ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chintamani News: ನಂದಿಗಾನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಉಪಾಧ್ಯಕ್ಷೆ ರತ್ನಮ್ಮ ಅವಿರೋಧ ಆಯ್ಕೆ

ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣಾ ದಿನಾಂಕ ನಿಗದಿಯಾಗಿದ್ದು ಅಧ್ಯ ಕ್ಷರ ಸ್ಥಾನಕ್ಕೆ ಎಸ್ ಕೃಷ್ಣಮೂರ್ತಿ,ಉಪಾಧ್ಯಕ್ಷರ ಸ್ಥಾನಕ್ಕೆ ರತ್ನಮ್ಮ ನಲ್ಲಪ್ಪರೆಡ್ಡಿ ಮಾತ್ರ ನಾಮಪತ್ರಗಳನ್ನು ಸಲ್ಲಿಸಿದ್ದು.ಬೇರೆ ನಿರ್ದೇಶಕರು ನಾಮಪತ್ರ ಸಲ್ಲಿಸದೆ ಇರುವ ಕಾರಣಕ್ಕೆ ಇಬ್ಬರನ್ನು  ಆವಿರೋಧವಾಗಿ ಆಯ್ಕೆ ಮಾಡಲಾಗಿದೆ

ಚಿಂತಾಮಣಿ: ತಾಲ್ಲೂಕಿನ ನಂದಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಎಸ್ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ರತ್ನಮ್ಮ ನಲ್ಲಪ್ಪರೆಡ್ಡಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಸಂಘದ ಎಲ್ಲಾ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು,ಎಲ್ಲಾ ೧೨ ನಿರ್ದೇಶಕರುಗಳು ಆವಿರೋಧವಾಗಿ ಆಯ್ಕೆಗೊಂಡಿದ್ದರು.

ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣಾ ದಿನಾಂಕ ನಿಗದಿಯಾಗಿದ್ದು ಅಧ್ಯಕ್ಷರ ಸ್ಥಾನಕ್ಕೆ ಎಸ್ ಕೃಷ್ಣಮೂರ್ತಿ,ಉಪಾಧ್ಯಕ್ಷರ ಸ್ಥಾನಕ್ಕೆ ರತ್ನಮ್ಮ ನಲ್ಲಪ್ಪರೆಡ್ಡಿ ಮಾತ್ರ ನಾಮಪತ್ರಗಳನ್ನು ಸಲ್ಲಿಸಿದ್ದು.ಬೇರೆ ನಿರ್ದೇಶಕರು ನಾಮಪತ್ರ ಸಲ್ಲಿಸದೆ ಇರುವ ಕಾರಣಕ್ಕೆ ಇಬ್ಬರನ್ನು  ಆವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಎನ್ ವನಿತಾ ಘೋಷಣೆ ಮಾಡಿದರು.

ಇದನ್ನೂ ಓದಿ: Chinthamani News: ಎಫ್ ಸಿ ಇಲ್ಲದ ಶಾಲಾ ವಾಹನಗಳಿಗೆ ಎಫ್ ಸಿ ಮಾಡಿಕೊಳ್ಳಲು ಖಡಕ್ ವಾರ್ನಿಂಗ್

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಅಧ್ಯಕ್ಷ ಮತ್ತು ಉಪಾ ಧ್ಯಕ್ಷರಿಗೆ ಹೂಮಾಲೆ ಹಾಕಿದರು. ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ದರು.

ನೂತನ ಅಧ್ಯಕ್ಷರಾದ ಎಸ್ ಕೃಷ್ಣಮೂರ್ತಿ ಅವರು ಮಾತನಾಡಿ ನಮ್ಮ ನಾಯಕ ಹಾಗೂ ಹಾಲಿ ಸಚಿವ ಡಾಕ್ಟರ್ ಎಂ.ಸಿ.ಸುಧಾಕರ್ ಹಾಗೂ ಸಂಘದ ಎಲ್ಲಾ ನಿರ್ದೇಶಕರ ಸಹಕಾರ ದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ.

ನಂದಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘ 1964ರಲ್ಲಿ ಸ್ಥಾಪನೆಯಾಗಿದ್ದು ಇಂದಿನವರೆಗೂ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ.ತಾನೂ ಕೂಡ ತನ್ನ ಅವಧಿ ಯಲ್ಲಿ ಯಾವುದೇ ಪಕ್ಷಬೇದ ಮಾಡದೇ ಮಹಿಳೆಯರು,ರೈತರಿಗೆ ಅನುಕೂಲಕರವಾದ ರೀತಿಯಲ್ಲಿ ಸಾಲಗಳನ್ನು ನೀಡಿ ಮತ್ತಷ್ಟು ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿ ಸಂಘವನ್ನು ಮಾದರಿ ಸಂಘವನ್ನು ಮಾಡುವುದಾಗಿ ತಿಳಿಸಿದರು.

ನಂತರ ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ್ ರೆಡ್ಡಿ ಮಾತನಾಡಿ  ಈಗಾಗಲೇ ಸಂಘ ದಿಂದ ಸ್ತ್ರೀಶಕ್ತಿ ಸಂಘಗಳಿಗೆ ೪.೭೦ಕೋಟಿ ರೂ,ರೈತರಿಗೆ ೫.೭೦ಕೋಟಿ ರೂಗಳನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸಲಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಸಾಲ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಎನ್ ಸಿ ಆಂಜನೇಯರೆಡ್ಡಿ,ರಘುನಾಥ್ ರೆಡ್ಡಿ, ಜಯರಾಮರೆಡ್ಡಿ, ಎಸ್.ಶೋಭಾ, ಎಸ್.ಕೃಷ್ಣಪ್ಪ, ಪೂಜಾರಿ ರಾಜಣ್ಣ,ಬಿ.ಅಮೀರ್ ಜಾನ್, ಚನ್ನಕೇಶವ ರೆಡ್ಡಿ, ಕೆಎನ್ ಬೈರಾರೆಡ್ಡಿ,ವಿ ನಾರಾಯಣಸ್ವಾಮಿ,ಗ್ರಾಮ ಪಂಚಾಯತಿ ಅಧ್ಯಕ್ಷ ಹಾಜಿ ಅನ್ಸರ್ ಖಾನ್,ಲಲಿತಮ್ಮ ಶಿವಣ್ಣ, ಉಪಾಧ್ಯಕ್ಷರಾದ ಶಂಕ್ರಪ್ಪ,u ಸೋಮ ಶೇಖರಡ್ಡಿ, ಮೌಲಾಜಿ ರಾವ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಬೈನಹಳ್ಳಿ ಶ್ರೀನಿವಾಸ್,ಕಾರ್ತಿಕ್ ರಾವ್,ಪ್ಯಾರಜಾನ್,ವೆಂಕಟೇಶ್,ಆರಿಫ್ ಖಾನ್,ತನ್ವೀರ್ ಪಾಷಾ,ಸೇರಿದಂತೆ ಮುಂತಾದವರು ಇದ್ದರು.