ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ನ.29ರಂದು ಪ್ರಗತಿಪರ ಹೋರಾಟಗಾರರ ಸಂಘದಿಂದ ಕನ್ನಡ ರಾಜ್ಯೋತ್ಸವ...

ಇದೇ ತಿಂಗಳ ನವಂಬರ್ ೧ ರಂದು ಕನ್ನಡಪರ ಸಂಘಟನೆಗಳು ಮಾತ್ರ ಕನ್ನಡ ರಾಜ್ಯೋತ್ಸವ ಮಾಡಿದ್ದು ರೈತಪರ ಹಾಗೂ ಬೇರೆ ಸಂಘಟನೆಗಳನ್ನು ಒಗ್ಗೂಡಿಸಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಲ್ಲ. ಈಗ ನಾವು ಇದೇ ಪ್ರಥಮ ಬಾರಿಗೆ ಪ್ರಗತಿಪರ ಹೋರಾಟಗಾರರ ಸಂಘ ಸಂಘಟಿಸಿ ಕನ್ನಡ ಪರ ಹೋರಾಟಗಾರರ ಎಲ್ಲಾ ಕಾರ್ಯಕ್ರಮಗಳು ಇದೇ ಸಂಘದಿಂದ ಮಾಡಲಾಗುವುದು

ಪ್ರಗತಿಪರ ಹೋರಾಟಗಾರರ ಸಂಘದಿಂದ ಕನ್ನಡ ರಾಜ್ಯೋತ್ಸವ

-

Ashok Nayak
Ashok Nayak Nov 26, 2025 11:55 PM

ಶಿಡ್ಲಘಟ್ಟ : ತಾಲ್ಲೂಕು ಪ್ರಗತಿಪರ ಹೋರಾಟಗಾರರ ಸಂಘದಿಂದ ನ.29ರಂದು ನಗರದ ಕೋಟೆ ವೃತ್ತದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವಿ.ನಾಗರಾಜ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇದೇ ತಿಂಗಳ ನವಂಬರ್ ೧ ರಂದು ಕನ್ನಡಪರ ಸಂಘಟನೆಗಳು ಮಾತ್ರ ಕನ್ನಡ ರಾಜ್ಯೋತ್ಸವ ಮಾಡಿದ್ದು ರೈತಪರ ಹಾಗೂ ಬೇರೆ ಸಂಘಟನೆಗಳನ್ನು ಒಗ್ಗೂಡಿಸಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಲ್ಲ. ಈಗ ನಾವು ಇದೇ ಪ್ರಥಮ ಬಾರಿಗೆ ಪ್ರಗತಿಪರ ಹೋರಾಟಗಾರರ ಸಂಘ ಸಂಘಟಿಸಿ ಕನ್ನಡ ಪರ ಹೋರಾಟಗಾರರ ಎಲ್ಲಾ ಕಾರ್ಯಕ್ರಮಗಳು ಇದೇ ಸಂಘದಿಂದ ಮಾಡಲಾಗುವುದು ಎಂದರು.

ವೇದಿಕೆ ಕಾರ್ಯಕ್ರಮ ಸಂಜೆ 5 ಗಂಟೆಗೆ 6:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕ್ರಮ ದಲ್ಲಿ ಜೂನಿಯರ್ ವಿಷ್ಣುವರ್ಧನ್ ಹಾಗೂ ಜೂನಿಯರ್ ರವಿಚಂದ್ರನ್ ಭಾಗವಹಿಸ ಲಿದ್ದಾರೆ.

ಇದನ್ನೂ ಓದಿ: Shidlaghatta News: ಶಿಡ್ಲಘಟ್ಟಕ್ಕೆ ನ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

ಶಾಸಕರಾದ ಬಿಎನ್ ರವಿಕುಮಾರ್ ಅವರು,ಎಸ್ ಪಿ ಕುಶಾಲ್ ಜೋಕ್ಸ್, ಮುಖ್ಯ ಭಾಷಣ ಕಾರರಾಗಿ ಎಲ್ಐಸಿ ಅಭಿವೃದ್ಧಿ ಅಧಿಕಾರಿ ಎಸ್ಎನ್ ಅಮೃತ್ ಕುಮಾರ್ ಸೇರಿದಂತೆ ಇನ್ನೂ ಹಲವು ಗಣ್ಯರು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ಮುಖಂಡರ ಮನೆ ಸಂಘದ ಸದಸ್ಯರು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿದ್ದಿವೆ. ಪಕ್ಷಾತೀತವಾಗಿ ಕನ್ನಡ ಅಭಿಮಾನಿಗಳು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದ್ದರು.

ಸುದ್ದಿಗೋಷ್ಠಿಯಲ್ಲಿ ಸಂಘದವರು ಅಧ್ಯಕ್ಷ ಕೆ ಚನ್ನೇಗೌಡ, ಉಪಾಧ್ಯಕ್ಷ ಸಿಎಂ ಬೈರೇಗೌಡ, ಕಾರ್ಯದರ್ಶಿ ಎಸ್ ಎಂ ರವಿಪ್ರಕಾಶ್, ಮನೋಜ್ ಕುಮಾರ್,ಮುಸ್ತಾಕ್ ಅಹಮದ್ ಬಿ.ಮಧು ಲತಾ, ಪ್ರದೀಪ್, ಸುಬ್ರಮಣಿ ಎಸ್ಆರ್ ಮಂಜುನಾಥ್, ದ್ಯಾವಪ್ಪ, ಶ್ರೀನಿವಾಸ್ ಇದ್ದರು.