ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕೈಕಟ್ಟಿ ಕೂರದೆ ಏನಾಗುತ್ತೋ ಮಾಡಬೇಕು, ಮಾನವ ಕಳ್ಳಸಾಗಣೆ ತಡೆಯುವುದು ಸಾಮಾಜಿಕ ಜವಾಬ್ದಾರಿ :  ಸದ್ಗುರು ಶ್ರೀ ಮಧುಸೂಧನ ಸಾಯಿ

ಯುದ್ಧ ಮತ್ತು ಸಂಘರ್ಷಗಳಿAದ ಸ್ಥಳಾಂತರಗೊAಡವರಲ್ಲಿ ಅತ್ಯಂತ ದುರ್ಬಲ ವರ್ಗದ ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ರೋಗಿಗಳು ಸೇರಿದ್ದಾರೆ. ಇವರಿಗೆ ಎಲ್ಲೂ ಹೋಗಲು ಸಾಧ್ಯವಾಗುತ್ತಿಲ್ಲ. ತಮ್ಮ ಜೀವನೋಪಾಯಕ್ಕಾಗಿ ಏನನ್ನೂ ಸಂಪಾದಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗ ವಿಲ್ಲದ ನಿರಾಶ್ರಿತರಿಗೆ ಅವರು ಹೋದ ದೇಶಗಳಲ್ಲಿ ಯಾವುದೇ ಸ್ಥಾನಮಾನಗಳು ಸಿಗುತ್ತಿಲ್ಲ. ಇಂತಹ ಸಾಕಷ್ಟು ಮಂದಿಯನ್ನು ನೋಡುತ್ತಿದ್ದೇವೆ

ಮಾನವ ಕಳ್ಳಸಾಗಣೆ ತಡೆಯುವುದು ಸಾಮಾಜಿಕ ಜವಾಬ್ದಾರಿ

-

Ashok Nayak Ashok Nayak Sep 21, 2025 1:00 AM

ಚಿಕ್ಕಬಳ್ಳಾಪುರ : ಜಗತ್ತಿನ ಹಲವೆಡೆ ಪ್ರಾಣಿಗಳಿಗಿಂತ ಕೀಳಾಗಿ ಮನುಷ್ಯರು ಕಳ್ಳ ಸಾಗಾಣಿಕೆಗೆ ಗುರಿಯಾಗುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ಇದನ್ನು ಸಾಮಾಜಿಕ ಜವಾಬ್ದಾರಿ ಎಂದುಕೊಂಡು ಎಲ್ಲರೂ ತಮ್ಮ ಕೈಲಾದ ಎಲ್ಲ ರೀತಿಯ ಪ್ರಯತ್ನ ಮಾಡಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ ೩೬ನೇ ದಿನವಾದ ಶನಿವಾರ (ಸೆ ೨೦) ಮಾತನಾಡಿದ ಅವರು, ದಿನಕ್ಕೆ ಎರಡು ಹೆರಡೊತ್ತು ಊಟ ಇಲ್ಲದೆ, ತಲೆಯ ಮೇಲೆ ಸೂರು ಇಲ್ಲದ ಲಕ್ಷಾಂತರ ಮಂದಿ ತಮ್ಮ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಿದ್ದಾರೆ ಎಂದರು.

ಯುದ್ಧ ಮತ್ತು ಸಂಘರ್ಷಗಳಿAದ ಸ್ಥಳಾಂತರಗೊAಡವರಲ್ಲಿ ಅತ್ಯಂತ ದುರ್ಬಲ ವರ್ಗದ ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ರೋಗಿಗಳು ಸೇರಿದ್ದಾರೆ. ಇವರಿಗೆ ಎಲ್ಲೂ ಹೋಗಲು ಸಾಧ್ಯವಾಗುತ್ತಿಲ್ಲ. ತಮ್ಮ ಜೀವನೋಪಾಯಕ್ಕಾಗಿ ಏನನ್ನೂ ಸಂಪಾದಿಸಿಕೊಳ್ಳಲು ಸಾಧ್ಯವಾಗು ತ್ತಿಲ್ಲ.  ಶಿಕ್ಷಣ ಮತ್ತು ಉದ್ಯೋಗವಿಲ್ಲದ ನಿರಾಶ್ರಿತರಿಗೆ ಅವರು ಹೋದ ದೇಶಗಳಲ್ಲಿ ಯಾವುದೇ ಸ್ಥಾನಮಾನಗಳು ಸಿಗುತ್ತಿಲ್ಲ. ಇಂತಹ ಸಾಕಷ್ಟು ಮಂದಿಯನ್ನು ನೋಡುತ್ತಿದ್ದೇವೆ. ಇವರ ಬದುಕು  ಉತ್ತಮಗೊಳಿಸಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Bangalore stampede: ʻಸಂಭ್ರಮಾಚರಣೆಗಿಂತ ಅಭಿಮಾನಿಗಳ ಜೀವ ಮುಖ್ಯʼ-ಕಪಿಲ್‌ ದೇವ್‌!

ನಮ್ಮ ಸೇವೆಗಳನ್ನು ಪಡೆದ ಜನರ ಬದುಕಿನಲ್ಲಿ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಆದರೆ ಅವರಿಗಿಂತ ಹೆಚ್ಚಾಗಿ ನಮ್ಮಲ್ಲಿ ಬದಲಾವಣೆ ತರುವುದು ಸೇವೆಯ ಶ್ರೇಷ್ಠ ಕೊಡುಗೆ. ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಡುತ್ತಿರುವ ನೇಪಾಳದ ಚರಿಮಯಾ ತಮಾಂಗ್ ಅವರ ಸೇವೆ ಎಲ್ಲರಿಗೆ ಸ್ಫೂರ್ತಿಯಾಗಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೇಪಾಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಚರಿಮಯಾ ತಮಾಂಗ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ' ಪುರಸ್ಕಾರ ನೀಡಿ ಗೌರವಿಸಲಾಯಿತು. ನೇಪಾಳದ ಪ್ರತಿನಿಧಿ ಗಳಾದ ಉಜ್ವಲ್ ಅರ್ಯಲ್ ಮತ್ತು ಗೀತಾ ಥಾಪ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

'ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್' ಯೋಜನೆಯಡಿ ಸತ್ಯ ಸಾಯಿ ಗುರುಕುಲಂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡುತ್ತಿರುವ 'ಇ-ಟ್ರಾವೆಲ್ ವ್ಯಾಲ್ಯೂ ಇಂಡಿಯಾ ಪ್ರೈವೇಟ್ ಲಿಮಿಟೆಡ್' ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ವಿಜಯ್, ನಿರ್ವಹಣೆ ಮತ್ತು ಗ್ರಾಹಕ ಸೇವಾ ವಿಭಾಗದ ಮುಖ್ಯಸ್ಥ ಇಕ್ಬಾಲ್ ಸ್ಕಿಂದರ್ ಪ್ರಶಸ್ತಿ ಸ್ವೀಕರಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಬೆಂಬಲ ನೀಡುತ್ತಿರುವ 'ರೋಟರಿ ಇಂಟರ್ ನ್ಯಾಷನಲ್ ಬೆಂಗಳೂರು' ಸಂಸ್ಥೆಯನ್ನೂ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಸಂಸ್ಥೆಯ ಪರ ವಾಯುಸೇನೆಯ ಮಾಜಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪಿ.ನಾಗೇಶ್, ರೋಟೆರಿಯನ್ ಜೀತೇಂದ್ರ ಅನೇಜಾ, ರೋಟೆರಿಯನ್ ಮಿಲಿಂದ್ ದೇಶಪಾಂಡೆ, ರೋಟೆರಿಯನ್ ವೇಲು ಬಿ ಪೇತಿ ಪ್ರಶಸ್ತಿ ಸ್ವೀಕರಿಸಿದರು. ರೋಟರಿ ಬೆಂಗಳೂರು ಇಂಟರ್ ನ್ಯಾಷನಲ್ ವತಿಯಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ 'ಹಾನರರಿ ರೋಟೆರಿಯನ್' ಬ್ಯಾಡ್ಜ್ ನೀಡಿ ಗೌರವಿಸಲಾಯಿತು.

ಇದೇ ವೇಳೆ ಸತ್ಯ ಸಾಯಿ ಆಸ್ಪತ್ರೆಯಲ್ಲಿ ರೋಟರಿ ಸದಸ್ಯರ ನೋಂದಣಿಗೆ ಅನುಕೂಲವಾಗುವ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಲಾಯಿತು.  ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವಿವೇಕ್ ಕುಮಾರ್ , ಕೆ.ಪಿ.ನಾಗೇಶ್, ಜಿತೇಂದ್ರ ಅಜೇಜಾ ಉಪಸ್ಥಿತರಿದ್ದರು.