ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayanahalli News: ಕುರುಬರಹಳ್ಳಿ ರಸ್ತೆ ಕಾಮಗಾರಿ ಪರಿಶೀಲನೆ: ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಸೂಚನೆ

ಯಂತ್ರದ ಸಹಾಯದಿಂದ ರಸ್ತೆಗೆ ಹಾಕಿ ರುವ ಕಾಂಕ್ರೀಟ್‌ನ ಮಾದರಿ ಅಳತೆ ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತದೆ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎನ್ನುವುದು ಸರ್ಕಾರದ ಉದ್ದೇಶ. ಸಾರ್ವಜನಿಕರು ಕೂಡ ಕಾಮಗಾರಿ ಮಾಡುವಾಗ ಪರಿಶೀಲನೆ ನಡೆಸಿ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗಬೇಕು

ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಸೂಚನೆ

-

Ashok Nayak Ashok Nayak Sep 20, 2025 11:35 PM

​ಚಿಕ್ಕನಾಯಕನಹಳ್ಳಿ: ಹಲವು ವರ್ಷಗಳಿಂದ ಹಾಳಾಗಿದ್ದ ಕುರುಬರಹಳ್ಳಿ ರಸ್ತೆಯ ನಿರ್ಮಾಣ ಕಾಮಗಾರಿಯನ್ನು ಪುರಸಭಾ ಸದಸ್ಯ ಮಲ್ಲಿಕಾರ್ಜುನ್ ಅವರು ಶನಿವಾರ ಸ್ಥಳೀಯರು ಮತ್ತು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

​ನಂತರ ಮಾತನಾಡಿದ ಮಲ್ಲಿಕಾರ್ಜುನ್ ಅವರು, ಈ ರಸ್ತೆ ಕಾಮಗಾರಿಯನ್ನು 2025-26 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿ 6 ಲಕ್ಷ ರೂ. ವೆಚ್ಚದಲ್ಲಿ 95 ಮೀ. ಸಿ.ಸಿ. ರಸ್ತೆಯಾಗಿ ಕೈಗೊಳ್ಳ ಲಾಗಿದೆ ಎಂದು ತಿಳಿಸಿದರು. ಗುತ್ತಿಗೆದಾರರು ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿ ಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು. ನಿರ್ಮಾಣದ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಪಡೆಯುವಂತೆ ಅವರು ಸಲಹೆ ನೀಡಿದರು.

ಇದನ್ನೂ ಓದಿ: Chinthamani News: ಚೇಳೂರು ರಸ್ತೆಯಲ್ಲಿರುವ ಗುಂಡಿಗಳಿಗೆ ಪೂಜೆ ಮಾಡಿದ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು

​ಪುರಸಭಾ ನಾಮಿನಿ ಸದಸ್ಯ ಸುಗಂಧರಾಜು ಮಾತನಾಡಿ, ಯಂತ್ರದ ಸಹಾಯದಿಂದ ರಸ್ತೆಗೆ ಹಾಕಿ ರುವ ಕಾಂಕ್ರೀಟ್‌ನ ಮಾದರಿ ಅಳತೆ ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತದೆ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎನ್ನುವುದು ಸರ್ಕಾರದ ಉದ್ದೇಶ. ಸಾರ್ವಜನಿಕರು ಕೂಡ ಕಾಮಗಾರಿ ಮಾಡುವಾಗ ಪರಿಶೀಲನೆ ನಡೆಸಿ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗಬೇಕು ಎಂದು ಹೇಳಿದರು.

​ಕಾಂಗ್ರೆಸ್ ಮುಖಂಡ ಕೃಷ್ಣೇಗೌಡ ಮಾತನಾಡಿ, ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಯನ್ನು ಪರಿಶೀಲಿಸಲಾಗಿದೆ. ಟೆಂಡರ್ ವೇಳೆ ನೀಡಿರುವ ಮಾನದಂಡದ ಅನ್ವಯ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಒತ್ತಾಯಿಸಿದರು.

​ಈ ಸಂದರ್ಭದಲ್ಲಿ ಪುರಸಭಾ ಇಂಜಿನಿಯರ್ ಮಂಜುನಾಥ್, ಗುತ್ತಿಗೆದಾರ ಗುರುರಾಜ್, ಮುಖಂಡ ರಾದ ಧೃವಕುಮಾರ್, ಮಹೇಶ್ ಮತ್ತು ಪ್ರಕಾಶ್ ಹಾಜರಿದ್ದರು.