್ಯಭಾಷೆಗಳೊಂದಿಗೆ ಸೌಹಾರ್ದವಾಗಿ ಬದುಕುತ್ತಿರುವ ಕನ್ನಡಿಗರ ಮನೋಭಾವವನ್ನು ದೌರ್ಬಲ್ಯ ಎಂದು ಭಾವಿಸದೆ ಜೀವನ ನಿರ್ವಹಣೆಗಾಗಿ ಇಲ್ಲಿಗೆ, ಹೊರಗಡೆಯಿಂದ ಬಂದವರು ಕನ್ನಡ ಭಾಷೆಯನ್ನು ಕಲಿತು, ಗೌರವಿಸುವುದನ್ನು ಕಲಿಯಬೇಕಿದೆ. ಆಗ ಮಾತ್ರ ಸೌಹಾರ್ದತೆ ಇರಲು ಸಾಧ್ಯ.ಮಾತೃಭಾಷೆಯಲ್ಲಿ ಆಳವಾದ ಸಾಮರ್ಥ್ಯ ಗಳಿಕೆ, ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನದಿಂದ ವ್ಯಕ್ತಿ ಮರುಹುಟ್ಟು ಪಡೆಯುತ್ತಾ ಪರಿಪೂರ್ಣ ವ್ಯಕ್ತಿತ್ವ ಮೂಡಿಬರುವುದರಿಂದ ಶಾಲಾ ಹಂತದಲ್ಲಿ ಮಾತೃ ಭಾಷಾ ಕಲಿಕೆ ಹಾಗೂ ಸಾಹಿತ್ಯ ಅಧ್ಯಯನಕ್ಕೆ ವಿಶೇಷ ಒತ್ತು ನೀಡಬೇಕೆಂದರು. 

ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥರಾದ ಡಾ.ಎಂ.ಆರ್.ಅನಿತ, ಡಾ.ಸುರೇಶ್ ನಾಯಕ್, ಡಾ.ಆಶಾ, ಡಾ.ಸಿ.ಎಸ್.ನಾಗಲಕ್ಷ್ಮಿ,ಡಾ.ಮಂಜುಳ,ಡಾ.ಗೀತಾ, ಡಾ.ಚೈತ್ರರಾವ್, ಡಾ.ಶಂಕರಪ್ಪ, ಡಾ.ಪುಷ್ಪ, ಡಾ.ಅನಿತಾ ಲಕ್ಷ್ಮಿ, ಡಾ.ಭಾರ್ಗವಿ, ಡಾ.ಜ್ಯೋತಿ, ಡಾ.ಸಂದೀಪ್, ಕಾಲೇಜಿನ ಭೋಧಕ ಮತ್ತು ಬೋಧಕೇತರ ಸಿಬ್ಬಂಧಿ ಹಾಗೂ ಮೆಡಿಕಲ್ ವಿದ್ಯಾರ್ಥಿಗಳು ಇದ್ದರು.