ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL Trophy: IPL​ ಟ್ರೋಫಿ ಮೇಲೆ ಸಂಸ್ಕೃತ ಶ್ಲೋಕ; ಏನಿದರ ಅರ್ಥ ನಿಮಗೆ ಗೊತ್ತಾ?

ಐಪಿಎಲ್‌ನ 18 ನೇ ಆವೃತ್ತಿ ಕೊನೆಗೊಂಡಿದೆ. ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್‌ ತಂಡಗಳು ಕಾದಾಟ ನಡೆಸಿದ್ದವು. ಆಟಗಾರರು ಫೈನಲ್​ ಪಂದ್ಯದ ಬಳಿಕ ಟ್ರೋಫಿ ಜೊತೆಗೆ ಫೋಟೋಗಳನ್ನು ತೆಗೆದುಕೊಂಡಿದ್ದರು. ಈ ವೇಳೆ ಟ್ರೋಫಿ ಮೇಲೆ ಸಂಸ್ಕೃತ ಶ್ಲೋಕವೊಂದು ಕಾಣಿಸಿಕೊಂಡಿತು. ಟ್ರೋಫಿ ಮೇಲೆ ಸಂಸ್ಕೃತ ಶ್ಲೋಕವೊಂದು ಬರೆದಿತ್ತು.

ಟ್ರೋಫಿ ಮೇಲೆ ಇದೆ ಸಂಸ್ಕೃತ ಶ್ಲೋಕ!

-

Vishakha Bhat Heggar
Vishakha Bhat Heggar Jun 7, 2025 1:15 PM

ನವದೆಹಲಿ: ಐಪಿಎಲ್‌ನ 18 ನೇ ಆವೃತ್ತಿ ಕೊನೆಗೊಂಡಿದೆ. ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್‌ ತಂಡಗಳು ಕಾದಾಟ ನಡೆಸಿದ್ದವು. (IPL Trophy) ಮೊದಲ ಬಾರಿಗೆ ಆರ್‌ಸಿಬಿ ಫೈನಲ್‌ನಲ್ಲಿ ಗೆದ್ದು ಬೀಗಿದೆ. ಆಟಗಾರರು ಫೈನಲ್​ ಪಂದ್ಯದ ಬಳಿಕ ಟ್ರೋಫಿ ಜೊತೆಗೆ ಫೋಟೋಗಳನ್ನು ತೆಗೆದುಕೊಂಡಿದ್ದರು. ಈ ವೇಳೆ ಟ್ರೋಫಿ ಮೇಲೆ ಸಂಸ್ಕೃತ ಶ್ಲೋಕವೊಂದು ಕಾಣಿಸಿಕೊಂಡಿತು. ಟ್ರೋಫಿ ಮೇಲೆ ಸಂಸ್ಕೃತ ಶ್ಲೋಕವೊಂದು ಬರೆದಿತ್ತು. ಅದೇನು ಇರಬಹುದು ಎಂದು ಎಲ್ಲರೂ ಕುತೂಹಲರಾಗಿದ್ದರು. ಹಲವರು ಈ ಕುರಿತು ಹುಡುಕಿದ್ದರೂ ಕೂಡ. ಹಾಗಾದರೆ ಟ್ರೋಫಿ ಮೇಲೆ ಇರುವ ಶ್ಲೋಕ ಏನು ಎಂಬುದರ ಡಿಟೇಲ್ಸ್‌ ಇಲ್ಲಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಅನ್ನು 2008 ರಲ್ಲಿ ಪ್ರಾರಂಭಿಸಲಾಯಿತು. ಚೊಚ್ಚಲ ಆವೃತ್ತಿ ಸಮಯದಲ್ಲಿ ಟ್ರೋಫಿ ಭಿನ್ನವಾಗಿತ್ತು. ಮೊದಲ ಸೀಸನ್‌ ಟ್ರೋಫಿ ಭಾರತದ ನಕ್ಷೆಯ ರೂಪದಲ್ಲಿತ್ತು. ಕೆಲವು ವರ್ಷಗಳ ನಂತರ, ಟ್ರೋಫಿ ಬಹಳಷ್ಟು ಬದಲಾವಣೆಗೊಂಡಿತು. 2009ರಲ್ಲಿ ಟ್ರೋಫಿ ಬದಲಾದ ಮೇಲೆ ಅದರ ಮೇಳೆ ಸಂಸ್ಕೃತ ಪದವನ್ನು ಬರೆಯಲಾಯಿತು. ಇದು ಈ ಹಿಂದೆ 1983ರ ಏಕದಿನ ವಿಶ್ವಕಪ್‌ ಟ್ರೋಫಿ ಮೇಲೆ ಬರೆಯಲಾಗಿತ್ತು. ಅದೆ ಪದಗಳನ್ನು ಐಪಿಎಲ್‌ ಟ್ರೋಫಿ ಮೇಲೆ ಬರೆಯಿಸಲಾಯಿತು.

ಟ್ರೋಫಿ ಮೇಲೆ ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ' (Yatra Pratibha Avsara Prapnotihi) ಎಂಬ ಸಂಸ್ಕೃತ ಶ್ಲೋಕವನ್ನು ಬರೆಯಲಾಗಿದೆ. ಇದರ ಅರ್ಥ ಎಲ್ಲಿ ಪ್ರತಿಭೆ ಇರುತ್ತದೋ, ಅಲ್ಲಿ ಅವಕಾಶಗಳು ಇರುತ್ತದೆ ಎಂದು ತಿಳಿಸುತ್ತದೆ. ವರದಿಗಳ ಪ್ರಕಾರ ಐಪಿಎಲ್ ಟ್ರೋಫಿಯ ಬೆಲೆ 30 ರಿಂದ 50 ಲಕ್ಷ ರೂ. ಆಗಿದ್ದು ಇದು ಇಡೀ ಕ್ರೀಡಾ ಜಗತ್ತಿನಲ್ಲಿ ಅತ್ಯಂತ ದುಬಾರಿ ಟ್ರೋಫಿಗಳಲ್ಲಿ ಒಂದಾಗಿದೆ. ಈ ಟ್ರೋಫಿಯನ್ನು 2008 ರಿಂದಲೂ ಭಾರತ ಖ್ಯಾತ ಆಭರಣ ಕಂಪನಿ ಓರ್ರಾ ತಯಾರಿಸುತ್ತಿದೆ. ಐಪಿಎಲ್ ಟ್ರೋಫಿಯನ್ನು ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಲಾಗಿದೆ. ಇದರ ತೂಕ 6 ಕೆಜಿ ಇದ್ದು 26 ಇಂಚು ಎತ್ತರವಿದೆ.

ಈ ಸುದ್ದಿಯನ್ನೂ ಓದಿ: ʻಆರ್‌ಸಿಬಿ ಪರ ವಿರಾಟ್‌ ಕೊಹ್ಲಿಗಾಗಿ ಮತ್ತೊಂದು ಐಪಿಎಲ್‌ ಕಪ್‌ ಗೆಲ್ಲುತ್ತೇವೆʼ: ಯಶ್‌ ದಯಾಳ್‌!

ಐಪಿಎಲ್ ಚಾಂಪಿಯನ್ ಆಗುವ ತಂಡಕ್ಕೆ ಮೂಲ ಟ್ರೋಫಿಯನ್ನು ನೀಡಲಾಗುವುದಿಲ್ಲ. ವಿಜೇತ ತಂಡಗಳಿಗೆ ತದ್ರೂಪಿ ಟ್ರೋಫಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಸಮಾರಂಭದಲ್ಲಿ ಆರ್‌ಸಿಬಿಗೆ ಮೂಲ ಐಪಿಎಲ್ ಟ್ರೋಫಿಯನ್ನು ನೀಡಲಾಯಿತ್ತಾದರೂ ಆ ಬಳಿಕ ಮೂಲ ಟ್ರೋಫಿಯನ್ನು ಹಿಂಪಡೆದು, ಆ ಟ್ರೋಫಿಯನ್ನೇ ಹೊಲುವ ತದ್ರೂಪಿ ಟ್ರೋಫಿಯನ್ನು ಆರ್​ಸಿಬಿಗೆ ನೀಡಲಾಗಿದೆ. ಆರ್​ಸಿಬಿ ತಂಡ ಆ ಟ್ರೋಫಿಯನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದಿತ್ತು.