Chikkaballapur News: ಸರ್ಕಾರದ ನೀತಿ ವಿರುದ್ಧ ಡಿ.21ರಂದು ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಸಿಪಿಐಎಂ ಪ್ರತಿಭಟನೆ
ರಾಜ್ಯ ಮಟ್ಟದ ಅಂದೋಲನದಲ್ಲಿಸುಮಾರು೧೦ ಲಕ್ಷಮಂದಿಗೆ ತಲುಪುವಂತೆ 'ನವೆಂಬರ್ ೧ರಿಂದ ಡಿಸೆಂಬರ್ ೧೫ರವರೆಗೆ ಆಯೋಜಿಸಿದ್ದ ಪರ್ಯಾಯ ರಾಜಕಾರಣಕ್ಕಾಗಿ ಸಿಪಿಎಂ ಜನದನಿ ರ್ಯಾಲಿ ವೇಳೆ ರಾಜ್ಯದ ಮನೆ-ಮನೆಗೆ ಭೇಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಲಾಗಿದೆ
-
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪರ್ಯಾಯ ರಾಜಕಾರಣಕ್ಕಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ವಾದಿ) ವಿವಿಧ ಬೇಡಿಕೆಗಳ ಹಕ್ಕೋತ್ತಾಯಕ್ಕಾಗಿ ಮನೆ ಮನೆ ಭೇಟಿ ಸಹಿ ಸಂಗ್ರಹದೊAದಿಗೆ ಡಿ.21ರ ಭಾನುವಾರ ಬೆಂಗಳೂರಿನ ಸ್ವಾತಂತ್ಯ ಉದ್ಯಾನ ವನದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿಪಿಐ ಎಂ ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ಧಗಂಗಪ್ಪ ತಿಳಿಸಿದರು.
ನಗರದ ಸಿಪಿಐಎಂ ನ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಮಟ್ಟದ ಅಂದೋಲನದಲ್ಲಿಸುಮಾರು 10 ಲಕ್ಷ ಮಂದಿಗೆ ತಲುಪುವಂತೆ 'ನವೆಂಬರ್ ೧ರಿಂದ ಡಿಸೆಂಬರ್ 15ರವರೆಗೆ ಆಯೋಜಿಸಿದ್ದ ಪರ್ಯಾಯ ರಾಜಕಾರಣಕ್ಕಾಗಿ ಸಿಪಿಎಂ ಜನದನಿ ರ್ಯಾಲಿ ವೇಳೆ ರಾಜ್ಯದ ಮನೆ-ಮನೆಗೆ ಭೇಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಅಂದೋಲನದಲ್ಲಿ ಸುಮಾರು 10 ಲಕ್ಷ ಮಂದಿಗೆ ತಲುಪುವಂತೆ ಮನೆ ಮನೆಗೆ ಭೇಟಿ ನೀಡಿ ಕೇಂದ್ರ-ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ದ ಜಾಗೃತಿ ಮೂಡಿಸಲಾಗು ವುದು, ಪ್ರತಿಭಟನಾ ರ್ಯಾಲಿಯಲ್ಲಿ ಸುಮಾರು ೨೫ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ರೈತರ ಆತ್ಮಹತ್ಯೆ: ರಾಜ್ಯ ಸಮಿತಿ ಸದಸ್ಯ ಎಂ,ಪಿ, ಮುನಿವೆಂಕಟಪ್ಪ ಮಾತನಾಡಿ, ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಸುಮಾರು 2500ಕ್ಕೂ ಹೆಚ್ಚು ರೈತರು ಕೃಷಿ ಬಿಕ್ಕಟ್ಟಿನಿಂದ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ರಾಜ್ಯ ಸರ್ಕಾರಗಳು ಬಜೆಟ್ ಮಂಡನೆಯಲ್ಲಿ ಕೃಷಿ ಹಾಗೂ ರೈತರನ್ನು ಕಡೆಗಣಿಸಿ ಕಾರ್ಪೋರೇಟ್ ಕೃಷಿಗೆ ಒತ್ತು ಹಾಕುತ್ತಿರುವ ಹಿನ್ನೆಲೆಯಲ್ಲಿ ರೈತರು ಹಾಕಿರುವ ಬಂಡವಾಳ ವಾಪಸ್ಸಾಗದೆ ನಷ್ಟಕ್ಕೆ ಸಿಲುಕಿದ ಸ್ವಾಭಿಮಾನಿಗಳು ಪರ್ಯಾಯವಸ್ಥೆಗಳಿಲ್ಲದೆ ಆತ್ಮಹತ್ಯೆಗೆ ಶರಣಾಗುವಂತಾಗಿದೆ ಎಂದು ವಿಷಾಧಿಸಿದರು.
ಕಳೆದ 2022ರಲ್ಲಿ ಬರಗಾಲವಿತ್ತು. 2023-24ರಲ್ಲಿ ಅತಿವೃಷ್ಟಿಯಿಂದಾಗಿ ಸತತ ನಷ್ಟಕ್ಕೆ ಒಳಗಾದ ರೈತರಿಗೆ ಸಾಲಗಾರರಿಂದ ಸಹಿಸಲಾಗದ ಅಪಮಾನಕ್ಕೆ ಗುರಿಯಾದ ಸ್ವಾಭಿಮಾನಿರೈತ ಆತ್ಮಹತ್ಯೆ ಯೊಂದೇ ಮಾರ್ಗ ವೆಂಬ ಭಾವನೆಯಲ್ಲಿ ಸಾವನ್ನಪ್ಪಿರುವುದು ದುರಂತದ ಸಂಗತಿಯಾಗಿದೆ. ಬಂಡವಾಳ ಶಾಹಿಗಳು ರೈತರಿಗೆ ಕೃಷಿ ಭೂಮಿ ಇಲ್ಲದಂತೆ ಕೈಗಾರಿಕೆಗಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಖರೀದಿಸಿದ್ದಾರೆ. ಈ ಪೈಕಿ ಶೇ.40ರಷ್ಟು ಮಾತ್ರ ಕೈಗಾರಿಕೆಗೆ ಬಳಸಿಕೊಂಡಿದ್ದಾರಷ್ಟೇ ಎಂದರು.
ಕೃಷ್ಣಾ ನೀರು ಪಡೆಯುವಲ್ಲಿ ವಿಫಲ: ರಾಜ್ಯದಲ್ಲಿ ತಮ್ಮ ಪಾಲಿನ ನೀರನ್ನು ಸದ್ಬಳಿಸಿಕೊಳ್ಳು ವಲ್ಲಿ ವಿಫಲವಾಗಿರುವ ಸರ್ಕಾ ರವು ನಮ್ಮ ಜಿಲ್ಲೆಗೆ ಕೊಳಚೆ ನೀರಿಗೆ ಕೋಟ್ಯ ತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಕೃಷ್ಣನದಿ ನೀರು ಪಡೆಯುವಲ್ಲಿ ವಿಫಲವಾಗಿದೆ. ಅವೈಜ್ಞಾನಿಕ ಯೋಜನೆಗಳಿಗೆ ಸಾವಿರಾರು ಕೋಟಿ ದುರ್ಬಳಿಸಿಕೊಂಡಿದೆ. ಕೇಂದ್ರ ಸರ್ಕಾ ರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಹೊಂದಿದ್ದು ತಾರತಮ್ಯ ಮಾಡುತ್ತಿರುವುದು ಅನ್ಯಾಯದ ಪರಮಾವಧಿ ಯಾಗಿದೆ ಎಂದು ದೂರಿದರು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಗಳ ಕೊರತೆ ವ್ಯಾಪಕವಾಗಿದೆ. ಮುಂದಿನ ಬಜೆಟ್ ನಲ್ಲಾದರೂ ರಾಜ್ಯದಲ್ಲಿನ ೨.೫ ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಸಮಿತಿ ಸದಸ್ಯ ರಘುರಾ ಮರೆಡ್ಡಿ, ಜಿಲ್ಲಾ ಸಮಿತಿ ಸದಸ್ಯ ಬಿ,ಎನ್ ಮುನಿಕೃಷ್ಣಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಚನ್ನರಾಯಪ್ಪ , ಶ್ರೀನಿವಾಸ ಇದ್ದರು.