ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

JEE 697th Rank: ಜೆಇಇ 697ನೇ ರ‍್ಯಾಂಕ್ ಮೂಲಕ ಐಐಟಿಗೆ ಸ್ಥಾನ ಪಡೆದ ಕಿಶೋರ್ ಪ್ರೀತಂ

ಪ್ರತಿಷ್ಠಿತ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಎಂ. ಎಸ್. ಕಿಶೋರ್ ಪ್ರೀತಂ ಏಪ್ರಿಲ್ ತಿಂಗಳಲ್ಲಿ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಶೇ 95 ಅಂಕಗಳೊಂದಿಗೆ 697 ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ಭಾರತದ ಪ್ರತಿಷ್ಠಿತ ಐಐಟಿ ಸಂಸ್ಥೆಯಲ್ಲಿ ಸೀಟು ಪಡೆದಿದ್ದಾರೆ.ಕಿಶೋರ್ ಪ್ರೀತಂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕೂಡ ಶೇ 94 ಅಂಕಗಳ ಸಾಧನೆ ಮಾಡಿದ್ದಾರೆ

ಜೆಇಇ ೬೯೭ನೇ ರ‍್ಯಾಂಕ್ ಮೂಲಕ ಐಐಟಿಗೆ ಸ್ಥಾನ ಪಡೆದ ಕಿಶೋರ್

ಚಿಕ್ಕಬಳ್ಳಾಪುರ : ನಗರದ ಪ್ರತಿಷ್ಠಿತ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಎಂ. ಎಸ್. ಕಿಶೋರ್ ಪ್ರೀತಂ ಏಪ್ರಿಲ್ ತಿಂಗಳಲ್ಲಿ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಶೇ 95 ಅಂಕಗಳೊಂದಿಗೆ 697 ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ಭಾರತದ ಪ್ರತಿಷ್ಠಿತ ಐಐಟಿ ಸಂಸ್ಥೆಯಲ್ಲಿ ಸೀಟು ಪಡೆದಿದ್ದಾರೆ. ಕಿಶೋರ್ ಪ್ರೀತಂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕೂಡ ಶೇ 94 ಅಂಕಗಳ ಸಾಧನೆ ಮಾಡಿದ್ದಾರೆ.

ನಗರ ಹೊರವಲಯ ಉತ್ತರ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜು ಸಂಸ್ಥೆಯಲ್ಲಿ ಪ್ರಾಧ್ಯಾಪಕ ರಾಗಿರುವ ಡಾ.ಎಂ.ಶAಕರ್ ಮತ್ತು ಅಜ್ಜವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಗಾಯಿತ್ರಿ ಅವರ ಸುಪುತ್ರರಾದ ಕಿಶೋರ್ ಪ್ರೀತಂ ಬಾಲ್ಯದಿಂದಲೇ ಚುರುಕುಬುದ್ದಿಯ ವಿದ್ಯಾರ್ಥಿ ಎಂದೇ ಕರೆಸಿಕೊಂಡಿದ್ದಾರೆ.

ಇದನ್ನೂ ಓದಿ: RCB Celebration in Chikkaballapur: 18 ವರ್ಷಗಳ ಬಳಿಕ ಆರ್‌ಸಿಬಿ ಐತಿಹಾಸಿಕ ಚೊಚ್ಚಲ ಐಪಿಎಲ್ ಕಿರೀಟ : ಬಾಗೇಪಲ್ಲಿಯಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಗಳ ವಿಜಯೋತ್ಸವ

ಬಿ.ಜಿ.ಎಸ್ ವರ್ಲ್ಡ್ ಶಾಲೆಯ ಐಸಿಎಸ್‌ಸಿ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಈತ ಶೇ ೯೮.೨ ಅಂಕಗಳೊAದಿಗೆ ಅಖಿಲ ಭಾರತ ಮಟ್ಟದಲ್ಲಿ ೯ ನೇ ರ‍್ಯಾಂಕ್‌ನ ಕೀರ್ತಿಗೆ ಪಾತ್ರವಾಗುವ ಮೂಲಕ ಚುಂಚಶ್ರೀಗಳ ಮೆಚ್ಚುಗೆ ಗಳಿಸಿದ್ದರು.

ಜೆಇಇ ಪರೀಕ್ಷೆಯಲ್ಲಿಯೂ ಅಖಿಲಭಾರತ ಮಟ್ಟದ ಸಾಧನೆ ಮಾಡಿ ಐಐಟಿಗೆ ಆಯ್ಕೆಯಾಗಿರುವ ಕಿಶೋರ್ ಪ್ರೀತಂ ಸಾಧನೆಯನ್ನು ಕೊಂಡಾಡಿರುವ ಬಿಜಿಎಸ್ ಪಿಯುಸಿ ಕಾಲೇಜಿನ ಪ್ರಾಂಶು ಪಾಲರು, ಬೋಧಕವರ್ಗ,ಪೋಷಕರು, ಸಹಪಾಠಿಗಳು ಅಭಿನಂದಿಸಿ ಶುಭಾಶಯ ಕೋರಿದ್ದಾರೆ.