ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chintamani News: ಧ್ಯಾನವು ಮನಸ್ಸಿನ ಆಲೋಚನೆಗಳ ಮೇಲೆ ನಿಯಂತ್ರಣ ಸಾಧಿಸುವುದರಿಂದ ಬದುಕಿನ ಭಾಗವಾಗಲಿ: ಯೋಗಗುರು ನಾಗೇಂದ್ರ ಬೆಳವಾಡಿ

ಯೋಚನೆಗಳು ಸಂಪೂರ್ಣವಾಗಿ ನಿಂತು ಮನಸ್ಸು ಸ್ಥಿರವಾಗಿರುವ ಸ್ಥಿತಿಯೇ ಧ್ಯಾನ. ಧ್ಯಾನದಿಂದ ಶರೀರದ ಸ್ಥಿರತೆ ಹೆಚ್ಚಾಗುತ್ತದೆ. ಉಸಿರಾಟವು ಸರಾಗವಾಗುತ್ತದೆ. ಶರೀರದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಧ್ಯಾನ ಸಹಕಾರಿಯಾಗಿದೆ. ಆತಂಕ, ಕೋಪ, ಭಯ, ಆನಾರೋಗ್ಯಗಳು ಧ್ಯಾನ ಮಾಡುವು ದರಿಂದ ಕಡಿಮೆಯಾಗುತ್ತದೆ. ಜ್ಞಾಪಕ ಶಕ್ತಿಯು ವೃದ್ಧಿಸುತ್ತದೆ. ಪ್ರಸ್ತುತ ಒತ್ತಡದ ಜೀವನಕ್ಕೆ ಧ್ಯಾನ ಹೇಳಿ ಮಾಡಿಸಿದ ಔಷಧವಾಗಿದೆ.

ಧ್ಯಾನದಿಂದ ಮನಸ್ಸಿನಲ್ಲಿ ಬರುವ ಯೋಚನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು. ಧ್ಯಾನ ಪ್ರತಿಯೊಬ್ಬರ ಬದುಕಿನ ಭಾಗವಾಗಲಿ ಎಂದು ಯೋಗಗುರು ನಾಗೇಂದ್ರ ಬೆಳವಾಡಿ ಅಭಿಪ್ರಾಯಪಟ್ಟರು.

ಚಿಂತಾಮಣಿ: ಧ್ಯಾನದಿಂದ ಮನಸ್ಸಿನಲ್ಲಿ ಬರುವ ಯೋಚನೆಗಳ ಮೇಲೆ ನಿಯಂತ್ರಣ ಸಾಧಿಸ ಬಹುದು. ಧ್ಯಾನ ಪ್ರತಿಯೊಬ್ಬರ ಬದುಕಿನ ಭಾಗವಾಗಲಿ ಎಂದು ಯೋಗಗುರು ನಾಗೇಂದ್ರ ಬೆಳವಾಡಿ ಅಭಿಪ್ರಾಯಪಟ್ಟರು.

ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ವಿಶ್ವ ಧ್ಯಾನ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧ್ಯಾನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಚನೆಗಳು ಸಂಪೂರ್ಣವಾಗಿ ನಿಂತು ಮನಸ್ಸು ಸ್ಥಿರವಾಗಿರುವ ಸ್ಥಿತಿಯೇ ಧ್ಯಾನ. ಧ್ಯಾನದಿಂದ ಶರೀರದ ಸ್ಥಿರತೆ ಹೆಚ್ಚಾಗುತ್ತದೆ. ಉಸಿರಾಟವು ಸರಾಗವಾಗುತ್ತದೆ. ಶರೀರದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಧ್ಯಾನ ಸಹಕಾರಿಯಾಗಿದೆ. ಆತಂಕ, ಕೋಪ, ಭಯ, ಆನಾರೋಗ್ಯಗಳು ಧ್ಯಾನ ಮಾಡುವುದರಿಂದ ಕಡಿಮೆಯಾಗುತ್ತದೆ. ಜ್ಞಾಪಕ ಶಕ್ತಿಯು ವೃದ್ಧಿಸುತ್ತದೆ. ಪ್ರಸ್ತುತ ಒತ್ತಡದ ಜೀವನಕ್ಕೆ ಧ್ಯಾನ ಹೇಳಿ ಮಾಡಿಸಿದ ಔಷಧವಾಗಿದೆ. ಮನಸ್ಸು ಪ್ರಶಾಂತವಾಗಿ ಬಾಹ್ಯ ಪ್ರಪಂಚ ಹಾಗೂ ಅಂತರಂಗದ ಪ್ರಪಂಚಗಳು ಒಂದಾಗಿ ಕಾಣುತ್ತದೆ. ಮಾಡುವ ಯೋಚನೆ ಮತ್ತು ಮಾಡುವ ಕಾರ್ಯದಲ್ಲಿ ಸಮನ್ವಯವನ್ನು ಸಾಧಿಸಲು ಧ್ಯಾನವು ಜೀವನ ಪದ್ಧತಿಯಾಗಬೇಕು ಎಂದರು.

ಇದನ್ನೂ ಓದಿ: Chikkaballapur News: ಸರ್ಕಾರದ ನೀತಿ ವಿರುದ್ಧ ಡಿ.21ರಂದು ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಸಿಪಿಐಎಂ ಪ್ರತಿಭಟನೆ

ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾತನಾಡಿ, ಒಂದು ಕಡೆ ಸ್ಥಿರವಾಗಿ ಕುಳಿತು ಧ್ಯಾನ ವನ್ನು ಮಾಡಬೇಕಾದರೂ ಗುರುಗಳ ಕೃಪೆ ಬೇಕು. ಮನಸ್ಸು, ನೋಟ ಮತ್ತು ಉಸಿರಾಟವನ್ನು ಒಂದು ಕಡೆ ಸ್ಥಿರವಾಗಿ ನಿಲ್ಲಿಸುವುದೇ ಧ್ಯಾನವಾಗಿದೆ. ಸನಾತನ ಪರಂಪರೆಯಲ್ಲಿ ಋಷಿಮುನಿಗಳು ಧ್ಯಾನದ ಮಹತ್ವವನ್ನು ಅರಿತು ನಮಗೆ ಧಾರೆಯೆರೆದಿದ್ದಾರೆ. ಭಕ್ತಿಯಿಂದ ಮಾತ್ರ ನಮಗೆ ಧ್ಯಾನವು ಸಿದ್ಧಿಸುತ್ತದೆ. ಧ್ಯಾನವನ್ನು ನಿರಂತರವಾಗಿ ಮಾಡುತ್ತಿದ್ದರೆ ಉತ್ತಮ ಆರೋಗ್ಯ ಪಡೆಯಬಹುದು ಎಂದರು.

cbpm6bel (1)

ಧ್ಯಾನ ದಿನಾಚರಣೆಯ ಅಂಗವಾಗಿ ಪ್ರತಿನಿತ್ಯದಂತೆ ಬೆಳಿಗ್ಗೆ ಘಂಟಾನಾದ, ಸುಪ್ರಭಾತ, ಗೋಪೂಜೆ ಯನ್ನು ನೆರವೇರಿಸಿ ಸಾಮೂಹಿಕ ಭಜನೆಯನ್ನು ಸಮರ್ಪಿಸಲಾಯಿತು. ಮಹಾಮಂಗಳಾರತಿ ತೀರ್ಥ ಪ್ರಸಾದಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಜ್ಯೋತಿಯನ್ನು ಬೆಳಗಿಸಿ ಚಾಲನೆ ನೀಡಲಾಯಿತು. ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಪ್ರಾರ್ಥನೆಯನ್ನು ಮಾಡಿ ದರು. ಪ್ರವಚನಕಾರ ತಳಗವಾರ ಆನಂದ್ ರವರು ಪ್ರಸ್ತಾವಿಕವಾಗಿ ಮಾತನಾಡಿದರು. ಓಂಕಾರದ ಸಾಮೂಹಿಕ ಪಠಣೆಯೊಂದಿಗೆ ಧ್ಯಾನವನ್ನು ಮಾಡಲಾಯಿತು.

ಯೋಗಿನಾರೇಯಣ ಮಠ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ. ಸತ್ಯನಾರಾ ಯಣ್, ನಿವೃತ್ತ ಐ.ಎ.ಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಮಠದ ವ್ಯವಸ್ಥಾಪಕ ಕೆ.ಲಕ್ಷ್ಮೀನಾರಾ ಯಣ್ ಹಾಗೂ ಧ್ಯಾನಾಸಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.