ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ನೆಲಗಡಲೆ ಮೂಟೆ ಕಳವು ಸಮಗ್ರ ತನಿಖೆಗೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಸಂಚಾಲಕ ಡಿ.ಟಿ.ಮುನಿಸ್ವಾಮಿ ಆಗ್ರಹ

ಕೃಷಿ ಇಲಾಖೆಯ ಅಸಮರ್ಥ ವಿಧಾನ ಹಾಗೂ ಶಾಮೀಲಿನಿಂದಾಗಿ ಯಾವುದೇ ಭಯವಿಲ್ಲದೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಕಾನೂನುಬಾಹಿರವಾಗಿ ಪಾತಪಾಳ್ಯದ ರೈತ ಸಂಪರ್ಕ ಕೇಂದ್ರದ ಗೋದಾ ಮಿಗೆ ನುಗ್ಗಿ ದೌರ್ಜನ್ಯ ದಿಂದ ನೆಲಗಡಲೆಯನ್ನು ದೋಚಿಕೊಂಡು ಹೋಗಿರುವುದು ತಾಲ್ಲೂಕಿನ ಆಡಳಿತ ಯಂತ್ರದ ದುಃಸ್ಥಿತಿಗೆ ಕನ್ನಡಿಯಾಗಿದೆ.

ನೆಲಗಡಲೆ ಮೂಟೆ ಕಳವು ಸಮಗ್ರ ತನಿಖೆಗೆ ಡಿ.ಟಿ.ಮುನಿಸ್ವಾಮಿ ಆಗ್ರಹ

Profile Ashok Nayak Jul 17, 2025 12:32 AM

ಬಾಗೇಪಲ್ಲಿ: ಕೃಷಿ ಇಲಾಖೆಯ ಎಲ್ಲಾ ಸೌಲಭ್ಯಗಳು, ಸಾಮಾನ್ಯ ಬಡವರಿಗೆ ಹಾಗೂ ಕಟ್ಟಕಡೆಯ ವ್ಯಕ್ತಿಗೆ ಸಿಗಬೇಕು ಎನ್ನುವುದು ಸರ್ಕಾರದ ಆಶಯ ಆದರೆ ಪಾತಪಾಳ್ಯ ರೈತರ ಸಂಪರ್ಕ ಕೇಂದ್ರದಲ್ಲಿ ದಿನಾಂಕ ಜು.10ರಂದು ಶಾಸಕರ ಅಣತಿಯಂತೆ ಕಾಂಗ್ರೆಸ್ ಮುಖಂಡರು ಮತ್ತು ನಾವೇನೂ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಬಿಜೆಪಿ ಮುಖಂಡರು ಯಾವುದೇ ಅಡ್ಡಿ ಆತಂಕ ಇಲ್ಲದೆ ಪಾತಪಾಳ್ಯ ರೈತರ ಸಂಪರ್ಕ ಕೇಂದ್ರದಲ್ಲಿ ನಲೆಗಡಲೆ ದೋಚಿರುವ ಘಟನೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಂಚಾಲಕ ಡಿ.ಟಿ.ಮುನಿಸ್ವಾಮಿ ಖಂಡಿಸುತ್ತೇವೆ ಎಂದು ಹೇಳಿದರು.

ಪಟ್ಟಣದ ಸುಂದರಯ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪ್ರಮುಖವಾಗಿ ಬಾಗೇಪಲ್ಲಿ ಗಡಿನಾಡಿನ ತಾಲೂಕು ಆಗಿದ್ದು ಕೇಂದ್ರ ಸರ್ಕಾರ ಎಣ್ಣೆಕಾಳುಗಳ ಬೆಳೆಗಳನ್ನು ಉತ್ತೇಜಿ ಸುವ ಸಲುವಾಗಿ ರಾಷ್ಟ್ರೀಯ ಆಹಾರ ಭದ್ರತಾ ವಿಶೇಷ ಯೋಜನೆ ಅಡಿ ಕೃಷಿ ಇಲಾಖೆಯಿಂದ ನೆಲಗಡಲೆಯನ್ನು 1250 ಎಕರೆ ಬಡ ರೈತರಿಗೆ ವಿತರಿಸಲು ಅವಕಾಶ ನೀಡಲಾಗಿತ್ತು. ಈ ನೆಲಗಡಲೆ ಬಿತ್ತನೆ ಚೀಲಗಳನ್ನು ಕಾನೂನಾತ್ಮಕವಾಗಿ ಸರ್ಕಾರದ ಸುತ್ತೋಲೆಯಂತೆ ಇಲಾಖೆ ಗುರುತಿಸಿರುವ ಹಳ್ಳಿಗಳ ನೈಜ ಫಲಾನುಭವಿ ರೈತರನ್ನು ಗುರುತಿಸಿ ಹಂಚಿಕೆ ಮಾಡಬೇಕಾಗಿತ್ತು. ಆದರೆ ಕೃಷಿ ಇಲಾಖೆಯ ಅಸಮರ್ಥ ವಿಧಾನ ಹಾಗೂ ಶಾಮೀಲಿನಿಂದಾಗಿ ಯಾವುದೇ ಭಯವಿಲ್ಲದೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಕಾನೂನುಬಾಹಿರವಾಗಿ ಪಾತಪಾಳ್ಯದ ರೈತ ಸಂಪರ್ಕ ಕೇಂದ್ರದ ಗೋದಾಮಿಗೆ ನುಗ್ಗಿ ದೌರ್ಜನ್ಯ ದಿಂದ ನೆಲಗಡಲೆಯನ್ನು ದೋಚಿಕೊಂಡು ಹೋಗಿರುವುದು ತಾಲ್ಲೂಕಿನ ಆಡಳಿತ ಯಂತ್ರದ ದುಃಸ್ಥಿತಿಗೆ ಕನ್ನಡಿಯಾಗಿದೆ.

ಇದನ್ನೂ ಓದಿ: Chikkaballapur Crime: ಬಡ್ಡಿ ಹಣ ಕೊಡದಿದ್ದಕ್ಕೆ ಪತಿ ಪತ್ನಿ ಮೇಲೆ ಹಲ್ಲೆ

ಪಾತಪಾಳ್ಯದ ರೈತ ಸಂಪರ್ಕ ಕೇಂದ್ರದಲ್ಲಿ ನಿಯಮ ಬಾಹಿರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಹಿಂಬಾಲಕರು ಕಡಲೆಕಾಯಿಯನ್ನು ದೋಚಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸುತ್ತದೆ. ಮಾತ್ರವಲ್ಲದೆ ಈ ಕಡಲೇಕಾಯಿಯನ್ನು ಅಕ್ರಮವಾಗಿ ದೋಚಿಕೊಂಡು ಹೋದ ಸಂದರ್ಭದಲ್ಲಿ ಮತ್ತು ನಂತರವೂ ಯಾವುದೇ ಕ್ರಮಕ್ಕೆ ಮುಂದಾಗದಿರುವ ಕೃಷಿ ಇಲಾಖೆ ಅಧಿಕಾರಿಗಳ ನಡೆ ಖಂಡನೀಯ. ತಪ್ಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸ ಬೇಕೆಂದು ಕೆ ಪಿ ಆರ್ ಎಸ್ ಆಗ್ರಹಿಸುತ್ತದೆ ಎಂದು ತಾಲ್ಲೂಕು ಸಂಚಾಲಕ ಡಿ.ಟಿ.ಮುನಿಸ್ವಾಮಿ ಆಗ್ರಹಿಸಿದ್ದಾರೆ.

ಜಿಲ್ಲಾ ಸಂಚಾಲಕ ಚನ್ನರಾಯಪ್ಪ ಮಾತನಾಡಿ, ತಾಲ್ಲೂಕಿನ ಪಾತಪಾಳ್ಯ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹಿಸಿದ್ದ ನೆಲಗಡಲೆ ಮೂಟೆಗಳನ್ನು ಏಕಾಏಕಿ ದಾಳಿ ಮಾಡಿ ಅಧಿಕಾರಿ ಗಳ ಸಮ್ಮುಖದಲ್ಲಿ ಮೂಟೆಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಇದರಿಂದ ಅರ್ಹ ಫಲಾನು ಭವಿ ರೈತರಿಗೆ ನೆಲಗಡಲೆ ಮೂಟೆಗಳು ಸಿಕ್ಕಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಕೂಡಲೇ ಅನಧಿಕೃತವಾಗಿ ನೆಲಗಡಲೆ ಮೂಟೆಗಳನ್ನು ಹೊತ್ತು ಸಾಗಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅರ್ಹ ರೈತ ಫಲಾನುಭವಿಗಳಿಗೆ ಅಗತ್ಯ ಇರುವಷ್ಟು ನೆಲಗಡಲೆ ಮೂಟೆ ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.