ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

K N Rajanna: ಕೆ.ಎನ್.ರಾಜಣ್ಣ ಅವರನ್ನು ಕೂಡಲೇ ಸಂಪುಟಕ್ಕೆ ಸೇರ್ಪಡೆ ಮಾಡಬೇಕು : ಆರ್.ಅಶೋಕ್ ಕುಮಾರ್ ಆಗ್ರಹ

ದೇವರಾಜ್ ಅರಸು ಎಂದೇ ಖ್ಯಾತಿ ಪಡೆದಿರುವ ಕೆ.ಎನ್ ರಾಜಣ್ಣ ಅವರ ಏಳಿಗೆ ಸಹಿಸದೆ ಸಂಪುಟ ದಿಂದ ವಜಾ ಮಾಡಿರೋದು ವಿಷಾದನೀಯ. ಇದು ಅಹಿಂದ ವರ್ಗ, ಹಿಂದುಳಿದ ವರ್ಗ ದಲಿತ ಸಮುದಾಯ ಗಳಿಗೆ ಮಾಡಿದ ಅವಮಾನ  ಆಗಿರುತ್ತದೆ. ಹೀಗಾಗಿಯೇ ಜಾತಿ ಮತ ಬೇಧವಿಲ್ಲದೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಕೆ.ಎನ್.ರಾಜಣ್ಣ ಅವರನ್ನು ಕೂಡಲೇ ಸಂಪುಟಕ್ಕೆ ಸೇರ್ಪಡೆ ಮಾಡಬೇಕು

ರಾಜಣ್ಣ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಬೇಕು, ಇಲ್ಲದಿದ್ದಲ್ಲಿ ಮುಂದಿನ ಅನಾಹುತಗಳಿಗೆ ಕಾಂಗ್ರೆಸ್ ಪಕ್ಷವೇ ಹೊಣೆಯಾಗಲಿದೆ ಎಂದು ಮುಖಂಡ ಆರ್.ಅಶೋಕ್ ಕುಮಾರ್ ನೇರ ಎಚ್ಚರಿಕೆ ನೀಡಿದರು. -

Ashok Nayak Ashok Nayak Aug 30, 2025 7:57 PM

ಗೌರಿಬಿದನೂರು: ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ, ಸಂಪುಟಕ್ಕೆ ಮರು ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಎಲ್ಲಾ ಜನಪರ ಸಂಘಟನೆಗಳು ಪ್ರತಿಭಟನೆ ಮೂಲಕ ಕಾಂಗ್ರೆಸ್ ಹೈಕಮಾಂಡ್ ನಡೆಯನ್ನು ಖಂಡಿಸುತ್ತವೆ. ಈಗಲಾದರೂ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಬೇಕು, ಇಲ್ಲದಿದ್ದಲ್ಲಿ ಮುಂದಿನ ಅನಾಹುತಗಳಿಗೆ ಪಕ್ಷವೇ ಹೊಣೆಯಾಗಲಿದೆ ಎಂದು ಮುಖಂಡ ಆರ್.ಅಶೋಕ್ ಕುಮಾರ್ ಎಚ್ಚರಿಕೆ ನೀಡಿದರು.

ನಗರದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಕೃಷ್ಣ ಭವನ ಹೋಟೆಲ್ ವೃತ್ತ ಮಾರ್ಗದಲ್ಲಿ ಗಾಂಧಿ ವೃತ್ತದಿಂದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದವರಿಗೂ ಹಮ್ಮಿಕೊಂಡಿದ್ದ ಪ್ರತಿಭಟನೆ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ: KN Rajanna Resigns: ಸಚಿವ ಕೆಎನ್‌ ರಾಜಣ್ಣ ದಿಢೀರ್‌ ರಾಜೀನಾಮೆ, ಹೈಕಮಾಂಡ್‌ ರಾಂಗ್‌ ಆಗಿದ್ದೇ ಕಾರಣ!

ದೇವರಾಜ್ ಅರಸು ಎಂದೇ ಖ್ಯಾತಿ ಪಡೆದಿರುವ ಕೆ.ಎನ್ ರಾಜಣ್ಣ ಅವರ ಏಳಿಗೆ ಸಹಿಸದೆ ಸಂಪುಟ ದಿಂದ ವಜಾ ಮಾಡಿರೋದು ವಿಷಾದನೀಯ. ಇದು ಅಹಿಂದ ವರ್ಗ, ಹಿಂದುಳಿದ ವರ್ಗ ದಲಿತ ಸಮುದಾಯಗಳಿಗೆ ಮಾಡಿದ ಅವಮಾನ  ಆಗಿರುತ್ತದೆ. ಹೀಗಾಗಿಯೇ ಜಾತಿ ಮತ ಬೇಧವಿಲ್ಲದೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಮನವಿ ಏನೆಂದರೆ ಮತ್ತೆ ಕೆ.ಎನ್ ರಾಜಣ್ಣ ಅವರನ್ನು  ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.

ಹಿರಿಯ ವಕೀಲ ಹಾಗೂ ದಲಿತ ಮುಖಂಡ ಎಚ್.ಎಲ್.ವೆಂಕಟೇಶ್ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ದಲಿತ ವರ್ಗಕ್ಕೆ ಸೇರಿರುವ ಕೆಲವೇ ಸಚಿವರಲ್ಲಿ ಕೆ.ಎನ್.ರಾಜಣ್ಣ ಕೂಡ ಒಬ್ಬರು. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರೋದು ಪ್ರಜಾಪ್ರಭುತ್ವದ ಕಗ್ಗೊಲೆಯಂತಿದೆ. ಮುಖ್ಯಮಂತ್ರಿಗಳು ಕ್ರಮ ವಹಿಸಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪ್ತಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಂಚೇನಹಳ್ಳಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮೇಗೌಡ, ರಾಜೇಂದ್ರ, ನಗರಸಭೆ ಸದಸ್ಯರಾದ ವೆಂಕಟರೆಡ್ಡಿ, ರೂಪ ಅನಂತರಾಜು, ಮಂಜುಳಾ ರಾಮಾಂಜಿ,  ಗೋಪಾಲ್, ಗೋಪಿನಾಥ್, ಚಂದ್ರಮೋಹನ್, ಮುಖಂಡರಾದ ಕೊಡಿಗೇಹಳ್ಳಿ ರಂಗನಾಥ, ಅಲ್ಲಂಪಲ್ಲಿ ವೇಣು , ಕಸಾಪ ಮಾಜಿ ಅಧ್ಯಕ್ಷ ರವೀಂದ್ರ, ನಾಗರಾಜಪ್ಪ, ವಿಕ್ರಮ್, ನಾರಾಯಣ ಸ್ವಾಮಿ, ಎಸ್ ವಿ ಟಿ ಲೋಕೇಶ್, ಬೈಚಾಪುರ ಗಂಗಾಧರಪ್ಪ, ಎನ್ ಆರ್ ಮಂಜುನಾಥ್, ನಿರಂಜನ್, ನಿವೃತ್ತ ಪೊಲೀಸ್ ಅಧಿಕಾರಿ ಮೂರ್ತಿ, ದಲಿತ ಮುಖಂಡರಾದ , ಮಲ್ಲಸಂದ್ರ ಗಂಗಾಧರಪ್ಪ, ಮುನಿಯಪ್ಪ, ನಂಜುಂಡಪ್ಪ, ದಲಿತ ಒಕ್ಕೂಟದ ಅಧ್ಯಕ್ಷ ಸತ್ತಿ, ಜಯಲಕ್ಷ್ಮಮ್ಮ , ಲಕ್ಷ್ಮೀ,ಹಾಗೂ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು, ಹಿಂದುಳಿದ ವರ್ಗಗಳ ಪದಾಧಿಕಾರಿಗಳು, ಅಲ್ಪಸಂಖ್ಯಾತರ ಸಂಘಟನೆಗಳ ಪದಾಧಿಕಾರಿಗಳು, ಮಹಿಳಾ ಪರ ಸಂಘಟನೆಗಳು, ಸರ್ವ ಪಕ್ಷಗಳ ಮುಖಂಡರು, ಅನೇಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.