ಬಾಗೇಪಲ್ಲಿ: ಪವಿತ್ರ ರಂಜಾನ್ ಹಬ್ಬದ ಉಪವಾಸ ಆಚರಣೆ ಮಾಡುತ್ತಿರುವ ಬಡ ಕುಟುಂಬಗಳಿಗೆ ಆಸರೆ ಕಲ್ಪಿಸುವ ಉದ್ದೇಶಕ್ಕಾಗಿ ಕರ್ನಾಟಕ ಯುವ ಸೇನೆ ವೇದಿಕೆ (Karnataka Yuva Sena Vedike) ವತಿಯಿಂದ ಉಚಿತ ದಿನಸಿ ಕಿಟ್ ವಿತರಿಸುತ್ತೇವೆಂದು ರಾಜ್ಯಾಧ್ಯಕ್ಷ ಮಹೇಶ್ ತಿಳಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮದ ಜಾಮೀಯಾ ಮಸೀದಿ ಬಳಿ ರಂಜಾನ್ ಹಬ್ಬದ ಪ್ರಯುಕ್ತ ಕರ್ನಾಟಕ ಯುವಸೇನೆ ವೇದಿಕೆವತಿಯಿಂದ ಅಯೋಜಿಸಿದ್ದ ಮುಸ್ಲಿಂ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ವಿವಿಧ ಗಣ್ಯರು ಚಾಲನೆ ನೀಡಿದರು.
ಇದನ್ನೂ ಓದಿ: Bagepally News: ವ್ಯವಹಾರಿಕ ಕೌಶಲ ಹೆಚ್ಚಿಸಲು ಮಕ್ಕಳ ಸಂತೆ ಸಹಕಾರಿ: ಆರ್.ಹನುಮಂತ ರೆಡ್ಡಿ
ಕರ್ನಾಟಕ ಯುವಸೇನೆ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್ ಮಾತನಾಡಿ, ಕರ್ನಾಟಕ ಯುವ ಸೇನೆ ವೇದಿಕೆವತಿಯಿಂದ ಈ ಭಾಗದಲ್ಲಿ ಹಲವು ಸಮಾಜ ಮುಖಿ ಸೇವೆಗಳನ್ನು ಹಮ್ಮಿ ಕೊಂಡು ಬಡವರಿಗೆ ಆಸರೆಯಾಗಿದ್ದೇವೆ, ನಮ್ಮ ಸಂಘಟನೆಯ ಸೇವಾ ಕಾರ್ಯದಲ್ಲಿ ಬಡವರ ಸೇವೆ ಒಂದು ಭಾಗವಾಗಿದ್ದು ಸೋದರ ಭಾವನೆಯೊಂದಿಗೆ ರಂಜಾನ್ ಹಬ್ಬದ ಪ್ರಯುಕ್ತ ಬಡ ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಕಾರ್ಯ ಹಮ್ಮಿಕೊಂಡಿ ದ್ದೇವೆ.
ನಾವು ಸಂಪಾದನೆ ಮಾಡಿದ ಒಂದು ಭಾಗವನ್ನು ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಗಾಗಿ, ಬಡ ಕುಟುಂಬಗಳ ಸೇವೆಗೆ ಉಪಯೋಗಿಸುವ ಕಾರ್ಯವನ್ನು ಮಾಡಬೇಕೆಂದು ತೀರ್ಮಾನಿಸಿಕೊಂಡಿದ್ದೇವೆ, ಅದರಂತೆ ಈ ಬಾಗದ ಯುವಕರ ಬಳಗ ನಮ್ಮೊಂದಿಗೆ ಕೈ ಜೊಡಿಸಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಸಾಥ್ ನೀಡಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮ ಮತ್ತು ಪಾತಪಾಳ್ಯ ಹೋಬಳಿಯ ಕಾಂಸಾನಪಲ್ಲಿ ಗ್ರಾಮದ 120 ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯುವಸೇನೆ ವೇಧಿಕೆ ರಾಜ್ಯ ಉಪಾಧ್ಯಕ್ಷ ಚಂದನ್ ಕುಮಾರ್, ಮುಖಂಡರಾದ ಪೋಸ್ಟ್ ಬಾಬು, ರಫೀಕ್, ಇಮ್ರಾನ್, ರಾಘವೇಧ್ರ, ಮಂಜುನಾಥ, ಮದ್ದಿರೆಡ್ಡಿ, ಭರತ್, ನಾಗರಾಜು, ಅಂಬರೀಶ್, ನರೇಶ್, ವಾಸು, ಉದಯ್ ಮತ್ತಿತರರು ಇದ್ದರು.