ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shidlaghatta News: ಜನಪದ ಪರಂಪರೆಗೆ ಜೀವ ತುಂಬಿದ ಕೋಲಾಟ ಪ್ರದರ್ಶನ

ವರದನಾಯಕನಹಳ್ಳಿ, ಹನುಮಂತಪುರ, ಶಿಡ್ಲಘಟ್ಟ ಹಾಗೂ ಚೀಮನಹಳ್ಳಿ ಗ್ರಾಮಗಳ ಸುಮಾರು ಇಪ್ಪತ್ತು ಮಂದಿ ಕಲಾವಿದರು ಭಾಗವಹಿಸಿದರು. ಹಾರಹೊಳ್ಳಿಯ ಗುರುಗಳಾದ ಇ. ಮುನಿಶಾಮಪ್ಪ ಮತ್ತು ಹೆಚ್.ಎನ್. ಸುಬ್ಬರಾಯಪ್ಪ ಅವರಿಂದ ತರಬೇತಿ ಪಡೆದು, ಹನುಮಂತಪುರದ ಶ್ರೀಕೃಷ್ಣ ಸ್ವಾಮಿ ದೇವಾಲಯದ ಬಳಿ ಅಭ್ಯಾಸ ಮಾಡಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಿದರು.

ಗ್ರಾಮೀಣ ಸೊಗಡಿನ ಪ್ರತೀಕವಾಗಿರುವ ಜನಪದ ಕಲೆ ಕೋಲಾಟ ವರದನಾಯಕನಹಳ್ಳಿ ಗ್ರಾಮದಲ್ಲಿ ಮತ್ತೆ ಮರುಕಳಿಸಿ ಗಮನಸೆಳೆಯಿತು. ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಜನಪದ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಯಿತು.

ಶಿಡ್ಲಘಟ್ಟ: ಗ್ರಾಮೀಣ ಸೊಗಡಿನ ಪ್ರತೀಕವಾಗಿರುವ ಜನಪದ ಕಲೆ ಕೋಲಾಟ ವರದನಾಯಕನ ಹಳ್ಳಿ ಗ್ರಾಮದಲ್ಲಿ ಮತ್ತೆ ಮರುಕಳಿಸಿ ಗಮನಸೆಳೆಯಿತು. ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಜನಪದ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಯಿತು.

ತಾಲ್ಲೂಕಿನ ವರದನಾಯಕನಹಳ್ಳಿಯಲ್ಲಿ ನಡೆದ 13ನೇ ವರ್ಷದ ಶ್ರೀ ಭಕ್ತಾಂಜನೇಯಸ್ವಾಮಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಕೋಲಾಟ ಪ್ರದರ್ಶನ ನಡೆಯಿತು.

Kolata

ವರದನಾಯಕನಹಳ್ಳಿ, ಹನುಮಂತಪುರ, ಶಿಡ್ಲಘಟ್ಟ ಹಾಗೂ ಚೀಮನಹಳ್ಳಿ ಗ್ರಾಮಗಳ ಸುಮಾರು ಇಪ್ಪತ್ತು ಮಂದಿ ಕಲಾವಿದರು ಭಾಗವಹಿಸಿದರು. ಹಾರಹೊಳ್ಳಿಯ ಗುರುಗಳಾದ ಇ.ಮುನಿಶಾಮಪ್ಪ ಮತ್ತು ಹೆಚ್.ಎನ್. ಸುಬ್ಬರಾಯಪ್ಪ ಅವರಿಂದ ತರಬೇತಿ ಪಡೆದು, ಹನುಮಂತಪುರದ ಶ್ರೀಕೃಷ್ಣ ಸ್ವಾಮಿ ದೇವಾಲಯದ ಬಳಿ ಅಭ್ಯಾಸ ಮಾಡಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಿದರು.

ಇದನ್ನೂ ಓದಿ: IPL Trophy: IPL​ ಟ್ರೋಫಿ ಮೇಲೆ ಸಂಸ್ಕೃತ ಶ್ಲೋಕ; ಏನಿದರ ಅರ್ಥ ನಿಮಗೆ ಗೊತ್ತಾ?

ಗ್ರಾಮ ಮುಖಂಡ ವೇಣುಗೋಪಾಲ್ ಮಾತನಾಡಿ, ಟಿವಿ ಮತ್ತು ಮೊಬೈಲ್‌ಗಳ ನಡುವೆಯೂ ಜನಪದ ಕಲೆಗಳಿಗೆ ಜನರು ಮೆಚ್ಚುಗೆ ತೋರಿರುವುದು ಸಂತಸದ ಸಂಗತಿ ಎಂದರು. ಜನಪದ ಕಲಾ ವಿದ ಈ ಧರೆ ಪ್ರಕಾಶ್, ಪೂರ್ವಿಕರಿಂದ ಬಂದ ಕಲೆಗಳನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಲವರು ಭಾಗವಹಿಸಿ ಕೋಲಾಟದ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದರು.

ಕೋಲಾಟ ತರಬೇತಿ ಪಡೆದು ಪ್ರದರ್ಶನ ನೀಡಿದ ಹನುಮಂತಪುರ ಗಾಯಿತ್ರಮ್ಮ, ಹನುಮಂತರೆಡ್ಡಿ, ವಿಮಲಮ್ಮ, ನಾಗಮ್ಮ, ಭವ್ಯಶ್ರಿ, ಆರ್ಮೋನಿಯಂ ಕಲಾವಿದ ಮುನಿರೆಡ್ಡಿ, ವರದನಾಯಕನಹಳ್ಳಿ ಪ್ರಭಾಕರ್, ದ್ಯಾವಣ್ಣ, ನೇತ್ರ, ಇನಿ, ವಿಟಿ, ಜವನಿ ವಿ.ಟಿ, ಚೀಮನಹಳ್ಳಿ ಭಾಗ್ಯಮ್ಮ, ರಾಧಮ್ಮ, ಶಾಮಲಮ್ಮ, ಮಂಜಮ್ಮ, ತಬಲಾ ಕಲಾವಿದ ರಮೇಶ್, ಶಿಡ್ಲಘಟ್ಟ ನಗರದ ಮಂಗಳ, ಕನ್ಯಪ್ಪ, ಗಿರಿಜಮ್ಮ, ಗೀತಾ ಹಾಗೂ ಇನ್ನಿತರರು ಭಾಗವಹಿಸಿದ್ದರು.

image

“ಪೂರ್ವಿಕರಿಂದ ಬಂದಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ನಾನು ಸಹ ಕೋಲಾಟ ಕಲಿತು ಪ್ರದರ್ಶನ ನೀಡಿದ್ದು ಅತ್ಯಂತ ಸಂತೋಷ ತಂದಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

-ಈ ಧರೆ ಪ್ರಕಾಶ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಚಾಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಜಿಲ್ಲಾ ಸಂಚಾಲಕ ಜನಪದ ಕಲಾವಿದ